ಉನ್ಮಾದ ಹುಟ್ಟಿಸುವ ಶರಣ ಸಂಸ್ಕೃತಿಗಳ ಹಬ್ಬ

ಉನ್ಮಾದ ಹುಟ್ಟಿಸುವ ಶರಣ ಸಂಸ್ಕೃತಿಗಳ ಹಬ್ಬ


ಬಸವಣ್ಣ ಅತ್ಯಂತ ವೈಚಾರಿಕ ಮನೋಭಾವನೆಯ ಪ್ರಾಯೋಗಿಕ ಮನಸಿನ ಜಗತ್ತಿನ ದೊಡ್ಡ ದಾರ್ಶನಿಕ . ಇಂದು ಬಸವಣ್ಣನವರನ್ನು ನಾವು ನಮ್ಮ ಧಾರ್ಮಿಕ ಮುಖಂಡರು ಸ್ವಾಮಿಗಳು ಅಕ್ಕ ಮಾತೆಯರು ತಮ್ಮ ಪ್ರತಿಷ್ಠೆಗೆ ಬಳಸುತ್ತಿದ್ದಾರೆ. ಸಾರ್ವಕಾಲಿಕ ಸಮಾನತೆ ಸರಿದ ಶ್ರೇಷ್ಠ ಕ್ರಾಂತಿಕಾರಿ ಇಂದು ಕೆಲವರ ಪ್ರತಿಷ್ಠೆಗೆ ವಿಷಯವಾಗಿದ್ದಾನೆ.
ಕೆಲವರು ಶರಣ ಸಂಸ್ಕೃತಿಯ ಹೆಸರಿನಲ್ಲಿ ಆಧುನಿಕ ಬಸವಣ್ಣ ಎಂಬ ಅಭಿದಾನವನ್ನು ಪಡೆದುಕೊಂಡು ತಮ್ಮ ಪ್ರತಿಷ್ಠೆ ಹೆಚ್ಚಿಸಲು ಕಾರ್ಯಕ್ರಮ ಹಾಕಿಕೊಂಡು ಜನರನ್ನು ಭಾವನಾತ್ಮಕವಾಗಿ ಉನ್ಮಾದಕ್ಕೆ ಹಚ್ಚುತ್ತಾರೆ. ಶರಣರು ಮರಣ ಹೊಂದಿದ ದಿನದಂದು ಬೀದರಿನ ಅಕ್ಕನವರು ಮೊಹರಂ ಹುಲಿಯಂತೆ ಮೆರವಣಿಗೆ ಮಾಡುತ್ತಾರೆ.
ವಚನಗಳನ್ನು ಅಧ್ಯಯನ ಮಾಡದೆ ತಲೆ ಮೇಲೆ ಹೊತ್ತು ಕುಣಿಯುತ್ತಾರೆ ಕುಣಿಸುತ್ತಾರೆ.
ಯಾರಿಗೆ ಬೇಕು ಬಸವಣ್ಣನವರ ಹೆಸರಿನಲ್ಲಿ ಈ ಉತ್ಸವ ದೊಡ್ಡ ಮೂರ್ತಿಗಳು ,?
ಅಂತರಂಗದ ವಿಕಾಸನಗೊಂಡು ಅಷ್ಟಾವರಣ ಪಂಚಾಚಾರ ಷಟಸ್ಥಲಗಳು ಪಾಲನೆ ಮಾಡಿದರೆ ,
ಇಂದು ಲಿಂಗ ತತ್ವವನ್ನು ಪ್ರಾಮಾಣಿಕವಾಗಿ ಮಾಡುವ ಸಂಸ್ಥೆಗಳು ಸಿಗುವುದೆ ದುರ್ಲಭ . ಬಸವ ಪ್ರಜ್ಞೆ ಹೆಚ್ಚಬೇಕು ಆದರೆ ಭ್ರಮೆ ಬ್ರಾಂತಿ ಉನ್ಮಾದ ಉತ್ಶಾಹಗಳಿಂದಲ್ಲ.
ವಚನ ಅಧ್ಯಯನ ವಿಕಾಸವಾದರೆ ಖಂಡಿತ ಇಂತಹ ಅನಿಷ್ಟ ಪದ್ಧತಿಗಳಿಗೆ ತೆರೆ ಬೀಳುತ್ತದೆ.


ಡಾ.ಶಶಿಕಾಂತ.ಪಟ್ಟಣ ಪುಣೆ

Don`t copy text!