ಗ್ರಾಮೀಣ ಪ್ರತಿಭೆಗಳ ‘ತನುಜಾ’ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದ ಡಾ. ಗುರುಮಹಾoತ ಸ್ವಾಮೀಜಿ…


e-ಸುದ್ದಿ ಇಳಕಲ್

ತಾಲೂಕಿನ ಹಿರೇಓತಗೇರಿ ಗ್ರಾಮದ ಯುವ ಪ್ರತಿಭೆ ಅನೀಲ್ ಹೊಸಮನಿ ಅವರ ಸಹಾಯಕ ನಿರ್ದೆಶನದ ತನುಜಾ ಚಲನಚಿತ್ರ ಪ್ರದರ್ಶನ ಇಳಕಲ್ ನಗರದ ಓಂಕಾರ ಚಿತ್ರಮಂದಿರದಲ್ಲಿ ನಡೆಯಿತು.

ವಿದ್ಯಾರ್ಥಿ ಒಬ್ಬಳು ಗೋವಿಂದ ಸಂದರ್ಭದಲ್ಲಿ ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸಿದ ತನುಜಾ ಚಿತ್ರವು ಹಾಗೂ ಆ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ಸಹಾಯ ಹಸ್ತ ಚಾಚಿದ ನೈಜ ಕಥಾನಕದ ಕುರಿತಾದ ಈ ಚಲನಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಯಶಸ್ವಿ ಪ್ರದರ್ಶನ ಕಾಣುತ್ತಿರುವ ತನುಜ ಚಿತ್ರ ಇಂದು ಇಲ್ಕಲ್ ನಗರದ ಓಂಕಾರ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿತು

ಇಳಕಲ್ ನಗರದ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಎಸಿ ಓ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರದರ್ಶನವನ್ನು ವೀಕ್ಷಿಸಿದರು

ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಇಳಕಲ್ ಶ್ರೀಮಠದ ಪೂಜ್ಯ ಗುರು ಮಹಾಂತ ಶ್ರೀಗಳು ಸಹ ಸಂಪೂರ್ಣ ಚಿತ್ರ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಎಸಿಓ ಶಾಲಾ ಶಿಕ್ಷಕರು ಆಡಳಿತ ಮಂಡಳಿ ಸದಸ್ಯರು, ಇಳಕಲ್ ಸ್ನೇಹರಂಗ ಹವ್ಯಾಸಿಕಲಾ ಸಂಸ್ಥೆಯ ಸದಸ್ಯ ಮಹಾಂತೇಶ್ ಗಜೇಂದ್ರಗಡ
ಅಕ್ಕನ ಬಳಗದ ಹಿರಿಯ ಸದಸ್ಯರು ಚಿತ್ರದ ಸಹ ನಿರ್ದೇಶಕ ಅನಿಲ್ ಹೊಸಮನಿ ಅವರನ್ನು ಶಾಲುವದಿಸಿ ಸತ್ಕರಿಸಿ ಸ್ಥಳೀಯ ಪ್ರತಿಭೆಗೆ ಅಭಿನಂದಿಸಿ ಪ್ರೋತ್ಸಾಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!