ಕವಿತೆ- ಸಂತೃಪ್ತಿ
ಗರಿ ಬಿಚ್ಚಿ ಹಾರುತಿವೆ ಕವಿ ಮನ
ಸುಸಂಸ್ಕೃತಿಗಳ ಭಾವನೆ ಒಂದರ ಮೇಲೊಂದರಂತೆ ,
ತರ ತರದಲಿ ಬಿಚ್ಚಿ ನಿಚ್ಚಳವಾಗಿ ತೆರೆದಿಟ್ಟ ಸತ್ಯ ಸಂಗತಿಗಳ ಭಾವನೆಗಳು ಅದಕಂಚಿ ,
ಹೊಂದಿಕೆ ಮಾಡು ಭರವಸೆಗಳು
ಹಾಳೆಗಳ ಮೈ ಮೇಲೆ ಗೀಚೀದಾಕ್ಷರಗಳು ನಾಚುತಿವೆ ಪುಟ ತಿರುವಿದಾಗೊಮ್ಮೆ ,
ಕನಸೋ ನನಸೋ ಗೊತ್ತಾಗಲಿಲ್ಲ ಒಮ್ಮೊಮ್ಮೆ ಹಾಳೆಗಳಲಿ ಮೂಡಿಸಿದ ಭಾವನೆಗಳು ಮೈಗೂಡಿಸಿದಾಗ ಹಿಂಪುಟವ ತಿರುವಿದಾಗ ಅದೇಷ್ಟು ದಿನಗಳು ಕಳೆದವೋ ಗೊತ್ತಾಗಲಿಲ್ಲ ,
ದಿನ ಬೆಳಗು ಮುಂಜಾವಿನ ಕೋಗಿಲೆ ಮತ್ತೆ ಹಾಡುವ ಹಾಗೆ ಭಾಸವಾಯಿತು ಅರಚಿದವೋ ಕಿರುಚಿದವೋ ಹಾಡಿದವೋ ಗೊತ್ತಾಗಲಿಲ್ಲ ,
ಹೊರ ಬಂದ ತೊಳಲಾಟಕೆ ಹಾಗೆ ಹೊರಟಿತ್ತು ಉಸಿರು
ಹಲವು ರೋಗ ರುಜಿನಗಳಿದ್ದರು ಉಸಿರಾಟದ ತೊಂದರೆಯೇನಿಲ್ಲದಂತೆ ,
ಮೂಕ ಹಾಡಿದ್ದ ಧ್ವನಿ ಕೇಳಿ ಮನ ಅನಿವಾರ್ಯತೆಯ ಸಂತೃಪ್ತ ಭಾವನೆ ಹೊತ್ತು .
ರಚನೆ -ಶಾಂತಪ್ಪ ಬೆಲ್ಲದ
ನಿವೃತ್ತ ಎ ಎಸ್ ಐ ಗಂಗಾವತಿ .