ಜ್ಯೋತಿ ಹಚ್ಚೋಣ
ಒಡೆದ ಹಣತೆಯಲಿ ತೈಲವಿಲ್ಲದೆ
ಬತ್ತಿಯ ಹುರಿಗೊಳಿಸಿ ಅಳುಕಿಲ್ಲದೆ
ಜ್ಞಾನ ಜ್ಯೋತಿ ಬೆಳಗಬೇಕಿದೆ
ನರಕಾಸುರನ ವಧೆಯ ಕಥೆ ಬೇಡ
ಬಲಿ ಚಕ್ರವರ್ತಿಯ ವ್ಯಥೆಯು ಬೇಡ
ಉಣ್ಣುವ ತೈಲ ಸುಡುವುದು ಬೇಡ
ಬುದ್ಧ, ಬಸವರ ಜ್ಞಾನ ದೀವಿಗೆ ಹಚ್ಚೋಣ
ದೀನ ದಲಿತರ ಹಸಿವು ನೀಗಿಸೋಣ
ನಮ್ಮ ಲಕ್ಷದಲಿ ಒಂದು ದೀಪ ಹಚ್ಚೋಣ
ಮುರುಕು ಗುಡಿಸಲಿ ಭರವಸೆ ಬೆಳಗಿ
ಅಜ್ಞಾನ ಅಂಧಕಾರ ತೊಡೆದು ಹಾಕಿ
ಮನುಜ ಕುಲವೊಂದೇ ಘೋಷಣೆ ಕೂಗಿ
ಜಾತಿ ಮತ ಪಂಥ ಗೋಡೆ ಒಡೆದು
ವಿಶ್ವ ಪಥದ ಬಾಗಿಲು ನಿತ್ಯ ತೆರೆದು
ಬಾಳೋಣ ಭ್ರಾತೃತ್ವ ಎಲ್ಲೆಡೆ ಮೆರೆದು
ಮದ್ದು ಗುಂಡು ಪಟಾಕಿ ಸದ್ದಡಗಿಸಿ
ಪರಿಸರ ಜಾಗೃತಿ ಎಲ್ಲರಲಿ ಮೂಡಿಸಿ
ಬಾಳೋಣ ಮನೆ ಮನ ಸಿಂಗರಿಸಿ
ರವೀಂದ್ರ. ಆರ್. ಪಟ್ಟಣ.
ಮುಳಗುಂದ — ರಾಮದುರ್ಗ.