ಮಠ ಪೀಠ ಆಶ್ರಮ ಒಪ್ಪದ ಕಲ್ಯಾಣ ಶರಣರು

ಮಠ ಪೀಠ ಆಶ್ರಮ ಒಪ್ಪದ ಕಲ್ಯಾಣ ಶರಣರು

ಹನ್ನೆರಡನೆಯ ಶತಮಾನದ ಜಾಗತಿಕ ಮಟ್ಟದಲ್ಲಿ ಬಹು ದೊಡ್ಡ ಕ್ರಾಂತಿ. ಕರ್ನಾಟಕದ ಕಲ್ಯಾಣದಲ್ಲಿ ನಡೆಯಿತು.
ಅದು ಚಾಲುಕ್ಯರ ಕಳಚೂರ ಆಡಳಿತದ ಕಾಲ. ಸಮಗ್ರ ಬದಲಾವಣೆ ಪರಿವರ್ತನೆ ಮಾಡುವ ಕೆಲಸ ಬಸವಾದಿ ಪ್ರಮಥರಿಂದ ನಡೆಯಿತು.

ಶರಣರು ಅಂದಿನ ಸನಾತನ ವ್ಯವಸ್ಥೆಯನ್ನು ಧಿಕ್ಕರಿಸಿ ತಮ್ಮದೇ ಆದ ಸರಳ ಶುದ್ಧ ಮಾರ್ಗ ಸೂತ್ರ ಕಂಡು ಕೊಂಡರು. ವರ್ಗ ವರ್ಣ ಲಿಂಗ ಭೇದ ರಹಿತ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಾರ್ವಕಾಲಿಕ ಸಮಾನತೆ ಸ್ವಾತಂತ್ರ್ಯ ಸಾಧಿಸಿದ ಶ್ರೇಷ್ಠರು. ಅವರ ವಚನ ಸಾಹಿತ್ಯ ವೈಚಾರಿಕತೆಯ ಉನ್ನತ ವಿಚಾರಗಳ ಕೂಟ.

*ಮಠ ಪೀಠ ಆಶ್ರಮ ಒಪ್ಪದ ಕಲ್ಯಾಣ ಶರಣರು* ಯಾವೊಬ್ಬ ವಚನಕಾರರು ಸಾಂಸ್ಥಿಕರಣ ಶ್ರೇಷ್ಟತೆಯ ವ್ಯವಸ್ಥೆಯನ್ನು ಟೀಕಿಸಿ ಧಿಕ್ಕರಿಸಿ ಕೌಟುಂಬಿಕ ದಾಂಪತ್ಯ ಮಹಾಮನೆ ಆವರಣದಲ್ಲಿ ಜೀವನಾನುಭವ ಚಿಂತನೆ ನಡೆದವು. ಅನುಭವ ಮಂಟಪ ಕೂಡ ಸಂಸ್ಥಿಕರಣವಲ್ಲ. ಅಲ್ಲಿದ್ದ ಫಿರ್ ಪಾಷಾ ಬಂಗಲೆ ಕಲ್ಯಾಣದ ಚಾಲುಕ್ಯರ ಕಾಲದ ಒಂದು ಶೈವ ಸಮುದಾಯದವರ ಪ್ರಾರ್ಥನಾ ಸ್ಥಳ ಆಗಿರ ಬಹುದು .ಲಿಂಗಾಯತ ಧರ್ಮ ನೀತಿ ತತ್ವಗಳು ಪ್ರಖರ ಸದಾಶಯ ಹೊಂದಿದ ಅನುಸಂಧಾನದ ಶ್ರೇಷ್ಠ ಸಿದ್ಧಾಂತ ಮಾರ್ಗವಾಗಿ ಪರಿಣಮಿಸಿದಾಗ ಶೈವರ ಕಾಳಾ ಮುಖಿ ಲಕುಲಿಶ ಪಾಶುಪತ ಪಂಥಗಳು ತಮ್ಮ ಆಚರಣೆ ಬಿಟ್ಟು ಶರಣ ಧರ್ಮ ಸೇರಿಕೊಂಡರು. ಅಂತಹ ಸಂದರ್ಭದಲ್ಲಿ ಅನುಭವ ಮಂಟಪ ಸ್ಥಾಪನೆಯಾಯಿತು. ಅನುಭವ ಮಂಟಪ ಇದ್ದದ್ದು ಸತ್ಯ ಆದರೆ ಶರಣೆ ಅನುಭವ ಮಂಟಪ ಕಟ್ಟಿದರು ಎಂಬುದನ್ನು ಪರಾಮರ್ಶೆ ನಡೆಸಬೇಕು. ಕಾರಣ ಶರಣರು ಸ್ಥಾವರ ವಿರೋಧಿ ಜಂಗಮ ಪ್ರೇಮಿಗಳು.

