ಅಡುಗೆ ಬೆಡಗು
ಅಡುಗೆ ಉಡುಗೆ ಇವೆರಡು ಅತ್ಯವಶ್ಯ ನೋಡಿ,ಉಡುಗೆ ಮಾನ ಮುಚ್ಚಿದರೆ ಅಡುಗೆ ಹೊಟ್ಟೆಯ ಹಸಿವನು ಹಿಂಗಿಸುವುದು, ಹಸಿವು ಮತ್ತು ಬದುಕು, ಹಸಿವು ನೀಗಿಸುವ ಸಲುವಾಗಿ ದುಡಿಯುವ ಮಾರ್ಗ ಕೈ ಗೊಂಡು ಮೂರು ಒಪ್ಪತ್ತು ಊಟಕ್ಕೆ ಎಷ್ಟೆಲ್ಲಾ ಪರದಾಟ,ಪರರಕಾಟ ತಾಳಿಕೊಂಡು ಈ ಹಸಿವೆಂಬ ಹೆಬ್ಬಾವು ಬಸಿರ ಬಂದು ಸಿಡಿಲಿಗೆ ವಿಷವೇರಿತ್ತಯ್ಯ ಅಪಾದಮಸ್ತಕಕ್ಕೆ
ಹಸಿವಿಗನ್ನವನಿಕ್ಕಿ ವಿಷವನಿಳುಡಬಲ್ಲಡೆ
ವಸುಧೆಯೊಳಗೆ ಆತನೆ ಗಾರುಡಿಗ ಕಾಣಾ ರಾಮನಾಥ ಎನ್ನುವ ಜೇಡರ ದಾಸಿಮಯ್ಯ ವಚನ ಈ ಹಸಿವೆಂಬ ಹೆಬ್ಬಾವು ಏನೆಲ್ಲಾ ಪಜೀತಿಗೆಬ್ಬುಸುತ್ತದೆ ಒಂದೊಂದು ಸಲ,
ಹಸಿವೆಂಬ ಹೆಬ್ಬಾವು ಹುಸಿಯ ನುಡಿಸಿ ಉಸಿರು ಬಿಡಲು ನಿರಾಳವಾಗಿ ಬದುಕಲು ಅಡಿಗೆ ಸವಿರುಚಿಯ ತರಾವರಿಯ ಅಡುಗೆಮನೆ ತಿಂಡಿಗಳು ಪೌಷ್ಟಿಕ ಆಹಾರ ಮತ್ತು ಆರೋಗ್ಯ ಪೂರ್ಣವಾಗಿದ್ದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು,
ಕೆಲವೊಂದು ಕಡೆ ಹಲವು ಬಗೆಯ ಭೌಗೋಳಿಕಗನುಗುಣವಾಗಿ ದೊರೆಯುವ ದವಸ ಧಾನ್ಯಗಳು ಹಾಗೂ ಮಾಡುವ ವಿಧಾನ ಹತ್ತು ಹಲವು,ಹೇಳುವ ಪ್ರಕಾರ ವು ಬೇರೆ ಬೇರೆ ಇರುತ್ತದೆ,
ಕೆಲವೊಂದು ಕಡೆ ಶಿರಾ ಅಂದ್ರೆ, ಮತ್ತೊಂದು ಕಡೆ ಕೇಸರಿಬಾತ್,ಅಂತಾರೆ ಬೆಳಿಗ್ಗೆ ನಾಷ್ಟಾ, ಟಿಫಿನ್ ಅಂತ ಕೆಲವು ಕಡೆ, ತಿಂಡಿ ಅಂತಾ ಬೆಂಗಳೂರು ಮೈಸೂರು ಕಡೆ,
ಈ ಅಡುಗೆ ಮಾಡುವ ಕಲೆ ಸಾಮಾನ್ಯವಾದುದಲ್ಲ, ಎಷ್ಟು ಹದ, ಎಷ್ಟು ಸಾಮಾನ್ಯ ಜ್ಞಾನ, ರುಚಿಗೆ ತಕ್ಕಷ್ಟು ಹಾಕಿ ಮಾಡುವ ನಿಪುಣತೆ ಇದರಲ್ಲಿ ಮುಖ್ಯವಾಗಿ ಕಂಡುಬರುತ್ತದೆ.
