ರೈತ ಪರ ಚಳುವಳಿಗೆ ಕೆಆರ್‍ಎಸ್ ಬೆಂಬಲ, ಡಿ.8 ರಂದು ಬಂದ್ ಆಚರಣೆ

e-ಸುದ್ದಿ, ಮಸ್ಕಿ
ಡಿ.8 ರಂದು ಭಾರತ ಬಂದ್ ಆಚರಣೆಗೆ ಮಸ್ಕಿ ತಾಲೂಕು ಕರ್ನಾಟಕ ರೈತ ಸಂಘ ಸಂಪೂರ್ಣ ಬೆಂಬಲಿಸಿ ಹೊರಾಟ ನಡೆಸಲಾಗುತ್ತದೆ ಎಂದು ಕೆಆರ್‍ಎಸ್ ತಾಲುಕು ಅಧ್ಯಕ್ಷ ಸಂತೋಷ ಹಿರೇದಿನ್ನಿ ತಿಳಿಸಿದರು.
ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕಳೆದ 10 ದಿನಗಳಿಂದ ರೈತರು ರೈತ ವಿರೋಧಿ ನೀತಿಯನ್ನು ಕೈ ಬಿಡುವಂತೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಮೊಂಡತನ ಮಾಡುತ್ತಿದ್ದು ರೈತರ ಹಿತಾಸಕ್ತಿಯನ್ನು ಬಲಿಕೊಡದಂತೆ ಮಾತುಕತೆ ನಡೆಸಬೆಕೇಂದು ಒತ್ತಾಯಿಸಿದರು.
ರೈತರು ಇದ್ದರೆ ವ್ಯಾಪಾರಸ್ಥರು, ಅಂಗಡಿ ಮಂಗಟ್ಟುಗಳು ನಡೆಯುತ್ತವೆ. ಆದರೆ ರೈತರಿಗೆ ತೊಂದರೆಯಾಗುತ್ತಿದ್ದು ರೈತರ ಪರವಾಗಿ ನ್ಯಾಯ ದೊರಕಿಸಲು ಪ್ರತಿಯೊಬ್ಬ ವ್ಯಾಪಾರಸ್ಥರು ಬಂದ್‍ಗೆ ಬೆಂಬಲಿಸುವಂತೆ ಮನವಿ ಮಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಮಾರಕವಾದ ಮಸೂದೆಗಳನ್ನು ಹಿಂಪಡೆದು ರೈತರ ನೆರವಿಗೆ ಧಾವಿಸಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಹೊರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಸಂತೊಷ ಹಿರೇದಿನ್ನಿ ಎಚ್ಚರಿಸಿದ್ದಾರೆ.
ಕೆಆರ್‍ಎಸ್‍ನ ಮಾರುತಿ ಜಿನ್ನಾಪೂರ, ಹುಚ್ಚರಡ್ಡಿ ಹಿರೇದಿನ್ನಿ, ಗಂಗಪ್ಪ ತೊರಣದಿನ್ನಿ, ಅನಿಲ್‍ಕುಮಾರ ಮಸ್ಕಿ, ದೇವರಾಜ ಮಸ್ಕಿ ಹಾಗೂ ಇತರರು ಇದ್ದರು.

Don`t copy text!