e-ಸುದ್ದಿ ಮಸ್ಕಿ
ತಾಲೂಕಿನ ಮೆದಕಿನಾಳ, ಬೆನಕನಾಳ ಗ್ರಾಮಗಳಲ್ಲಿ ಹಲವರು ಭೋವಿಗಳಲ್ಲದವರು ಭೋವೊಗಳೆಂದು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಅವುಗಳನ್ನು ರದ್ದು ಮಾಡುವಂತೆ ಒತ್ತಾಯಿಸಿ ಕರ್ನಾಟಕ ಭೋವಿ ವಡ್ಡರ್ ಸಂಘದ ಸದಸ್ಯರು ಪ್ರತಿಭಟನೆ ಮಾಡಿದರು.
ಪಟ್ಟಣದ ಬಸವೇಶ್ವರ ಮೂರ್ತಿ ಬಳಿ ಸೋಮವಾರ ಪ್ರತಿಭಟನೆ ಮಾಡಿದರು. ಕರ್ನಾಟಕ ಭೋವಿ ವಡ್ಡರ್ ಸಂಘದ ಅಧ್ಯಕ್ಷ ಅಧ್ಯಕ್ಷ ದುರುಗಪ್ಪ ಚಿಗರಿ ಮಾತನಾಡಿ ಭೋವೇರ, ಭೋಯಿ, ಭೋಯೇರ, ರಾಜಭೋಯಿ ಇವರುಗಳು ಎಸ್‍ಸಿ ಪ್ರಮಾಣ ಪತ್ರ ಪಡೆದಿದ್ದನ್ನು ರದ್ದು ಪಡಿಸುವಂತೆ ಒತ್ತಾಯಿಸಿದರು.
ತಹಸೀಲ್ ಕಚೇರಿಯ ಶಿರಸ್ತೆದಾರ ಸೈಯದ್ ಅಕ್ತರ ಅಲಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಭೋವಿ ಸಮಾಜದ ಮುಖಂಡರಾದ ಸಾರಪ್ಪ ಬಂಗಾಲಿ, ಆನಂದ ಬನಗಲ್ಲ, ರಂಗಪ್ಪ ಅರಕೇರಿ, ತಿಮ್ಮಣ್ಣ ಗುಡಸಲಿ, ದುರುಗಪ್ಪ ನಾಗರಬೆಂಚಿ, ಮರಿಯಪ್ಪ ಮೆದಕಿನಾಳ, ಮಲ್ಲಯ್ಯ ಛಾವಣಿ, ಬಸವರಾಝ ಉದ್ಬಾಳ, ರವಿಕುಮಾರ ಚಿಗರಿ, ಕೃಷ್ಣ ಚಿಗರಿ, ಜಿ.ಎಸ್. ಆನಂದ, ದುರುಗಪ್ಪ, ನಾಗರಾಜ, ನಾರಯಣಪ್ಪ ಅಂಬಣ್ಣ ಭೊವಿ ಹಾಗೂ ಇತರರು ಭಾಗವಹಿಸಿದ್ದರು.