e-ಸುದ್ದಿ, ಮಸ್ಕಿ
ತಾಲೂಕಿನ ವಿವಿಧಡೆ ಡಾ.ಬಿ.ಆರ್.ಅಂಬೇಡ್ಕರ್ ಅವರ 64ನೇ ಮಹಾ ಪರಿನಿರ್ವಾಣ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.
ಪಟ್ಟಣದ ಗಾಂಧಿನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ದಲಿತ ಮುಖಂಡರಾದ ಹನುಮಂತಪ್ಪ ವೆಂಕಟಾಪೂರು, ಮಲ್ಪಯ್ಯ ಬಳ್ಳಾ, ಸುರೇಶ ಅಂತರಗಂಗಿ, ಮಲ್ಲಪ್ಪ ಗೋನಾಳ, ರಾಮಣ್ಣ ಉದ್ಬಾಳ್, ಅಶೋಕ ಮುರಾರಿ, ದುರ್ಗರಾಜ್ ವಟಗಲ್, ಸಿದ್ದು ಮುರಾರಿ, ಪ್ರಶಾಂತ ಕೊಠಾರಿ, ರಾಮಸ್ವಾಮಿ, ಮೌನೇಶ ಮಾಲಾರ್ಪಣೆ ಮಾಡಿ ಮಹಾಪರಿನಿರ್ವಾಣ ದಿನಾಚರಣೆ ಆಚರಿಸಿದರು.
ದಲಿತ ಮುಖಂಡ ಹನುಮಂತಪ್ಪ ವೆಂಕಟಾಪೂರು ಮಾತನಾಡಿ ಬಾಬಾಸಾಹೇಬರು ಸಂವಿಧಾನವನ್ನು ರಚಿಸುವ ಮೂಲಕ ದೇಶದ ಬಡವರ, ಅಲ್ಪಸಂಖ್ಯಾತರ ಕೊಟ್ಯಾಂತರ ಜನರ ದನಿಯಾಗಿದ್ದಾರೆ. ಇಂದು ನಾವು ಪ್ರತಿಯೊಬ್ಬರು ಸಂವಿಧಾನವನ್ನು ನೆನಪಿಸಿಕೊಳ್ಳಲೇಬೇಕು. ಅಂಬೇಡ್ಕರ್ ಅವರು ತಳ ಸಮುದಾಯವನ್ನು, ಬಡವರನ್ನು ಪ್ರಜೆಯಾಗಿ ಹಾಗೂ ಮಾನವೀಯ ನೆಲೆಗಟ್ಟಿನಲ್ಲಿ ಏಳಿಗೆ ಕಾಣಿಸುವ ನಿಟ್ಟಿನಲ್ಲಿ ಅವರ ಶ್ರಮ ಅಪ್ರತಿಮವಾದದು ಎಂದರು.
ವಿವಿದೆಡೆ ಆಚರಣೆ: ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನಾಚರಣೆ ಅಂಗವಾಗಿ ತಹಸೀಲ್ ಕಚೇರಿಯಲ್ಲಿ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಪುರಸಭೆ ಕಚೇರಿಯಲ್ಲಿ ಪುರಭೆ ಮಾಜಿ ಆಧ್ಯಕ್ಷ ಹಾಗೂ ಹಾಲಿ ಸದಸ್ಯ ಮೌನೇಶ ಮುರಾರಿ ಹಾಗೂ ಪುರಸಭೆಯ ವ್ಯವಸ್ಥಾಪಕ ಸತ್ಯನಾರಾಯಣ ಅವರು ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಪುರಸಭೆ ಎಂಜಿನಿಯರ್ ಮೀನಾಕ್ಷಿ ಹಾಗೂ ಸಿಬ್ಬಂದಿಗಳಿದ್ದರು.
ಬಿಜೆಪಿ ಕಚೇರಿಯಲ್ಲಿ ಮುಖಂಡ ಮಹಾದೇವಪ್ಪಗೌಡ ಪೋಲಿಸ್ ಪಾಟೀಲ್, ಪುರಸಭೆ ಮಾಜಿ ಅಧ್ಯಕ್ಷ ಮೌನೇಶ ಮುರಾರಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಮಲ್ಲಪ್ಪ ಅಂಕುಶದೊಡ್ಡಿ, ಚೇತನಪಾಟೀಲ್ ಇದ್ದರು.
ಬಸವೇಶ್ವರ ನಗರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರು ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಬಸನಗೌಡ ಮುದಬಾಳ, ಸುರೇಶ ಬ್ಯಾಳಿ, ಶರಣಪ್ಪ, ಚಾಂದ್ ಶೇಡ್ಮಿ, ಕೃಷ್ಣ ಚಿಗರಿ, ಮಲ್ಲಯ್ಯ ಮುರಾರಿ, ರವಿಕುಮಾರ ಇದ್ದರು.