ಈ ಅಡುಗೆ ಮಾಡಾಕಂತರೂ ತಾಳ್ಮೆ ಮತ್ತು ಸಹನಾ ಶಕ್ತಿ ವಿವೇಚನೆ ಇರಬೇಕು ನೋಡ್ರಿ, ಕಾಂಬಿನೇಷನ್ ಅಂತ ಅಂತಿವಲ್ರಿ,ಅದರಂಗ ಯಾವುದರ ಜೊತೆಗೆ ಯಾವುದನ್ನು ಮಾಡಿದ್ರೆ ತಿನ್ನಾಕ ರುಚಿ ಇರುತ್ತೆ ಅಂತ ಮತ್ತು ಯಾವುದು ಪೌಷ್ಠಿಕಂತ ಗೊತ್ತಿರಬೇಕು ನೋಡ್ರಿ,ಎಷ್ಟು ಕಾಲ ನೆನಸಿಡಬೇಕು ಯಾವಾಗ ಯಾವುದನ್ನು ಮಾಡಿದ್ರೆ ಚೆನ್ನಾಗಿ ಇರುತ್ತೆ ಅನ್ನೋದು ಗೊತ್ತಿರಬೇಕು,
ಇವಾಗಂತೂ ಎಲ್ಲಾ ಪಾಸ್ಟ್ ಫುಡ್ ಬಟನ್ ಒತ್ತಿದರೆ ಸಾಕು ಸಿದ್ಧ ತರಾತುರಿಯಲ್ಲಿ ತಿಂದು ಕೈ ಬಾಯಿ ಒರೆಸಿಕೊಂಡುಬಿಡ್ತಾರೆ.
ನೂಡಲ್ಸ್, ಪಾಸ್ತಾ ಪಿಜ್ಜಾ ಬರ್ಗರ್, ಇತ್ಯಾದಿ ಇತ್ಯಾದಿ
ಪಾಸ್ಟ್ ಫುಡ್ ತಿನ್ನೋದು ಪ್ಯಾಟ್ಸೇಲ್ಲಾ ದೇಹದಲ್ಲಿ ಸೇರಿಸಿಕೊಂಡು ಸಣ್ಣ ಸಣ್ಣ ವಯಸ್ಸಿನಲ್ಲಿಯೇ ಮಿತಿ ಮೀರಿ ದೇಹದ ಬೆಳವಣಿಗೆ ಯಿಂದ ನೂರಾರು ರೋಗಗಳಿಗೆ ಆಹ್ವಾನ ಒಡ್ಡೋದು,
Good food Good mood, ಸಾತ್ವಿಕ ಆಹಾರ ಸತ್ವಯುತವಾದ ಆಹಾರ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಮಾನಸಿಕವಾಗಿ ದೈಹಿಕವಾಗಿ ಉಲ್ಲಾಸದಿಂದ ಇರಲು ಮೊಳಕೆ ಬರಿಸಿದ ಕಾಳುಗಳನ್ನು, ಹಣ್ಣು ಹಂಪಲು, ಹಸಿರು ತರಕಾರಿ ತೊಪ್ಪಲು ಪಲ್ಯೆ ದಿನಾಲೂ ಉಪಯೋಗಿಸಿದರೆ ಸದ್ರೃಡ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ,
ಅದಕಾಗಿಯೆ ಗಾದೆಮಾತು ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ನುಡಿ ತೋರಣ
