ಬಸವಾದಿ ಶರಣರು ಕೊಟ್ಟ ಸಂವಿಧಾನಾತ್ಮಕ ಅಂಶಗಳು

ಬಸವಾದಿ ಶರಣರು ಕೊಟ್ಟ ಸಂವಿಧಾನಾತ್ಮಕ ಅಂಶಗಳು

ಪ್ರಜೆಗಳಿಗೆ ಆಂತರಿಕ ಸ್ವಾತಂತ್ರ್ಯ ಕಲ್ಪಿಸುವ ನಾಗರಿಕ ಹಕ್ಕುಗಳು 12ನೇ ಶತಮಾನದಲ್ಲಿ ಬಸವಾದಿ ಶರಣರು ಕಟ್ಟ ಹೊರಟಿದ್ದ ಹೊಸ ಸಮಾಜ ವ್ಯವಸ್ಥೆಯಲ್ಲಿ ಬರಿ ಹಕ್ಕುಗಳಾಗಿಯೇ ಅಲ್ಲ. ಕರ್ತವ್ಯಗಳ ರೂಪದಲ್ಲೂ ಇದ್ದವು,

ಅಷ್ಟೇ ಅಲ್ಲದೆ ಅವು ಕೇವಲ ಲಿಖಿತ ರೂಪದ ಹಕ್ಕುಗಳು ಮಾತ್ರವಾಗಿರದೆ ಕ್ರಿಯಾ ರೂಪದ ಆಚರಣೆಯಲ್ಲೂ ಕೂಡ ಕಂಡಿದ್ದವು.

ಶರಣರ ವಚನಗಳಲ್ಲಿ ಕ್ರಿಯಾ ರೂಪದ ಈ ಹಕ್ಕುಗಳನ್ನು ಸ್ಪಷ್ಟವಾಗಿ ನಾವು ಗುರುತಿಸಬಹುದು.

೧. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು.
೨. ನಿರಾಯುಧರಾಗಿ ಶಾಂತಿಯುತ ಸಭೆ ನಡೆಸುವ ಸ್ವಾತಂತ್ರ್ಯದ ಹಕ್ಕು.
೩. ಸಂಘ ಅಥವಾ ಸಂಸ್ಥೆಗಳ ಸ್ಥಾಪಿಸುವ ಸ್ವಾತಂತ್ರ್ಯದ ಹಕ್ಕು.
೪.ಭಾರತ ರಾಜ್ಯ ಕ್ಷೇತ್ರದಲ್ಲಿ ಆಭಾದಿತವಾಗಿ ಸರ್ವತ್ರ ಸಂಚಾರ ಮಾಡುವ ಸ್ವಾತಂತ್ರ್ಯದ ಹಕ್ಕು.
೫. ಭಾರತ ರಾಜ್ಯ ಕ್ಷೇತ್ರದ ಯಾವುದೇ ಭಾಗದಲ್ಲಿ ವಾಸ ಮಾಡುವ ನೆಲೆಸುವ ಸ್ವಾತಂತ್ರ್ಯದ ಹಕ್ಕು.

ಹೀಗೆ ಮುಂದೆ…….

ಸಂವಿಧಾನದ ಕಲಮಿನ ಪ್ರಕಾರ ಭಾರತದ ಎಲ್ಲಾ ನಾಗರಿಕರು ಈ ಮುಂದೆ ಹೇಳಲಾಗುವ ಹಕ್ಕುಗಳನ್ನು ಹೊಂದಿದ್ದಾರೆ…. ಎಂದು ಕೂಡ ಭಾರತವು ಸಂವಿಧಾನದ 19ನೆಯ ಕಮಲಿನ ಮೂಲಕ ತನ್ನ ಸಮಸ್ತ ಪ್ರಜೆಗಳಿಗೆ ಸಮಾನವಾದ ಹಕ್ಕುಗಳನ್ನು ಕಲ್ಪಿಸಿತು.

1.Right to freedom of speech and expression.
2. right to assemble peaceably and without arms.
3. right to form associations or union .
4.right to move freely throught the territory of India .
5.right to reside and settle in any part of the territory of India.
6. right to acquire hold and dispose of property.
7.Right to practice any profession or to carry on any occupation trade or business.

ಈ ಎಲ್ಲ ಹಕ್ಕುಗಳನ್ನು ಕೊಡ ರಚನೆ ಮಾಡಿದ ಸಂವಿಧಾನ ತನ್ನ 21ನೆಯ ಕಲಮಿನ “production of life and personal liberty” ಎಂಬ ವಿಷಯದ ಅಡಿಯಲ್ಲಿ “no person shall be deprived of his life or personal liberty expect according to the procedure established by law ” ಎಂಬ ಕಾಯದೆಯನ್ನು ಮಾಡಿದೆ.

ಇದೇ ರೀತಿ ಸಮಾಜದ ವಿವಿಧ ಸ್ಥಳಗಳಲ್ಲಿ ದುಡಿದುಂಡು ಜೀವಿಸುತ್ತಿದ್ದ ಸಾಮಾನ್ಯ ಜನ ಕೂಡ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಾ ತಮ್ಮ ಸ್ವಾತಂತ್ರ್ಯದ ಬಗ್ಗೆ ಅರಿವನ್ನು ಹೊಂದಬೇಕು.

 

ಮೇನಕಾ ಪಾಟೀಲ್ ಬೀದರ್

Don`t copy text!