ಯಾರಿಗೆ ಯಾರೋ

ಯಾರಿಗೆ ಯಾರೋ

ಯಾರಾರೋ ಹೇಳಿದ್ದು
ಯಾರಾರೋ ಮಾಡಿದ್ದು
ಬಲು ಹೆಮ್ಮೆಯಿಂದ
ಬಲು ಬೇಗ ಬೇಗ
ಫಾರ್ವರ್ಡ
ಮಾಡ್ತೀವೋ ನೋಡೊ

ನಮ್ಮವರೇ ಹೇಳಿದ್ದು
ನಮ್ಮವರೇ ಮಾಡಿದ್ದು
ತೆರೆಯದೆ
ನೋಡದೆ
ತೋಳ ಪ್ರೀತಿ ನೂಕುವೇವು
ನೋಡೊ

ಯಾಕೀ ಭಾವ
ಯಾಕೀ ಅನ್ಯಾಯ
ತೆರೆದುಕೋಂಡು
ನೋಡೊ
ನಿನ್ನೋಳಗೆ ನೀನು
ನಿನ್ನ ಮನವ

ಜಯ ಹುನಗುಂದ ಮೆಲ್ಬೋರ್ನ್ ಆಸ್ಟ್ರೇಲಿಯಾ

Don`t copy text!