ಬಸವ ಅಂತಾರಾಷ್ಟ್ರೀಯ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ ನಡೆದು ಬಂದ ದಾರಿ
ಬಸವ ಅಂತಾರಾಷ್ಟ್ರೀಯ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆಯ ವಚನ ಅಧ್ಯಯನ ವೇದಿಕೆಯು ಒಂದು ರಜಿಸ್ಟರ್ ಸಂಸ್ಥೆಯಾಗಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿಕಾರ್ಯ ಮಾಡುತ್ತಿದೆ. ಮತ್ತು ಅಕ್ಕನ ಅರಿವು ಬಳಗದ ಸಂಯುಕ್ತ ಆಶ್ರಯದಲ್ಲಿ 5-6 ವರ್ಷಗಳಿಂದ ಪ್ರತಿ ಶನಿವಾರ 5 ಗಂಟೆಗೆ ಹಾಗೂ ರವಿವಾರ 11-25 ಕ್ಕೆ ವೈಚಾರಿಕ ಹಾಗೂ ವೈಜ್ಞಾನಿಕ ದೃಷ್ಠಿಕೋನದಲ್ಲಿ ವಚನಗಳ ವಿಶ್ಲೇಷಣೆ, ಶರಣರ ಜೀವನ ಚರಿತ್ರೆಯ ಮೂಲಕ ಅವರ ಆಶಯ ಹಾಗೂ ತತ್ವಗಳನ್ನು ಜಗತ್ತಿನಾದ್ಯಂತ ಬಿತ್ತಿ ಬೆಳೆಯುವ ಕಾರ್ಯವನ್ನು ಸಂಸ್ಥಾಪಕರಾದ ಡಾ. ಶಶಿಕಾಂತ ಪಟ್ಟಣ ಅವರು ಮಾಡುತ್ತಿದ್ದಾರೆ ಅವರಿಗೆ ತಾಂತ್ರಿಕ ಸಹಾಯಕರಾಗಿ ಶರಣ ರುದ್ರಮೂರ್ತಿಪ್ರಭು ಹಾಗೂ ಶರಣ ರಾಜಣ್ಣ ಮತ್ತು ಡಾ ದಾನಮ್ಮ ಝಳಕಿ ಮಾಡುತ್ತಿದ್ದಾರೆ.
ಅದರಂತೆ ಅಕ್ಕನ ಅರಿವಿನ ಹಿರಿಯ ಸದಶ್ಯರಾದ ಡಾ ಸರಸ್ವತಿ ಪಾಟೀಲ, ಶರಣೆ ಶಾರದಾ ಪಾಟೀಲ, ಶರಣೆ ಗೌರಮ್ಮ ನಾಶಿ, ಡಾ ವೀಣಾ ಎಲಿಗಾರ, ಶರಣೆ ಸುಜಾತಾ ಪಾಟೀಲ,
ಶರಣೆ ಸುಧಾ ಪಾಟೀಲ, ಡಾ ಪ್ರಿಯಂವದಾ ಮೇಡಂ, ಡಾ ಶರಣಮ್ಮ ಗೋರೆಬಾಳ, ಹೀಗೆ ಅನೇಕರು ಈ ಸತ್ಸಂಗದಲ್ಲಿ ಸಂಘಟಿಕರಾಗಿ ಕಾರ್ಯ ಮಾಡುತ್ತಿದ್ದಾರೆ. ಹಿರಿಯರಾದ ಶರಣ ಮಹಾದೇವಪ್ಪ ಹೊರಟ್ಟಿ ಸರ್ ಅವರು ಸಹ ಸದಾ ಮಾರ್ಗದರ್ಶನವನ್ನು ಮಾಡುತ್ತಾರೆ.
ಈ ವೇದಿಕೆಯ ಮೂಲಕ ಅನೇಕ ಸಾಹಿತ್ಯಗಳು ಹೊರಬರುತ್ತಿವೆ ಅಲ್ಲದೇ ಉಪನ್ಯಾಸಗಳ ಕಾರ್ಯಕ್ರಮಗಳು ಸಹ ಜರುಗುತ್ತಿವೆ ಅಲ್ಲದೇ ಈ ವೇದಿಕೆಯ ಮೂಲಕ ಸಾವಿಲ್ಲದ ಶರಣರು ಎಂಬ ಮಾಲಿಕೆಯ ಮೂಲಕ ಅನೇಕ ಸಮಾಜೋಮುಖಿ ಕಾರ್ಯ ಮಾಡಿದ ಶರಣ ಶರಣೆಯರ ಜೀವನವನ್ನು ಪರಿಚಯಿಸುವ ಕಾರ್ಯ ಅತ್ಯದ್ಭುತವಾಗಿದೆ.
