ಮಟ್ಕಾ
ಊರ ಊರಿಗೆ
ಮಟ್ಕಾ ಅಡ್ಡಗಳ ಮುಂದ
ಹಿರಿಕಿರಿಯರು ಆಡುವರು ಖಷಿಯಿಂದ
ಲಕ್ಷಾಧೀಪತಿ ಆಗುವೆನೆಂದು
ನಂಬರ ಹಚ್ಚುತ್ತ ಹೋಗುವರು
ಕುರಿಗಳಂತೆ
ಹಣ ಕಳೆದುಕೊಂಡು
ಆಗುವನು ಕಡಗದಂಗ
ತುತ್ತು ಅನ್ನಕ್ಕಾಗಿ ಮಡದಿ ಮಕ್ಕಳ
ಪರಿತಪಿಸುವರು ಇವನ ಮುಂದೆ
ಆಶೆಯ ಗುದರೆಯೇರಿ
ಮಟ್ಕಾದ ಝಟಕದಿಂದ
ಹೊಲ ಮನೆ ಮಾರಿ ಆದ ಮಂಗ
ಮಾನ ಮರ್ಯಾದೆಗಾಗಿ
ಹಗ್ಗಕ್ಕೆ ಕೊರಳೊಡ್ಡಿ ಸೇರಿ ಯಮಲೊಕ
ಕೆಟ್ಟವರ ಸಂಗ
ಯಾಕಪ್ಪಾ ಬಂತು ಮಟ್ಕಾ ದಾಟ
ನಿಮ್ಮ ದೇಶಕ್ಕೆ ಇಂದು
ಸಾಕಪ್ಪಾ ಸಾಕು
ಆಡಬೇಡಿ ಯಾರೂ ಇನ್ನ ಮುಂದ
ಜಯದೇವಿ ಆರ್ ಯದಲಾಪೂರೆ ಬೀದರ