ಈಗಿನವರು ನಾವೆಲ್ಲ ಫಾಸ್ಟ್ ಫುಡ್ ತಿನ್ನೋದು, ಫಾಸ್ಟಾಗಿ ಡೆಮ್ಅನ್ನೋದು, ನೆಗೆದು ಬೀಳೋದು,
ಆಹಾರ, ವಿಹಾರ ,ಆಚಾರ,ವಿಚಾರ,ನಾವು ತೆಗೆದುಕೊಳ್ಳುವ ಆಹಾರದ ಮೇಲೆ ನಿಂತಿರುತ್ತದೆ ನೋಡಿ,
ಅದ್ಕೆ ಅಜ್ಜಿಯರ ಅನುಭವದ ರುಚಿ ಶುಚಿ ಆಹಾರದ ಅಡುಗೆ ಪದ್ದತಿಯನ್ನು ನಾವು ನಮ್ಮ ಮಕ್ಕಳಿಗೆ ಹೇಳಿಕೊಡುವುದುದರ ಜೊತೆಗೆ ಮಾಡಿಕೊಟ್ಟಾಗ ಮಕ್ಕಳಿಗೆ ಗೊತ್ತಾಗುತ್ತದೆ ಮನೆಊಟ ಮನೆಅಡಿಗೆಯ ಬೆಲೆ ತಿಳಿಯುತ್ತದೆ,
ಅರೆ ಬಾಪರೆ ನಾ ಏನೇನೋ ಹೇಳಕ ಹೋಗಿ ಏನೆಲ್ಲಾ ಹಾಕಿ ತಿರುವಿದೆ ನೋಡಿ
ಮೊಸರಲ್ಲಿ ಕಲ್ಲು ಹುಡುಕೋರು ಇರ್ತಾರೆ ನೋಡಿ,ಮನೆಗೆ ಹೆಂಡ್ತಿ ಎಷ್ಟು ಛೊಲೊ ಅಡುಗೆ ಮಾಡಿದ್ರೂ ಹೆಸರು ಇಡೋರು ಇರ್ತಾರಿ, ಕಾಗಿ ಕರ್ ಗ್ ಗುಬ್ಬಿ ಬೆಳ್ಳ ಗ್ ಅನ್ನೋ ಹಾಗೆ,ಉಪ್ಪಿಟ್ಟಗೆ ಉಪ್ಪಾತು, ಬ್ಯಾಳಿಗೆ ಖಾರಾತು, ರೊಟ್ಟಿ ಬೆಂದಿಲ್ಲ, ಅನ್ನ ಕುದ್ದಿಲ್ಲ,ಚಪಾತಿ ಬೆಂದಿಲ್ಲಂತ ದಿನಾ ಜಗಳ ಮಾಡಿ ಶೆಟಗೊಂಡು ಹೋಗಿ ಹೋಟೆಲ್ನಲ್ಲಿ ತಿನ್ನೋರು ಇರ್ತಾರೆ,
ಹೆಂಗರ ಮಾಡ್ಲಿ ಅಡುಗೆ ಸುಮ್ಮನೆ ಮುಚ್ಚಿದ ಬಾಯಿ ಮುಗಿದಕೈ ಅನ್ನೋ ಹಾಗೆ ಚುಪ್
ಚಾಪ್ ತಿಂದು ಹೆಂಡ್ತಿ ಮಾಡಿದ್ದು ತಿಂದು ಸುಮ್ಮನೆ ಇರ್ತಾರೆ,
ಮತ್ತೆ ಕೆಲವರು ಹೆಂಡ್ತಿ ಊರಿಗೆ ಹೋದಾಗ ಅಡುಗೆ ಮಾಡುವ ವಿಧಾನವನ್ನು ಫೋನಿನ ಮುಖಾಂತರ ಕೇಳಿ ಅಡುಗೆ ತಯಾರ ಮಾಡಿ ಮತ್ತೆ ಕೇಳ್ತಾ, ಹಾಂ ನೋಡೆ ನೀ ಮಾಡಿದಂಗ ಎಲ್ಲಾ ಮಾಡಿದೆ ಎಲ್ಲವನು