ವಚನ ಸಾಹಿತ್ಯದ ಇಂಗ್ಲಿಷ್ ಅವತರಣಿಕೆಯ ೨ ಪುಸ್ತಕ ಲೋಕಾರ್ಪಣೆ

ವಚನ ಸಾಹಿತ್ಯದ ಇಂಗ್ಲಿಷ್ ಅವತರಣಿಕೆಯ ೨ ಪುಸ್ತಕ ಲೋಕಾರ್ಪಣೆ

ಡಾ. ಉಜ್ವಲಾ ಎಸ್ ಹಿರೇಮಠ ಅವರು ಇಂಗ್ಲೀಷಿನಲ್ಲಿ ಬರೆದ ವಚನ ಸಾಹಿತ್ಯದ ಎರಡು ಅದ್ಭುತ ಕಲಾಕೃತಿಗಳನ್ನು ಇಂದು ಲೋಕಾರ್ಪಣೆ ಗೊಂಡವು.

ವಚನ ಸಾಹಿತ್ಯವನ್ನು ಇಂಗ್ಲೀಷಿನಲ್ಲಿ ಬರೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಬಸವ ತತ್ವವನ್ನು ಪ್ರಚಾರ ಮಾಡಿದವರು ಬೆರಳೆಣಿಕೆಯಲ್ಲಿರಬಹುದು. ಅಂಥವರಲ್ಲಿ ಕೆಲವರನ್ನು ಇಲ್ಲಿ ಉಲ್ಲೇಖಿಸಬಹುದು.

1. 1920 ರಲ್ಲಿ 280 ಬಸವಣ್ಣನವರ ವಚನಗಳನ್ನು ಇಂಗ್ಲೀಷಿಗೆ ಭಾಷಾಂತರಿಸಿದವರು ಡಾ. ಫ. ಗು ಹಳಕಟ್ಟಿಯವರು. 1921 ರಲ್ಲಿ ಇಂಡಿಯನ್ ಆಂಟಿಕ್ವಿಯರಿ (Indian Antiquary) ಯಲ್ಲಿ ಡಾ. ಜೆ. ಎನ್. ಫರ್ಖುಹಾರ್ (Dr. J. N. Farquhar) ಅವರ ಸಹಯೋಗದಿಂದ Vachanas Attributed to Basava ಎನ್ನುವ ಅಧ್ಯಾಯದಲ್ಲಿ ಇಂಗ್ಲೀಷಿಗೆ ಭಾಷಾಂತರವಾದ ವಚನಗಳು ಪ್ರಕಟವಾಗುತ್ತವೆ. ಎಂಥ ಅದ್ಭುತ ಕೆಲಸ ಅಂದರೆ ವಚನಗಳನ್ನು ಇಂಗ್ಲೀಷನಲ್ಲಿ ಪ್ರಕಟಿಸಿದ ಪ್ರಪ್ರಥಮ ಪ್ರಯತ್ನ ಇದು.

3. ಅಮೇರಿಕಾದ ಶಿಕ್ಯಾಗೋ ವೀಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿದ್ದ ಮೈಸೂರಿನವರಾದ ಡಾ. ಏ. ಕೆ. ರಾಮಾನುಜನ್. ಅವರು ಇಂಗ್ಲೀಷಿನಲ್ಲಿ ಬರೆದ “ಸ್ಪೀಕಿಂಗ್ ಆಫ್ ಶಿವ” ವಚನ ಸಾಹಿತ್ಯವನ್ನು ಪಾಶ್ಚಾತ್ಯರಿಗೆ ಮುಟ್ಟಸಿದ ಮೇರು ಕೃತಿ.

2. ಅಮೇರಿಕದ ಈಮೋರಿ ವಿಶ್ವ ವಿದ್ಯಾಲಯದಲ್ಲಿ ಅಧ್ಯಾಪಕರಾಗಿರುವ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯವರಾದ ಪ್ರೋ. ವೇಲಚೇರು ನಾರಾಯಣ ರಾವ್ ಅವರು ಬರೆದ “ಶಿವಾಸ್ ವಾರಿಯರ್ಸ್” ಒಂದು ಪ್ರಮುಖ ಗ್ರಂಥ.

4. ಸಣ್ಣ ಕಥೆಗಳ ಜನಕ ಎಂದೇ ಪ್ರಖ್ಯಾತಿಯನ್ನು ಗಳಿಸಿದ “ಶ್ರೀನಿವಾಸ” ಎಂಬ ಕಾವ್ಯನಾಮದಿಂದ ಸಾಹಿತ್ಯ ಕೃಷಿ ಮಾಡಿದ “ಕನ್ನಡದ ಆಸ್ತಿ” ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ಬರೆದ “ಸೇಯಿಂಗ್ಸ್ ಆಫ್ ಬಸವಣ್ಣ”.