ಇನ್ನೂರು ವರ್ಷ ವಚನ ಚಳುವಳಿ ಭೂಗರ್ಭದಲ್ಲಿ ಮರೆತು ಹೋಯಿತು. ಮುಂದೆ ಹಂಪಿಯ ಪ್ರೌಢ ದೇವರಾಯನ ಕಾಲದಲ್ಲಿ ವಚನಗಳ ಸಂಕಲನ ನಡೆಯಿತು ನಂತರದಲ್ಲಿ ಶೂನ್ಯ ಸಂಪಾದನೆ ಕಾಲದಲ್ಲಿ ವಚನಗಳ ಪ್ರತಿ ಪಾಠಾಂತರ ನಡೆದವು.
ಅಂದಿನ ಶೈವ ವೈಷ್ಣವ ಜೈನ ಸನಾತನ ಧರ್ಮದವರ ಧಾರ್ಮಿಕ ಆಚರಣಾ ಪದ್ಧತಿ ತುಂಬಾ ರಂಜನೀಯ ಆಕರ್ಷಕ ಪೌರಾಣಿಕ ಪವಾಡಗಳಿಂದ ಜನರನ್ನು ರಂಜಿಸುತ್ತಿದ್ದವು. ಇವರ ಜೊತೆಗೆ ಪೈಪೋಟಿಗೆ ಇಳಿದ ಅಂದಿನ ಲಿಂಗಾಯತ ಧರ್ಮ ಸಾಹಿತಿಗಳು ತಮ್ಮ ಪ್ರಾಬಲ್ಯ ಕಳೆದು ಕೊಂಡಿದ್ದರು. ಕಲ್ಲು ಮಠದ ಪ್ರಭು ಸ್ವಾಮಿಗಳನ್ನು ಹೊರತು ಪಡಿಸಿದರೆ ಬಹುತೇಕರು ಜೈನ ವೈಷ್ಣವ ಶೈವ ಸಂಪ್ರದಾಯಗಳ ಪ್ರಭಾವಕ್ಕೆ ಒಳ ಪಟ್ಟು ಅಲ್ಲಿನ ಆಚರಣೆಗಳನ್ನು ಶರಣ ಚಳುವಳಿಯ ಸಾಹಿತ್ಯ ಆಚರಣೆಯ ರೂಪದಲ್ಲಿ ದಾಖಲಿಸಿದರು.
ಹರಿಹರನ ರಗಳೆಗಳು ಶರಣರ ಆಶಯ ಹೇಳುತ್ತಾ ವೈಭವೀಕರಿಸಿ ಪವಾಡ ಪುಣ್ಯ ಕಥೆಗಳ ಕಥಾ ವಸ್ತುವಾಗಿ ಬಿಂಬಿಸಿದನು. ಮುಂದೆ
*ಭೈರವೇಶ್ವರ ಕಥಾ ರತ್ನಾಕರ ಸೂತ್ರ* ಇಂತಹ ಪವಾಡ ಪ್ರಧಾನವಾದ ಕಥಾ ರೂಪದ ಪುರಾಣಗಳು ರಚನೆಯಾಗಿವೆ. ಇಲ್ಲಿ ತತ್ವಕ್ಕಿಂತ ರಂಜನೀಯ ಪವಾಡಗಳು ಹೆಚ್ಚು ಹೆಚ್ಚು ಪರಿಣಾಮಕಾರಿ ಸಾಹಿತಿಕ ರೂಪದಲ್ಲಿ ಮೂಡಿ ಬಂದವು
ಹದಿನಾರನೆಯ ಶತಮಾನದಲ್ಲಿ ಸಕಲ ಪುರಾತನರ ವಚನಗಳ ಕಟ್ಟು ವಚನ ಸಂಕಲನಗಳಿಗೆ ಪ್ರಧಾನ ಆಕರವಾದವು.
ತೋಂಟದ ಸಿದ್ಧಲಿಂಗ ಯತಿ ಶ್ರೀಗಳು ಸ್ವತಃ 701 ವಚನಗಳನ್ನು ರಚಿಸಿದರು. ಇವರ ವಚನ ರಚನಾ ಕಾಲದಲ್ಲಿ
ಆಗಲೇ ವೀರಶೈವ ಪದ 1368 ರ ಭೀಮ ಕವಿಯ ತೆಲುಗು ಬಸವ ಪುರಾಣದ ಕನ್ನಡ ಭಾಷಾಂತರ ಮಾಡುವಲ್ಲಿ ವೀರಶೈವ ಸೇರ್ಪಡೆಗೊಂಡಿತ್ತು.
ಆಂಧ್ರ ಮೂಲದ ಆರಾಧ್ಯರು ಬ್ರಾಹ್ಮಣರು ವೀರಶೈವ ವೃತ ಆಚರಿಸುವವರು ಲಿಂಗಾಯತ ಧರ್ಮದಲ್ಲೀ ನುಸುಳಿ ಶರಣರ ಆಶಯಕ್ಕೆ ಪೆಟ್ಟು ಕೊಟ್ಟರು.
