ಮಸ್ಕಿ ಪೊಲೀಸ್‍ರಿಂದ ಅಪರಾಧ ತಡೆ ಜಾಗೃತಿ ಜಾಥಾ

 

e-ಸುದ್ದಿ ಮಸ್ಕಿ

ಪಟ್ಟಣದ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಹಿನ್ನೆಯಲ್ಲಿ ಪಿಎಸ್‍ಐ ಸಣ್ಣ ವೀರೇಶ ನೇತೃತ್ವದಲ್ಲಿ ಭಾನುವಾರ ಬೈಕ್ ರ್ಯಾಲಿ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಿಂದ ಆರಂಭಗೊಂಡ ಬೈಕ್ ಜಾಥಾ ಕನಕವೃತ್ತ, ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತ, ಮೇನ ಬಜಾರ್, ದೈವದಕಟ್ಟೆ, ಖಲೀಲ್ ವೃತ್ತ ಅಗಸಿ, ಅಶೋಕ ವೃತ್ತ, ಹಳೇ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಅಪರಾಧ ತಡೆ ಬಗ್ಗೆ ಜಾಗೃತಿ ಮೂಡಿಸಿದರು.
ಪಿಎಸ್‍ಐ ಸಣ್ಣ ವೀರೇಶ ಮಾತಾನಾಡಿ ಪೊಲೀಸ್ ಇಲಾಖೆ ಸಾರ್ವಜನಿಕರ ಹಿತ ಕಾಪಾಡಲು ಇದೆ. ಆದ್ದರಿಂದ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯ ಆದ್ದರಿಂದ ಇಲಾಖೆಯೊಂದಿಗೆ ಸಹಕರಿಸಿಬೇಕು ಎಂದು ಮನವಿ ಮಾಡಿದರು. ನಿಮ್ಮ ಮನೆ ಗ್ರಾಮ ಅಥವಾ ಎಲ್ಲೇ ಅಪರಾಧಗಳು ನಡೆಯುವುದು ಕಂಡು ಬಂದಲ್ಲಿ, ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.
ಪೋಷಕರು ವಾಹನ ಪರವಾನಗಿ ಇಲ್ಲದ ಮಕ್ಕಳಿಗೆ ವಾಹನಗಳನ್ನು ಚಲಾಯಿಸಲು ಕೊಡಬೇಡಿ ಇದು ಕಾನೂನಿನ ಪ್ರಕಾರ ಅಪರಾಧ ಅಲ್ಲದೇ ಇದರಿಂದ ಅಪಘಾತಗಳು ಸಂಭವಿಸುವ ಸಧ್ಯತೆ ಹೆಚ್ಚು ಆದ್ದರಿಂದ ಪಾಲಕರು ಎಚ್ಚರವಹಿಸಬೇಕು ಎಂದು ಎಚ್ಚರಿಸಿದರು. ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿಗಳು ಇದ್ದರು.

Don`t copy text!