ಕನ್ನಡವ ಕಟ್ಟಿದರು

 

ಕನ್ನಡವ ಕಟ್ಟಿದರು


ಕನ್ನಡವ ಕಟ್ಟಿದರು
ಕಲ್ಯಾಣ ಶರಣರು
ನುಡಿ ಜ್ಞಾನ
ವಂಚಿತರಿಗೆ
ಅಕ್ಷರವ ಕಲಿಸಿದರು

ಶ್ರಮ ಸಂಸ್ಕೃತಿ
ಉಳಿಸಿದರು
ದಾಸೋಹ ಮೆರೆಸಿದರು
ದೇವರಿಗೂ ಕೂಡ
ಕನ್ನಡವ ಕಲಿಸಿದರು

ದಯೆ ಧರ್ಮ ಪ್ರೀತಿ
ನೀತಿ ತತ್ವವ ಉಳಿಸಿ
ಮೌಲ್ಯಗಳ ಬೆಳೆಸಿದರು
ಹೊಸ ಬರಹ ವಚನಗಳ
ಬೇಸಾಯ ಮಾಡಿದರು

ಶತಮಾನದ ದಳ್ಳುರಿಗೆ
ಸಮತೆ ಕಹಳೆಯನೂದಿ
ಸಂಘರ್ಷದಿ ಮುನ್ನುಗ್ಗಿ
ಸಮರಸವ ಸಾರಿದರು
ಕರುನಾಡ ವೀರರು

ಜಾತಿ ಮತಗಳ ತೊರೆದು
ಶಾಂತಿ ಸೈರಣೆ ಕರುಣೆ
ಅನುಭಾವ ಅನುಭೂತಿ
ಗುರು ಲಿಂಗ ಜಂಗಮದ
ಹೊಸ ದಿಕ್ಕಿನ ಚಿಂತನೆ

ಹೊಸ ಬದುಕು ಹೊಸ ಬಾಳು
ಹೊಸ ನಾಡು ಹೊಸ ಜಗವು
ಕನ್ನಡದ ನೆಲದಲ್ಲಿ
ಕಾಯಕವ ಕಲಿಸಿದರು
ಕಲ್ಯಾಣ ಶರಣರು


ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!