ಶ್ರಿ ಸಿದ್ಧಲಿಂಗ ಸ್ವಾಮಿಗಳು ಯತಿಗಳ ಶಿಷ್ಯ ವರ್ಗದಲ್ಲಿ ಬೊಳ ಬಸವರು ಘನಲಿಂಗಿಗಳು ಗುಮ್ಮಳಪೂರದ ಸಿದ್ಧಲಿಂಗ ಶ್ರೀಗಳು ಜಿಗುನಿ ಮರುಳಾಚಾರ್ಯರು ಹಿರಣ್ಯದೇವ ಹೀಗೆ 700 ವಿರಕ್ತರು ಶ್ರಿ ಎಡೆಯೂರ ಸಿದ್ಧಲಿಂಗ ಯತಿಗಳ ಶಿಷ್ಯರು ಇದ್ದರೆಂದು ಪಾರಂಪರಿಕ ಹೇಳಿಕೆಗಳ ಮೂಲಕ ತಿಳಿದು ಬರುತ್ತದೆ.ಮುಂದೆ ಶ್ರಿ ಸಿದ್ಧಲಿಂಗ ಯತಿಗಳ ಬಗ್ಗೆಯೂ ಅನೇಕ ಪವಾಡ ಕಥನ ಉಳ್ಳ ಜೀವನ ಚರಿತ್ರೆ ಹುಟ್ಟಿಕೊಂಡವು. ಇವೆಲ್ಲ ಶೈವ ಪ್ರಜ್ಞೆ ಹೊಂದಿದ ಕಥಾ ವಸ್ತು. ಬಹುಶ ಇದೆ ಸಂದರ್ಭದಲ್ಲಿ ಶೂನ್ಯ ಸಂಪಾದನೆ ರಚನೆಗೊಂಡ ಕಾಲ ಎಂದು ನಿರ್ಧರಿಸಲು ಸಾಧ್ಯ.ಗುಮ್ಮಳಪುರದ ಸಿದ್ಧಲಿಂಗ ರು ಶೂನ್ಯ ಸಂಪಾದನೆ ಕರ್ತರಲ್ಲಿ ಒಬ್ಬರು ಇದರ ಸಂಪಾದನೆ ಬೇರೆ ಬೇರೆಯವರ ಕಾಲದಲ್ಲಿ ನಡೆದು ಶರಣರ ಆಶಯ ಚಿಂತನೆಗೆ ಸಂಪೂರ್ಣ ವಿರುದ್ಧವಾದ ಆಚರಣೆಗಳು ತನ್ಮೂಲಕ ಹುಟ್ಟಿ ಕೊಂಡವು
ಏಡೆಯೂರ ಶ್ರಿ ಸಿದ್ಧಲಿಂಗ ಯತಿಗಳು ಮಠ ಪೀಠ ಸ್ಥಾಪಿಸಲಿಲ್ಲ . ಬದಲಾಗಿ ಒಂದು ಸುಂದರ ವಿರಕ್ತ ಪರಂಪರೆಯನ್ನು ಸಿದ್ಧ ಗೊಳಿಸಿದರು ಇವರೆಲ್ಲ ಶಿವ ಯೋಗ ಸಾಧಕರು . ಆಚರಣೆ ಪೂಜೆ ಆ ಸಂಪ್ರದಾಯಗಳನ್ನು ಬದಿಗಿಟ್ಟು ಶ್ರಮ ಸಂಸ್ಕೃತಿಯ ವಕ್ರಾರರಾದ ಶರಣರ ಆಶಯಗಳನ್ನು ಸಂಪೂರ್ಣ ವಿರೂಪಗೊಳಿಸುವ ಕುತಂತ್ರ ಹುನ್ನಾರ ವೀರಶೈವರು ಕೈಗೊಂಡರು.
ಮುಂದೆ 17 ನೆಯ ಶತಮಾನದ ಆರಂಭದಲ್ಲಿ ಕಟ್ಟಿಗೆ ಹಳ್ಳಿ ಶ್ರಿ ಸಿದ್ಧಲಿಂಗ ಶ್ರೀಗಳು ಈ ಮಠದ ಪರಂಪರೆ ಅಧಿಕೃತವಾಗಿ ಆರಂಭಿಸಿದರು.
ಇಂದಿನ ಆಧುನಿಕ ಯುಗದಲ್ಲಿ
ಬಸವಣ್ಣ ಅಲ್ಲಮ ಅಕ್ಕ ಮಹಾದೇವಿ ಮತ್ತು ಎಲ್ಲಾ ವಚನಕಾರರ ವಚನಗಳು ತತ್ವ ಸಿದ್ಧಾಂತಗಳು ಹೆಚ್ಚು ಹೆಚ್ಚು ವಾಸ್ತವಿಕವಾಗಿ ಕಂಡು ಬಂದರೂ ಸಹಿತ ಶರಣರ ಆಶಯ ಚಿಂತನೆಗೆ ಕೊಡಲಿ ಪೆಟ್ಟು ಕೊಟ್ಟವರು ಶೈವ ವಾದಿಗಳು ವೀರಶೈವ ವಾದಿಗಳು.
ಶರಣ ಧರ್ಮ ಅತಿಕ್ರಮಣ ಪ್ರವೇಶ ಮಾಡಿ ಯಾಮಾರಿಸಿ ಇಲ್ಲಿನ ಆಶಯ ಚಿಂತನೆಗಳನ್ನು ಸಮಾಧಿ ಮಾಡಿ. ಅಂತಹ ಸಮಾಧಿಯ ಸ್ಥಳದಲ್ಲಿ ಮಠಗಳನ್ನು ಕಟ್ಟಿದರು ಶೈವವಾದಿಗಳು.

