ಗಾಂಧೀಜಿ ಕುರಿತು ಹೈಕುಗಳು
೧.
ಶತ ವರ್ಷವು
ಕಳೆದರೂ ಮಾಸದು
ಗಾಂಧಿ ನೆನಪು
೨.
ಗಾಂಧಿ ಸತ್ತಿಲ್ಲ
ದ್ವೇಷಿಸುವರಲ್ಲಿಯೂ
ಬದುಕಿದ್ದಾನೆ
೩.
ಮೂರ್ಖರ ಮಧ್ಯೆ
ಏಕೋ ಮಂಜಾಗುತ್ತಿದೆ
ಗಾಂಧಿ ಬೆಳಕು
೪.
ಇಂದಿಗೂ ಗಾಂಧಿ
ನೆನಪಾಗುತ್ತಾನಲ್ಲ
ಅದೇ ಅಭ್ಯಾಸ
೫.
ಸೂಟು ಬೂಟನು
ಕಳಚಿ ಸಂತನಾದ
ಜಗ ವಂದಿತ
೬.
ಹಿಂದೆ ಸಾಗರ
ನೀನೊಬ್ಬ ಮುಂದೆ ಮುಂದೆ
ದಂಡಿ ಯಾತ್ರೆಯು
೭.
ಆಂಗ್ಲರ ಗುಂಡು
ಹೆದರಲಿಲ್ಲ ಗುಂಡಿಗೆ
ಶಾಂತಿ ಪ್ರತ್ಯಾಸ್ತ್ರ
೮.
ದಯೆಯಿರದ
ಮನುಜನಿಗೆ; ನೀನು
ಬಲಿಯಾಗಿದ್ದೆ
೯.
ಅವನು ಕೊಂದ
ಕ್ಷಮಿಸಿ ಹೇ ರಾಮ
ನೀನೆಂದೆಯಲ್ಲ
೧೦.
ಶಸ್ತ್ರವಿಲ್ಲದೆ
ಶತ್ರುಗಳನ್ನು ಗೆದ್ದೆ
ನಿನ್ನ ತಾಕತ್ತು
೧೧.
ನೀನಡೆಯುವ
ವೇಗ ; ಯುವಕರಿಗೆ
ಸ್ಫೂರ್ತಿಯಾಗಿತ್ತು
೧೨.
ರಾಮ ಭಜನೆ
ಸತ್ಯ ನಿಲುವು ; ದೇಶ
ಒಂದಾಗಿ ಬಂತು
೧೩.
ಅಂಜದೆ ನಿಂತೆ
ಆಂಗ್ಲರ ಜೈಲು ಭರ್ತಿ
ವಿಶ್ವ ಬೆರಗು
೧೪.
ನಿನ್ನ ಕರೆಗೆ
ಬಾಲಕರಾದಿಯಾಗಿ
ಸಾಗರದಲೆ
೧೫.
ನೀನಿಲ್ಲವಿಂದು
ಜೀವಂತವಾಗಿರುವೆ
ಹೃದಯದಲ್ಲಿ
– ಈಶ್ವರ ಮಮದಾಪೂರ, ಗೋಕಾಕ
ಮೊಬೈಲ್ ಸಂಖ್ಯೆ- ೯೫೩೫೭೨೬೩೦೬