ದೈವಾಸುರ ಸಂಪದ್ವಿ ಭಾಗ ಯೋಗ
ಗೀತೆಯ ಹದಿನಾರನೇ ಅಧ್ಯಾಯದ ಮೂರನೇ ಶ್ಲೋಕ,
ತೇಜಹಾ ಕ್ಷಮಾ ಧೃತಿ ಶೌಚಮ್
ಅದ್ರೊಹೋ ನಾತಿಮಾನಿತಾ
ಭವಂತಿ ಸಂಪದಮ್ ದೈವಿಮ್
ಅಭಿಜಾತಸ್ಯ ಭಾರತ //
ಅರ್ಥ..
ಉತ್ತಮ ಪುರುಷನಲ್ಲಿ ಈ ಗುಣ
ಗಳು ಕಂಡು ಬರುತ್ತವೆ, ಕೇಳು ಅರ್ಜುನಾ ಶಾಂತನಾಗಿ.
ತೇಜಸ್ಸು, ಕ್ಷಮೆ, ಧೃತಿ, ಶುಚಿತ್ವ,
ಕೆಡುಕುಗಳನ್ನು ಬಯಸದೇ ಇರುವದು, ನಾನೇ ದೊಡ್ಡವ
ನನಗಿಂತ ಯಾರು ಮೇಲು?
ಎಂದು ಗರ್ವ ಪಡದೇ ಇರು
ವದು.
ಈ ಮೇಲಿನ ಸರ್ವ ಗುಣಗಳು ದೈವಗುಣ ಸಂಪನ್ನನಲ್ಲಿ ಮನೆ
ಮಾಡಿಕೊಂಡಿರುತ್ತವೆ ಎಂಬುದ
ನ್ನು ತಿಳಿದುಕೋ ಎಂದು ಶ್ರೀ ಕೃಷ್ಣ ಪರಮಾತ್ಮನು ಗೀತೆಯಲ್ಲಿ ತಿಳಿಯ ಪಡಿಸಿದ್ದಾನೆ. ಇವೆಲ್ಲ
ಗುಣಗಳನ್ನು ನಾವೆಲ್ಲ ರೂಢಿಸಿಕೊಂಡು ಮುಕ್ತಿಯ
ಮಾರ್ಗ ಕಂಡುಕೊಳ್ಳುವದು
ಒಳಿತು ಮತ್ತು ಮನುಷ್ಯನ
ನಿಜವಾದ ಲಕ್ಸಣ ಎಂಬುದು
ಈ ಶ್ಲೋಕದ ತಾತ್ಪರ್ಯ.
–ಕೃಷ್ಣ ಬೀಡಕರ… ವಿಜಯಪುರ
29/8/23.