ಜೇವರ್ಗಿ ಷಣಮುಖ ಶಿವಯೋಗಿಗಳು ಅಥಣಿಯ ಶ್ರಿ ಮುರಗೆಂದ್ರ ಯೋಗಿಗಳು ಮುರುಗೊಡದ ಶ್ರಿ ಮಹಾಂತ ಸ್ವಾಮಿಗಳು ಧಾರವಾಡದ ಮೃತ್ಯುಂಜಯ ಸ್ವಾಮಿಗಳು ಶರಣ ಚಳುವಳಿಯ ನೈಜ ಆಶಯಗಳು ಚಿಂತನೆಗಳನ್ನು ಬೆಳಸಲು ಪ್ರಸಾರ ಮಾಡಲು ಶ್ರಮಿಸಿದ್ದಾರೆ .
ಇಂದು ಮಠಗಳು ವಾಣಿಜ್ಯ ಕಟ್ಟಡ ಅರಮನೆ
ಸಾಮಾಜಿಕ ರಾಜಕೀಯ ವೋಟ್ ಬ್ಯಾಂಕ ಆಗಿ ಪರಿಣಮಿಸಿವೆ. ಬದಲಾದ ಲಿಂಗಾಯತ ಚಳುವಳಿಯ ಅಧ್ಯಯನಕ್ಕೆ ಸಂಬಂಧಿಸಿದರೆ.
*ಲಿಂಗಾಯತ ಸಮುದಾಯಕ್ಕೆ ಮಠಗಳಿಲ್ಲ*
*ಇಂದು ಜಾತಿಗೊಂದು ಪೀಠ ಮಠ ಹುಟ್ಟಿಕೊಂಡು ಶರಣರ ಆಶಯ ಚಿಂತನೆಗಳನ್ನು ಕಗ್ಗೊಲೆ ಮಾಡುತ್ತಿವೆ.*
ಬಸವ ಭಕ್ತರು ಎಚ್ಚರಗೊಳ್ಳಬೇಕು ಡಾ ಎಂ ಎಂ ಕಲಬುರ್ಗಿ ಅವರ ಹತ್ಯೆಯ ಹಿಂದೆ ಇಂತಹ ಮಠ ಪೀಠಗಳ
ಕಾಣದ ಕೈ ಕಾಣುತ್ತವೆ. ಸತ್ಯ ಹೇಳುವವರನ್ನು ಹತ್ಯೆ ಗೈದು ತಮ್ಮ ಸಂಪ್ರದಾಯ ಆಚರಣೆ ಉಳಿಸಿಕೊಳ್ಳುವ ಪ್ರಯತ್ನ ಇಂದಿನ ಎಲ್ಲಾ ಬಸವ ತತ್ವ ಮಠಗಳು ನಡೆಸಿಕೊಂಡು ಬಂದಿವೆ. *ಬಸವ ಪರ ಅಥವಾ ವಿರಕ್ತ ಮಠ ಪಂಚ ಪೀಠ ಮೇಲ್ನೋಟಕ್ಕೆ ಸಂಘರ್ಷ.*
*ಒಂದೇ ಕುಟುಂಬದ ಅಣ್ಣ ತಮ್ಮ ಈ ಪೀಠಗಳನ್ನು* *ಅಲಂಕರಿಸಿ ಬಸವ ಭಕ್ತರನ್ನು ದಾರಿ ತಪ್ಪಿಸುತ್ತಾರೆ*
ಇಂದಿನ ಎಲ್ಲಾ ಮಠಗಳು ವೈದಿಕ ಸಂಸ್ಕೃತಿಯ ಆಚರಣೆಯನ್ನು ರೂಢಿಸಿಕೊಂಡು ಭಕ್ತರನ್ನು ವೈದಿಕರನ್ನಾಗಿ ಮಾಡುವ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ
ಬಸವ ತಿಳುವಳಿಕೆ ತತ್ವಗಳಲ್ಲಿ ಮಠ ಪೀಠ ಆಶ್ರಮ ಪರಂಪರೆ ಇಲ್ಲ . ಇದರ ಬಗ್ಗೆ ನಾನು ಯಾವುದೇ ಲಿಂಗಾಯತ ಮಠಗಳ ಜೊತೆಗೆ ಚರ್ಚೆಗೆ ಸಿದ್ಧನಿದ್ದೇನೆ ಎಂದು ವಿನಮ್ರವಾಗಿ ಹೇಳುತ್ತೇನೆ.
ಮಠ ಪೀಠ ಆಶ್ರಮ ಒಪ್ಪದ ಕಲ್ಯಾಣ ಶರಣರು ಆದರೆ ಇಂದು ಇಂತಹ ಮಠ ಪೀಠ ಆಶ್ರಮ ಲಾಂಚನಕ್ಕೆ ಜೋತು ಬಿದ್ದ ಬಸವ ಭಕ್ತರು ಲಿಂಗಾಯತ ಧರ್ಮದಲ್ಲೀ ಕಾವಿ ಇಲ್ಲ