ಈ ವೇದಿಕೆಯು ವೈಚಾರಿಕ ಬೆಳವಣೆಗೆ ಹಾಗೂ ವೈಜ್ಞಾನಿಕ ದೃಷ್ಟಿಕೋನಕ್ಕೆ ಒಂದು ಮೈಲುಗಲ್ಲಾಗಿ ನಿರಂತರ ಕಾರ್ಯ ಮಾಡುತ್ತಿದೆ. ಶರಣರ ನಡೆನುಡಿಯ ಮೂಲಕ ಸಮಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿದೆ. ಅನೇಜ ಹಿರಿಯ ಚೇತನರ ಅಭಿನಂದನಾ ಗ್ರಂಥವನ್ನು ಮಾಡುವ ಮೂಲಕ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಸಾಹಿತ್ಯ ಸಮರ್ಪಿಸಿದೆ. ಉದಾ ಬದಾಮಿಯಲ್ಲಿ ಪ್ರೊ ಶಾರದಾ ಪಾಟೀಲ ಅವರದು ಅಭಿನಂದನಾ ಗ್ರಂಥ ಆಗಿರುವದನ್ನು ನೆನಪಿಸಿಕೊಳ್ಳಬಹುದು. ಹಾಗೂ ಮುಂಬರುವ ದಿನಗಳಲ್ಲಿ ಡಾ ಸರಸ್ವತಿ ಪಾಟೀಲ ಮೇಡಂ ಅವರ ಅಭಿನಂದನಾ ಗ್ರಂಥ ಅಚ್ಚಿನಲ್ಲಿದೆ. ಆ ಗ್ರಂಥಗಳ ಬಿಡುಗಡೆ ಸಂದರ್ಭದಲ್ಲಿ ಶರಣರ ಕುರಿತು ಹಾಗೂ ಶರಣ ಸಾಹಿತ್ಯದ ಕುರಿತು ಅನೇಕ ಉಪನ್ಯಾಸಗಳನ್ನು ಏರ್ಪಡಿಸಿ ಜನಮನದ ಪ್ರೀತಿಗೆ ಪಾತ್ರವಾಗಿದೆ. ಈ ಗೂಗಲ್ ಮೀಟ್ ದಲ್ಲಿಯ ಎಲ್ಲ ಉಪನ್ಯಾಸಗಳನ್ನು ರಿಕಾರ್ಡಿಂಗ ಮಾಡಿ ಯುಟೋಬ್ ಗೆ ಅಪ್ ಲೋಡ್ ಮಾಡಿ ಸದಾ ಎಲ್ಲ ಉಪನ್ಯಾಸಗಳು ಜಾಗತಿಕ ಮಟ್ಟದಲ್ಲಿ ದೊರಕುವಂತೆ ಕಾರ್ಯ ಮಾಡುತ್ತಿದೆ. ಹೀಗೆ ಸಾಹಿತ್ಯ ರಚನೆ, ಉಪನ್ಯಾಸಗಳು, ದತ್ತಿ ಉಪನ್ಯಾಸ, ಸಾವಿಲ್ಲದ ಶರಣರ ಮಾಲಿಕೆ, ಅಭಿನಂದನಾ ಗ್ರಂಥ ರಚನೆ ಹಾಗೂ ಬಿಡುಗಡೆ, Google Meet ಇತ್ಯಾದಿ ಕಾರ್ಯಗಳ ಮೂಲಕ ಅತ್ಯಂತ ಜನಪ್ರೀಯವಾದ ಅಂತರಾಷ್ಟ್ರೀಯ ವೇದಿಕೆ ಆಗಿದೆ ಎಂಬುದು ಅತ್ಯಂತ ಹೆಮ್ಮೆಯ ವಿಷಯ.