ಈ ಎಲ್ಲ ಮಹನೀಯರುಗಳು ಇಂಗ್ಲೀಷಿನಲ್ಲಿ ವಚನ ಸಾಹಿತ್ಯವನ್ನು ಕಟ್ಟಿಕೊಟ್ಟು ಪಾಶ್ಚಾತ್ಯ ರಾಷ್ಟ್ರಗಳಿಗೆ ಮುಟ್ಟುವಲ್ಲಿ ತಮ್ಮದೇ ಆದ ಯೋಗದಾನವನ್ನು ನೀಡಿದ್ದಾರೆ. ಹಾಗೆಯೆ ಇಂಥ ಮೇರು ವ್ಯಕ್ತಿತ್ವದವರಲ್ಲಿ ನಿಲ್ಲಬಲ್ಲಂಥ ಮತ್ತೊಬ್ಬ ಇಂಗ್ಲೀಷ್ ಭಾಷೆಯಲ್ಲಿ ವಚನ ಸಾಹಿತ್ಯದಲ್ಲಿ ಅಪಾರ ಮತ್ತು ಅನುಪಮ ಕೃಷಿ ಮಾಡಿರುವಂಥ ಸಾಹಿತಿ ನಮ್ಮ ನಡುವೆ ಇರುವಂಥ ಡಾ. ಉಜ್ವಲಾ ಎಸ್ ಹಿರೇಮಠ ಅವರು. ನಮಗೆಲ್ಲಾ ವಚನ ಸಾಹಿತ್ಯದಲ್ಲಿ ಮಾರ್ಗದರ್ಶನ ಮಾಡುತ್ತಿರುವ ಮಾತೃಸ್ವರೂಪಿಣಿ.

ಇಂದು ಅವರು ಬರೆದಂಥ ಎರಡು ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಒಂದು Allama Prabhu: A mystic Messiah ಇನ್ನೊಂದು Anecdotes: In lives of Saints.

ಈ ಎರಡೂ ಕೃತಿಗಳು ಸರಳಾತಿ ಸರಳ ಭಾಷೆಯಲ್ಲಿ ಬರೆದಂತವು ಮತ್ತು ವಚನ ಸಾಹಿತ್ಯದ ತತ್ವಗಳನ್ನು ಬಿಂಬಿಸುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಬಸವಾದಿ ಶರಣರ ಚಿಂತನೆಗಳನ್ನು ಮತ್ತು ವಚನ ಸಾಹಿತ್ಯದ ಆರಾಧಕರಿಗೆ ಪ್ರಮುಖ ಆಕರ ಗ್ರಂಥಗಳು.

ಡಾ. ಉಜ್ವಲಾ ಎಸ್ ಹಿರೇಮಠ ಅವರ ಶ್ರಮ ಮತ್ತು ಶ್ರದ್ಧೆ ಈ ಎರಡೂ ಪುಸ್ತಕಗಳನ್ನು ಓದಿದಾಗ ನಮಗೆ ಗೊತ್ತಾಗುತ್ತದೆ. ಅವರ ಈ ಎರಡೂ ಪುಸ್ತಕಗಳಿಗೆ ಅಪಾರ ಮನ್ನಣೆ ಸಿಗಲಿ ಎಂದು ನಮ್ಮ ಬಳಗದ ಮೂಲಕ ಹಾರೈಸುತ್ತೇವೆ.
————_——————_
ಡಾ.ಉಜ್ವಲಾ ಎಸ್ ಹಿರೇಮಠ

ಗುಲ್ಬರ್ಗಾ ವಿಶ್ವ ವಿದ್ಯಾನಿಲಯದ ಮತ್ತು ಕುವಂಪು ವಿಶ್ವ ವಿದ್ಯಾನಿಲಯದ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕರು. ಡಾ. ಉಜ್ವಲಾ ಎಸ್ ಹಿರೇಮಠ.
ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಕುಲಪತಿಗಳಾಗಿದ್ದಂಥ ಶರಣ ಸಿದ್ಧಾಂತದ ಅನುಯಾಯಿಗಳಾಗಿದ್ದಂಥಾ ಲಿಂಗೈಕ್ಯ ಡಾ. ಎಸ್ ಪಿ ಹಿರೇಮಠ ಅವರ ಧರ್ಮಪತ್ನಿ. ಇವರ ತಾಯಿ ಲಿಂಗೈಕ್ಯ ಶ್ರೀಮತಿ ಪದ್ಮಾವತಿದೇವಿ ಅಂಗಡಿಯವರು ಅದ್ಭುತ ಭಾಷಣಕಾರರಾಗಿದ್ದಂಥವರು ಮತ್ತು ಕರ್ನಾಟಕ ವಿಶ್ವ ವಿದ್ಯಾಲಯದ ಮೊಟ್ಟ ಮೊದಲ ಮಹಿಳಾ ಸಿಂಡಿಕೇಟ್ ಸದಸ್ಯರಾಗಿದ್ದವರು. ಇಂಥ ಶರಣ ಪರಿಸರದಲ್ಲಿ ಬೆಳೆದಂಥಾ ಡಾ. ಉಜ್ವಲಾ ಹಿರೇಮಠ ಅವರು ನಮ್ಮ ಕಾಲಘಟ್ಟದ ವಿಶಿಷ್ಠ ಮತ್ತು ಪ್ರಭು
ದ್ಧ ಲೇಖಕಿ. ವಚನ ಸಾಹಿತ್ಯದಲ್ಲಿ ಕೃಷಿ ಮಾಡಿದ ಪ್ರತಿಭಾವಂತರು, ಅವರ ಮಾರ್ಗದರ್ಶನ ನಮಗೆಲ್ಲಿರಗೂ ಸಿಗಲಿ.


ವಿಜಯಕುಮಾರ ಕಮ್ಮಾರ ತುಮಕೂರು
ಪೋನ್ ನಂ-97413 57132

Don`t copy text!