ಹಾಕಿದೆ ,ಆದರೆ ಕೂದಲ ಎಳೆ ಹೆಂಗ್ ಹಾಕೋದು ಅಂತ ಗೊತ್ತಾಗಲಿಲ್ಲ ಅಂದಿದ್ದಕ್ಕೆ, ಹೆಂಡ್ತಿ ಏನ್ ಸುಮ್ಮನೆ ಬಿಡ್ತಾಳೆ ಏನ್ರೀ, ಅಯ್ಯೋ ಟಕಳಾ ಮಹಾರಾಜ ಮೊದ್ಲು ನಿನ್ ತಾಮ್ರತಲಿ ನೋಡಿಕೋ ಅನ್ನೋದೆ,
ಒಂದುಸಲ ಹೆಂಡತಿ ರೊಟ್ಟಿ ಮಾಡುವಾಗ ಮಾತಿನ ಚಕಮಕಿ ನಡೆಯಿತು ಗಂಡಹೆಂಡತಿ ನಡುವೆ ಮನೆಯ ಬಜೆಟ್ ನ ಬಗ್ಗೆ ,ಪತಿದೇವನ ಮಾತು ತುಂಬಾನೇ ಹರಿತವಾಗಿದ್ದವು, ಹೆಂಡತಿ ಕಣ್ಣಲ್ಲಿ ಗಂಗಾಮಾತೆ ಹರಿಯತೊಡಗಿದ್ದಳು,ಆಗ ಸಿಂಬಳಾಮಾತೆನೂ ಜೊತೆ ಗೂಡಿ ಹರಿಯುವುದನು,ಮೂಗು ಏರಿಸೋ ಇಳಿಸೋದನು ಕಂಡಪತಿಮಹಾಶಯ ಹೆಂಡ್ತಿಗೆ ಅಮ್ಮಾ ದೇವಿ ರೊಟ್ಟಿಯಲಿ ಹಾಕಿಮಾಡಬೇಡ ಅಂತ ಹಾಸ್ಯ ಚಟಾಕಿಗೆ , ಹೆಂಡ್ತಿ, ಹೊಟೇಲ್ ನಲ್ಲಿ ಬೆವರು ಹಾಕಿಮಾಡಿದ್ದು,ಮೂಗಿನಂದು ಹಾಕಿಮಾಡಿದ್ದು ಬೆಣ್ಣೆ ಮಸಾಲೆದೋಸೆ ಅಂತ ತಿಂದಬರತಿಯಲ್ಲ ರೊಕ್ಕ ಕೊಟ್ಟು ಅಲ್ಲಿ ತೋರಿಸು ನಿನ್ನ ಶೌರ್ಯ ಎನ್ನುವುದೇ ಚುಚಗ ಹಿಡಿದು,
ಕೆಲವೊಬ್ಬರಿಗಂತು ಅವ್ವನ ಕೈ ಅಡಿಗೆಯಂತೂ ಪಂಚಾಮ್ರೃತ,ಮ್ರೃಷ್ಠಾನಭೋಜನ, ಆಗ ಹೆಂಡ್ತಿಗೆ ಸಿಟ್ಟು ಮೂಗು ಮುರಿದು ,ಓಹೋ ನಿಮ್ ಅವ್ವನ ಜೊತೆ ಮಾಡಿಸಿಕೊಂಡು ತಿನ್ನು ನಾ ಊರಿಗೆ ಹೋಗ್ತೀನಿ ಅಂತಾ ಹೊರಟೆ ಬಿಟ್ಟಾಗ ಗಂಡನ ಪಜೀತಿ ಹೇಳತೀರದು, ಏನಂತೀರಾ,
ಮತ್ತೆ ಮಸಾಲಾ ಹಾಕಿ ಒಗ್ಗರಣೆ ಕೊಟ್ಟು ಮಿಠಾ ಮಿಠಾಮಾತಾಡಿ ರಮಿಸ ಬೇಕಾಗುತ್ತೆ ಹೆಂಡ್ತಿಯನು,
