ಕಾತಾ ನಕಲು ಮುಟ್ಟೇಶನ್‍ಗಳ ಬಾಕಿ ಇರುವ ಕಡತ ಶೀಘ್ರವಿಲೇವಾರಿಗೆ ಆಗ್ರಹ

 

e-ಸುದ್ದಿ, ಮಸ್ಕಿ
ಸುಮಾರು 100 ಕ್ಕೂ ಹೆಚ್ಚು ಜನರ ಕಾತಾ ನಕಲು ಮತ್ತು ಮುಟೇಶ್‍ನ ಕಡತಗಳು ಕೊಳೆಯುತ್ತಿದ್ದು ಕೂಡಲೇ ಶೀಘ್ರ ವಿಲೇವಾರಿ ಮಾಡಿ ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಪುರಸಭೆ ಸದಸ್ಯ ರವಿಗೌಡ ಪಾಟೀಲ ಒತ್ತಾಯಿಸಿದರು.
ಪಟ್ಟಣದ ಎಪಿಎಂಸಿಯ ಪುರಸಭೆ ಕಚೇರಿಯಲ್ಲಿ ಶನಿವಾರ ಸಾಮಾನ್ಯ ಸಭೆ ಪುರಸಭೆ ಅಧ್ಯಕ್ಷೆ ವೀಜಯಲಕ್ಷ್ಮೀ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಮುಖ್ಯಾಧಿಕಾರಿ ರಡ್ಡಿರಾಯನಗೌಡ ಮಾತನಾಡಿ ಇನ್ನು ಒಂದು ವಾರದೊಳಗೆ ಎಲ್ಲಾ ಕಡತಗಳನ್ನು ವಿಲೇವಾರಿ ಮಾಡಲಾಗುವದು ಎಂದು ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ 813 ಮನೆಗಳಿಗೆ ಅಕ್ರಮ ನಳ ಸಂಪರ್ಕ ಕಲ್ಪಿಸಲಾಗಿದೆ. ಅವುಗಳನ್ನು ಸಕ್ರಮ ಮಾಡಿ ಜನರಿಗೆ ಅನೂಕೂಲ ಮಾಡಿಕೊಡುವ ಹಿತದೃಷ್ಠಿಯಿಂದ 2560 ರೂಪಾಯಿಗಳನ್ನು ಕಟ್ಟಿಸಿಕೊಂಡು ಸಕ್ರಮ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ವಾಣಿಜ್ಯ ಬಳಕೆಗೆ ಸಂಪರ್ಕ ತೆಗೆದುಕೊಂಡಿರುವ ನಳಗಳಿಗೆ ಎರಡಷ್ಟು ತೆರಿಗೆ ಹಾಕಲಾಗುವುದು ಎಂದು ಪುರಸಭೆ ಅಧ್ಯಕ್ಷೆ ವೀಜಯಲಕ್ಷ್ಮೀ ಪಾಟೀಲ್ ಹೇಳಿದರು.
ವಾಗ್ವಾದ: ಪುರಸಭೆ ಸದಸ್ಯ ಸುರೇಶ ಹರಸೂರು ಮಾತನಾಡಿ ತೆರಿಗೆ ವಸೂಲಿ ಮಾಡಲು ಸಿಬ್ಬಂದಿ ಮತ್ತು ಕೆಲ ಪೌರಕಾರ್ಮಿಕರು ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಂತವರನ್ನು ಇಲ್ಲಿಂದ ಬಿಡುಗಡೆಗೊಳಿಸಿ ಎಂದರು. ಇದಕ್ಕೆ ಮದ್ಯಪ್ರವೇಶಸಿದ ಪುರಸಭೆ ಮಾಜಿ ಅಧ್ಯಕ್ಷ ಮೌನೇಶ ಮುರಾರಿ ಪೌರಕಾರ್ಮಿಕರು ಪ್ರತಿದಿನ ಕೇಲಸ ಮಾಡುತ್ತಿರುವುದರಿಂದಲೇ ಪಟ್ಟಣ ಇಷ್ಟೊಂದು ಸ್ವಚ್ಛವಾಗಿರುವುದು ಎಂದು ವಾಗ್ವದ ನಡೆಸಿದರು.
ಪುರಸಭೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಸಿಬ್ಬಂದಿಗಳನ್ನು ಇಲ್ಲಿಂದ ಬಿಡುಗಡೆಗೊಳಿಸಲು ಸಭೆಯ ಎಲ್ಲಾ ಸದಸ್ಯರು ಒಪ್ಪಿಗೆ ನೀಡಿದರು. ಯಾವುದೇ ಕೆಲಸಗಳಾಗಲಿ ನಿಗದಿತ ಅವಧಿಯೊಳಗೆ ಆಗುವಂತೆ ನೋಡಿಕೊಳ್ಳುತ್ತೇನೆ ಎಂದು ಮುಖ್ಯಾಧಿಕಾರಿ ರಡ್ಡಿರಾಯನಗೌಡ ಸಭೆಯಲ್ಲಿ ಭರವಸೆ ನೀಡಿದರು.
ಇನ್ನು ಮುಂದೆ ಸಕಾಲ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿ 12 ಕ್ಕೂ ಅಧಿಕ ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ಮುಖ್ಯಾಧಿಕಾರಿ ರಡ್ಡಿರಾಯನಗೌಡ ತಿಳಿಸಿದರು.
ಪುರಸಭೆ ವ್ಯಾಪ್ತಿಯ ಸ್ಮಶಾನದ ಹತ್ತಿರ ಕೆಆರ್‍ಡಿಐಎಲ್‍ನರು ಕಾಮಗಾರಿಗಳನ್ನು ಬೇಕಾಬಿಟ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಹೇಳೋರೊ ಕೇಳೊರೊ ಯಾರು ಎಂದು   ಸದಸ್ಯರು ಪ್ರಶ್ನಿಸಿದರು.

