ಮಸ್ಕಿಯ ಅಶೋಕನ ಶಾಸನ ಪುಸ್ತಕ ಬಿಡುಗಡೆ

ಮಸ್ಕಿಯ ಅಶೋಕನ ಶಾಸನ ಪುಸ್ತಕ ಬಿಡುಗಡೆ

e-ಸುದ್ದಿ ಧಾರವಾಡ

ಸಾಹಿತಿ ಗುಂಡುರಾವ್ ದೇಸಾಯಿ ಮಸ್ಕಿ ಅವರು ಬರೆದ ಮಸ್ಕಿಯ ಅಶೋಕನ ಶಾಸನ ಪುಸ್ತಕ ಬಿಡುಗಡೆ ಅ.೭ ಶನಿವಾರ ಸಂಜೆ ೫-೩೦ ಕ್ಕೆ ಧಾರವಾಡದ ರಾ.ಹ.ದೇಶಪಾಂಡೆ ಸಭಾ ಭವನ, ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಲೋಕಾರ್ಪಣೆ ಆಗಲಿದೆ.
ಬೆಂಗಳೂರಿನ ಅಭಿನವ ಪ್ರಕಾಶನ ಸಂಸ್ಥೆ ಅವರು ಪ್ರಕಟಿಸಿದ್ದಾರೆ.
ಮಕ್ಕಳ ಸಾಹಿತ್ಯಾಸಕ್ತ ಗೆಳೆಯರ ಬಳಗ ಧಾರವಾಡ ಹಾಗೂ ಅಭಿನವ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

(👆 ಗುಂಡೂರಾವ್ ದೇಸಾಯಿ )
ಒಟ್ಟು ೫ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.
ಆನಂದ ಪಾಟೀಲರ ಅನುವಾದ ಕೃತಿ ಹರದ್ವಾರ ಅಂಗಡಿ, ಅಕ್ಷಯ ನಾಗೇಶ್ರೀ ಅವರ ಕಾಮನಬಿಲ್ಲು, ನಾಗರಾಜ ಹುಡೇದ ಅವರ ರಾಪದಿಬ್ಬ, ರಾಜಶೇಖರ ಬಿರಾದರ ಅವರ ಸಾತಪ್ಪ ಟೋಪಣ್ಣವರ ಕೃತಿಗಳು ಬಿಡುಗಡೆ ಆಗಲಿವೆ.
ಎಸ್.ಎಸ್.ಕೆಳದಿಮಠ ಉಪನಿರ್ದೇಶಕರು ಶಾಲ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಧಾರವಾಡ ಪುಸ್ತಕ ಬಿಡುಗಡೆ ಮಾಡುವರು. ಜಿ.ಬಿ.ಹೊಂಬಳ ಧಾರವಾಡ ನಿವೃತ್ತ ಗ್ರಂಥಾಲಯ ಅಧಿಕಾರಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಹಿರಿಯ ಕವಯತ್ರಿ ಮಾಲತಿ ಪಟ್ಟಣಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಡಾ.ಶಿವಲಿಂಗಪ್ಪ ಹಂದಿಹಾಳ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಲೇಖಕರು ಉಪಸ್ಥಿತಿ ಇರುವರು.

Don`t copy text!