ಮಕ್ಕಳ ಮೆಚ್ಚಿನ ನೆಹರು ಚಾಚಾ
ಮಕ್ಕಳ ಮೆಚ್ಚಿನ ನೆಹರು ಚಾಚಾ
ಕೆಂಪು ಗುಲಾಬಿಯ ನೆಚ್ಚಿನ ಚಾಚಾ
ಭವ್ಯ ಭವಿಷ್ತತ್ತಿನ ಮಕ್ಕಳ ಚಾಚಾ
ಸ್ವತಂತ್ರ ಭಾರತದ ಮೊದಲ ಪ್ರಧಾನಿ ಚಾಚಾ
ಹೋಂರೂಲ್‌ಕೆ ಧುಮಿಕಿದ ಚಾಚಾ
ಸ್ವರಾಜ್ಯ ಪಕ್ಷ ಕಟ್ಟಿದ ಚಾಚಾ
ಲಾಹೋರ ಅಧಿವೇಶನ ಅಧ್ಯಕ್ಷ ಚಾಚಾ
ಪೂರ್ಣ ಸ್ವರಾಜ್ಯ ಘೋಷಿಸಿದ ಚಾಚಾ
ಆಲಿಪ್ತ ನೀತಿಯ ಜನಕ ಚಾಚಾ
ಪಂಚಶೀಲ ತತ್ವದ ರೂವಾರಿ ಚಾಚಾ
ಪಂಚವಾರ್ಷಿಕ ಯೋಜನೆ ತಂದ ಚಾಚಾ
ಕೈಗಾರಿಕೀಕರಣದ ರೂವಾರಿ ಚಾಚಾ
ಮುದ್ದು ಮಕ್ಕಳ ಅಚುಮೆಚ್ಚಿನ ಚಾಚಾ
ಮಕ್ಕಳ ದಿನಾಚಾರಣೆ ತಂದ ಚಾಚಾ
ಮಕ್ಕಳ ನೋಡಿ ಮಂದಹಾಸ ಮೂಡಿಸುವ ಚಾಚಾ
ನಮ್ಮೆಲ್ಲರ ಅಚ್ಚುಮೆಚ್ಚಿನ ನೆಹರು ಚಾಚಾ
-ಡಾ. ದಾನಮ್ಮ ಝಳಕಿ