ರಡ್ಡಿರಾಯನಗೌಡ ಮಾತನಾಡಿ ಈ ಹಿಂದೆ ಸದಸ್ಯರ ಒಪ್ಪಿಗೆಯಂತೆ ಕಾಮಗಾರಿಗಳನ್ನು ಅವರಿಗೆ ನೀಡಿದ್ದೇವೆ. ಆದರೆ ಕಾಮಗಾರಿಗು ಕಳಪೆ ಕಂಡುಬಂದರೆ ಮರು ಕಾಮಗಾರಿ ಮಾಡುವಂತೆ ಅವರಿಗೆ ಸೂಚಿಸಲಾಗುವುದು. ಅಲ್ಲದೇ ಮುಂದಿನ ದಿನಗಳಲ್ಲಿ ಅವರಿಗೆ ಯಾವುದೇ ಕಾಮಗಾರಿ ನೀಡುವುದಿಲ್ಲ ಎಂದು ತಿಳಿಸಿದರು.

ಸದಸ್ಯರ ಮನವಿ: ಮಸ್ಕಿ ಪಟ್ಟಣದಲ್ಲಿ ಕಳೆದ ಗ್ರಾಪಂ ಅವಧಿಯಲ್ಲಿ ವಾಸದ ಉದ್ಧೇಶಕ್ಕಾಗಿ ಭೂ ಪರಿವರ್ತನೆಯಾಗಿ ಟೌನ್ ಪ್ಲಾನಿಂಗ್ ಅನುಮೊಧನೆ ಪಡೆಯದ ಬಡಾವಣೆಗಳಿಗೆ ಏನಾದರೂ ಮಾಡಿ ಅದಕ್ಕೆ ಕಾತಾ ನಕಲುಗಳನ್ನು ಕೊಡಿ ಮಾಲೀಕರು ಮಾರಾಟ ಮಾಡಿದ್ದಾರೆ. ಇದರಿಂದ ಜನರಿಗೆ ತೊಂದರೆ ಆಗುತ್ತದೆ. ಅಲ್ಲದೇ ಇಷ್ಟು ದಿನಗಳನ್ನು ಎಲ್ಲಾ ತೆರಿಗೆಗಳನ್ನು ಜನರು ಪಾವತಿ ಮಾಡಿದ್ದಾರೆ ಎಂದು ಸದಸ್ಯರು ತಿಳಿಸಿದರು.