ಅಂದಹಾಗೆ ಒಗ್ಗರಣೆ ಇದೆಯಲ್ಲಾ ಇದೆ ಅಡುಗೆಗೆ ರುಚಿ ಕೊಡುವ ಘಮ್ ಘಮ,ಕಾಯ್ದ ಎಣ್ಣೆಯಲ್ಲಿ ಹಾಕಿದ ಸಾಸಿವೆ ಚಟಪಟ ಸದ್ದು, ಬೆಳ್ಳುಳ್ಳಿಯ, ಜೀರಿಗೆ ವಾಸನೆ ಇಡೀ ಮನೆತುಂಬಾ ಹರಡಿ ಅಕ್ಕ ಪಕ್ಕದವರ ಮನೆಯಲ್ಲಿ ನುಗ್ಗಿ,ಓ ಏನು ಒಳ್ಳೆಯ ಘಮಾ ಘಮಾ ಏನ್ ಇವತ್ತಿನ ಅಡುಗೆ ಸ್ಪೆಷಲ್ಂತ ಕೇಳುವ ತಾಕತ್ತು ಒಗ್ಗರಣೆಗೆ ಇದೆ ನೋಡಿ, ಚೊಂಯ್ ಚೊರ್ ನ ಶಬುದಕೆ, ಒಬ್ಬೊಬ್ಬರ ಕೈಗುಣ ಏನೋ ಗೊತ್ತಿಲ್ಲಾ ಎಷ್ಟು ರುಚಿ ಮಾಡ್ತಾರೆ,
ಅಯ್ಯೋ ಇರಲಿ ಬಿಡಿ ಇಂಗು ತೆಂಗು ಇದ್ದರೆ
ಮಂಗನು ಅಡುಗೆ ಮಾಡುತೆ.
ಮೊದಲೆಲ್ಲ ಮನೆಯಲ್ಲಿ ಅಡುಗೆ ಮಾಡೋದು,ಬಯಲಕಡೆ(ಚರಿಗಿ ತಗೊಂಡು,ಲ್ಯಾಟ್ರಿನ್ಗೆ) ಹೊರಗಡೆ ಹೋಗೋ ವ್ಯವಸ್ಥೆ ಇತ್ತು ಈಗ ಎಲ್ಲ ಉಲ್ಟಾ ಪುಲ್ಟ ನೋಡಿ ಮಾಸ್ಟೃಬೆಡ್ ರೂಮ್ ಅಂತ ಪ್ರತಿಯೊಂದು ರೂಮಿಗೂ ಪಯಖಾನೆ ಮನೆಯಲ್ಲಿ, ಮನೆಯಲ್ಲಿ ಅನ್ಲೋಡ್ ಮಾಡೋದು ಹೋಟೆಲ್ನಿಂದ ಲೋಡ್ ಮಾಡಿಕೊಂಡು ಬರೋದು.
ಅಯ್ಯೋ ಈಗೆಲ್ಲಾ ಅಡುಗೆ ಅಡುಗೆ ಮನೆಯ ತಾಪತ್ರೆ ಏನೂ ಇಲ್ಲ ಬಿಡಿ ಮನೆಯಲಿ ಕೂತ್ಕೊಂಡು ಆರ್ಡರ್ ಮಾಡೋದು ಅಮೇಜಾನ್,ಝೊಮೆಟೋ,ಅಂತ
ಇರಲಿ ಬಿಡಿ ಟೊಮೋಟೊ ರೇಟ್ ಏನೂಂತ ಗೊತ್ತಿದೆಯಲ್ಲ,
ಹೀಗೆ ಒಂದು ವಾಟ್ಸ್ ಆ್ಯಪ್ ನಲಿ ಮೆಸೇಜ್ ಬಂದಿತ್ತು,
ಮೇಷ್ಟ್ರು ಕೋಲಲ್ಲಿ ಹೊಡಿತಾರೆ
ಜನ ಕಲ್ಲಲಿ ಹೊಡಿತಾರೆ
ದಮ್ ಇದ್ರೆ ಟೊಮೋಟೊ ದಲಿ ಹೊಡೆದು ತೋರಿಸಿಅಂತಾ.
ಟೊಮೆಟೊಗೂ ಸಹ ಡಿಮ್ಯಾಂಡಪ್ಪೊ ಡಿಮಾಂಡು,
ಟೊಮೋಟೊ ಟಾಮ್ ಟಾಮ್,
–ಲಲಿತಾ ಪ್ರಭು ಅಂಗಡಿ
ಮುಂಬಯಿ