ಗಝಲ್.
ಹಳದಿ ಹೂಗಳ ಮಧ್ಯೆ ಕುಳಿತು ಅದೇನೋ ನೋಡುತಿದೆ ಹಕ್ಕಿ.
ಬೆಳೆದ ಗಿಡದ ಕೊಂಬೆಗೆ ಗೂಡನು ಕಟ್ಟುತ ಹಾಡುತಿದೆ ಹಕ್ಕಿ
ಕಾಡಿನ ಸೊಬಗ ಕಂಡು ವಿಹಗ ಸೋಜಿಗವಾಗಿಹೆಯೆನು
ನಾಡಿನ ದಾರಿಯ ಅರಿಯದೆ ಸಂಕಟ ಪಡುತಿದೆ ಹಕ್ಕಿ
ಮಾಮರದ ತಂಪಿನ ಗಾನವ ಕೇಳುವುದು ಬಲು ಇಂಪಲ್ಲವೆ
ಚಾಮರದಿ ಬೀಸುವ ಗಾಳಿಗೆ ಉಯ್ಯಾಲೆ ಆಡುತಿದೆ ಹಕ್ಕಿ
ಕನಸ ಕಂಗಳಲಿ ಆಸೆಯ ಚಿತ್ತವ ಹೊತ್ತು ಮೈಮರೆತಿದೆ.
ಮನಸು ಮಾಗದೆ ಎತ್ತಣ ಸಾಗುವ ಚಿಂತೆ ಕಾಡುತಿದೆ ಹಕ್ಕಿ
ಹಸಿರು ತೋರಣ ತಳೆದ ಎಲೆಗಳ ಪಿಸುಮಾತು ಕೇಳೆ ಜಯಾ
ಉಸಿರು ಬಿಗಿ ಹಿಡಿದು ಕಳೆದ ತುಸು ಮಧುರತೆ ಬೇಡುತಿದೆ ಹಕ್ಕಿ
-ಜಯಶ್ರೀ ಭ ಭಂಡಾರಿ.
ಬಾದಾಮಿ.