ಕಿತ್ತೂರು ಚನ್ನಮ್ಮ ಕನ್ನಡಿಗರ ಅಸ್ಮಿತೆಯ ಪ್ರತೀಕ
e-ಸುದ್ದಿ ಮಸ್ಕಿ
ಬ್ರೀಟಿಷರ ವಿರುದ್ಧ ಹೋರಾಡಿದ ಕಿತ್ತೂರು ಚನ್ನಮ್ಮ ಇಡೀ ಕನ್ನಡಿಗರ ಪ್ರತಿನಿಧಿಯಾಗಿ ಅಸ್ಮೀತೆಯನ್ನು ಮೆರೆದಿದ್ದಾಳೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿಯ ಚನ್ನಮ್ಮ ವೃತ್ತದಲ್ಲಿರುವ ಚನ್ನಮ್ಮಳ ಭಾವಚಿತ್ರಕ್ಕೆ ಸೋಮವಾರ ಮಾಲಾರ್ಪಣೆ ಮಾಡಿ ಮಾತನಾಡಿದರು.
ನಮ್ಮ ಯುವ ಪೀಳಿಗೆಯವರಾದ ಹೆಣ್ಣು ಮಕ್ಕಳಿರಲಿ ಗಂಡು ಮಕ್ಕಳಿರಲಿ ಚನ್ನಮ್ಮಳ ಆದರ್ಶ, ಕಿಚ್ಚು, ಹೋರಾಟ ಮನೋಭಾವ ಬೆಳಸಿಕೊಳ್ಳಬೇಕಾಗಿದೆ ಎಂದರು.
ತಾಲ್ಲೂಕು ಆಡಳಿತದ ಪರವಾಗಿ ತಹಸೀಲ್ದಾರ ಅರಮನೆ ಸುಧಾ ಅವರು ಗೌರವ ಸಲ್ಲಿಸಿದರು.
ಮಾಜಿ ಶಾಸಕ ಪ್ರತಪಾಗೌಡ ಪಾಟೀಲ, ಪ್ರಮುಖರಾದ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ, ಅಪ್ಪಾಜಿಗೌಡ ಪಾಟೀಲ, ಅಭಿಜಿತ್ ಪಾಟೀಲ, ಮಲ್ಲಯ್ಯ ಬಳ್ಳಾ, ಹನುಮಂತಪ್ಪ ಮುದ್ದಾಪುರ, ಶ್ರೀಶೈಲಪ್ಪ ಬ್ಯಾಳಿ, ಹನುಮಂತಪ್ಪ ವೆಂಕಟಾಪುರ, ಪಂಚಮಸಾಲಿ ಸಮಾಜದ ಪ್ರಮುಖರಾದ ಮೌನೇಶ ತಾತ ಜಂಗಮರಹಳ್ಳಿ, ಚಿನ್ನನಗೌಡ ಗೋನಾಳ, ಅಮರಪ್ಪ ಅಂಗಡಿ, ಅಮರಪ್ಪ ಗುಡದೂರು, ಬಸವರಾಜ ನಾಯಿಕೊಡೆ, ಸುರೇಶ ಪಲ್ಲೇದ, ಶರಣಬಸವ ಗೋನಾಳ, ಕೃಷ್ಣ ಚಿಗರಿ ಹಾಗೂ ಇತರರು ಇದ್ದರು.