-ಡಾ ಶಶಿಕಾಂತ ಪಟ್ಟಣ ರಾಮದುರ್ಗ 9552002338

*ಆಕರಗಳು*

ಬಸವಣ್ಣನವರ ವಚನಗಳು ಮರಿ ಶಂಕರದ್ಯಾವರು 1889

ಶ್ರಿ ಬಸವೇಶ್ವರ ವಚನಗಳು ಡಾ
ಫ ಗು ಹಳಕಟ್ಟಿ 1923

ಬಸವಣ್ಣನವರ ಷಟಸ್ಥಳದ ವಚನಗಳು ಪ್ರೊ ಶೀ ಶೀ ಬಸವನಾಳ 1951

ಭಕ್ತಿ ಭಂಡಾರಿ ಬಸವಣ್ಣನವರ ವಚನಗಳು ಡಾ ಆರ್ ಸಿ ಹಿರೇಮಠ 1968

ಬಸವಣ್ಣನವರ ಟೀಕಿನ ವಚನಗಳು ಡಾ ಎಂ ಎಂ ಕಲಬುರ್ಗಿ
1981

ಬಸವಣ್ಣನವರ ಷಟಸ್ಥಲದ ವಚನಗಳು ಡಾ ಎಲ್ ಬಸವರಾಜ 1990

ಬಸವಣ್ಣನವರ ವಚನ ಸಂಪುಟ ಡಾ ಎಂ ಎಂ ಕಲಬುರ್ಗಿ 1993

One thought on “ಮಠ ಪೀಠ ಆಶ್ರಮ ಒಪ್ಪದ ಕಲ್ಯಾಣ ಶರಣರು

  1. ಅತ್ಯಂತ ಪ್ರಖರವಾದ ಮತ್ತು ಸತ್ಯವನ್ನು ಕುರಿತಾದ ಲೇಖನ ಧನ್ಯವಾದಗಳು ಸರ್

Comments are closed.

Don`t copy text!