ಅಕ್ರಮ ಬಡವಾಣೆಗಳು ಃ ಪಟ್ಟಣದಲ್ಲಿ 38 ಬಡಾವಣೆಗಳಿವೆ. ಇದರಲ್ಲಿ ಕೆಲವೊಂದು ಬಡಾವಣೆಗಳು ನಿಯಮಗಳನ್ನು ಉಲ್ಲಂಘಿಸಿ ನಿಯಮಕ್ಕಿಂತ ಹೆಚ್ಚು ನಿವೇಶನಗಳನ್ನು ಸೃಷ್ಠಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅಕ್ರಮ ಬಡಾವಣೆಗಳನ್ನು ಗುರಿತಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಮುಖ್ಯಾಧಿಕಾರಿ ರಡಿರಾಯನಗೌಡ ಸಭೆಗೆ ಮಾಹಿತಿ ನೀಡಿದರು.
ಸರ್ಕಾರದ ಕಾನೂನು ಉಲ್ಲಂಘಸಿ ಬಡಾವಣೆ ನಿರ್ಮಿಸಿದ್ದರೆ ಅದು ನಮ್ಮ ಹಂತದಲ್ಲಿ ಏನೂ ಮಾಡಲು ಸಾದ್ಯವಿಲ್ಲ. ಗಾಂವ್‍ಠಾಣಾಗಳಲ್ಲಿನ ಜಾಗಗಳಿಗೆ ತಹಸೀಲ್ದಾರ್ ಅವರ ಆದೇಶವಿದ್ದರೆ ಅವುಗಳಿಗೆ ನಾವು ದಾಖಲಾತಿಗಳನ್ನು ನೀಡುತ್ತೆವೆ. ಪುರಸಭೆ ವ್ಯಾಪ್ತಿಯಲ್ಲಿ ಕಸ ಹಾಕಲು ಸ್ಥಳದ ಅಭಾವವಿರುವುದರಿಂದ ವಿಲೇವಾರಿ ಮಾಡಲು ಸಮಸ್ಯೆಯಾಗುತ್ತಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.
ಪುರಸಭೆ ಉಪಾಧ್ಯಕ್ಷೆ ಕವಿತಾ ಮಾಟೂರು, ಪುರಸಭೆ ಸದಸ್ಯರಾದ ಎಂ.ಅಮರೇಶ, ನೀಲಕಂಠಪ್ಪ ಭಜಂತ್ರಿ, ಮೌನೇಶ ಮುರಾರಿ, ಮಾಹಾಂತೇಶ ಪಾಟೀಲ್, ರಂಗಪ್ಪ ಅರಿಕೇರಿ, ರೇಣುಕಾ ಉಪ್ಪಾರ, ಪುಷ್ಪಾ ಸೊಪ್ಪಿಮಠ, ಪೂನಂ ಮಾಲಿಪಾಟೀಲ, ದೇವಣ್ಣ ನಾಯಕ, ಆಂಜಿನೆಯ್ಯ, ಪುರಸಭೆಯ ಸಿಬ್ಬಂದಿಗಳಾದ ಮಾನ್ಯೇಜರ್ ಸತ್ಯನಾರಾಯಣ, ಎಂಜಿನಿಯರ್ ಮೀನಾಕ್ಷಿ, ಜಗದೀಶ, ಶಿವಣ್ಣ, ರಾಘವೇಂದ್ರ ಕುಲಕರ್ಣಿ ಸೇರಿದಂತೆ ಇತರರು ಇದ್ದರು.

 

Don`t copy text!