ಧಾರವಾಡದ ಮೃತ್ಯುಂಜಯ ಪದವಿ ಕಾಲೇಜ ಹಾಗೂ ಅಂತರಾಷ್ಟ್ರೀಯ ಮಟ್ಟದ Basava samiti of Asiia Pacific Ltd ಅವರೊಂದಿಗೆ MOU ಮಾಡಿಕೊಂಡು ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದೆ.ಇದಕ್ಕೆಲ್ಲ ಸದಾ ಮಾರ್ಗದರ್ಶನ ಡಾ ಶಶಿಕಾಂತ ಪಟ್ಟಣ ಅವರದು. ವೃತ್ತಿಯಲ್ಲಿ ಜೌಷಧ ವಿಜ್ಞಾನಿಗಳಾದರೂ ಪ್ರವೃತ್ತಿಯಲ್ಲಿ ವಿದ್ವಾಂಸರು, ಸಾಹಿತಿಗಳು, ವಿಮರ್ಶಕರು, ಸಂಶೋಧಕರು,ಕವಿಗಳೂ ಆಗಿದ್ದಾರೆ.
ಈ ವೇದಿಕೆಯಲ್ಲಿ ನ್ಯೂಜಿಲ್ಯಾಂಡದಿಂದ ಶರಣ ಡಾ ಲಿಂಗಪ್ಪ ಣ್ಣ ಕಲ್ವುರ್ಗಿ, ಆಸ್ಟ್ರೇಲಿಯಾದಿಂದ ಶರಣ ಸಂಗಮೇಶ ಸಾಲಿಮಠ ಇತ್ಯಾದಿ ಅನೇಕರು ಭಾಗವಹಿಸುತ್ತಾರೆ. ಡಾ ದಂಡೆ ದಂಪತಿಗಳು ಡಾ ಪಡಶೆಟ್ಟಿ,ಡಾ ಗವಸಾನಿ. ಡಾ ಮೃತ್ಯುಂಜಯ ಶೆಟ್ಟರ, ಡಾ ಪೋಲೀಸ ಪಾಟೀಲ ಹೀಗೆ ಅನೇಕರು ಉಪನ್ಯಾಸಗಳನ್ನು ಈ ವೇದಿಕೆಯಲ್ಲಿ ನೀಡಿದ್ದಾರೆ. ಈ ವೇದಿಕೆ ಮಹಿಳೆಯರಿಗಾಗಿ ಶನಿವಾರ Google meet ನಡೆಸುವ ಮೂಲಕ ಅನೇಕ ಮಹಿಳೆಯರಿಗೆ ವೇದಿಕೆ ಕಲ್ಪಿಸಿ ಅವರ ಪ್ರತಿಭೆಯನ್ನು ಅನಾವರಣಗೊಳಿಸಿದೆ. ಅಲ್ಲದೇ ಮಹಿಳೆಯರಿಗೆ ಪ್ರೋತ್ಸಾಹ ಪ್ರೇರಣೆ ನೀಡುವ ಮೂಲಕ ಅವರನ್ನು ಬೆಳೆಸುತ್ತಿದೆ.
ಈ ವೇದಿಕೆಯ ಮಾರ್ಗದರ್ಶನದಿಂದ ಇಂದು ಅನೇಕ ಮಹಿಳೆಯರು ಸಾಹಿತಿಗಳಾಗಿ, ಉಪನ್ಯಾಸಕರಾಗಿ ಹೊರಹೊಮ್ಮಿದ್ದಾರೆ. ಈ ವೇದಿಕೆಯ YouTube channel link – https://youtube.com/@vachanaadhyayanavedike ಇದ್ದು ಎಲ್ಲರೂ subscribe ಆಗುವ ಮೂಲಕ ಅದರ ಸದುಪಯೋಗ ಪಡೆಯಬಹುದು. ಒಟ್ಟಾರೆ ಈ ವೇದಿಕೆ ಅಂತರಾಷ್ಟ್ರೀಯ ಮಟ್ಟದ ವೇದಿಕೆ ಆಗಿದ್ದು ನಿರಂತರ ಶರಣ ಸಾಹಿತ್ಯದ ಆಶಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದೆ. ಶರಣರ ನಡೆನುಡಿ ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂಬ ಆಶಯದ ಈ ವೇದಿಕೆಯಲ್ಲಿ ಸುಮಾರು 200 ಕ್ಕಿಂತ ಅಧಿಕ ಸದಸ್ಯರಿರುವುದು ಅತ್ಯಂತ ಎಮ್ಮೆಯ ವಿಷಯವಾಗಿದೆ.
ಅನೇಕರು ಅಜೀವ ಸದಶ್ಯರಾಗಿದ್ದಾರೆ ಹಾಗೂ ಅನೇಕರು ದತ್ತಿ ಉಪನ್ಯಾಸಕ್ಕಾಗಿ ನೊಂದಾವಣೆ ಮಾಡಿದ್ದು ಈ ವೇದಿಕೆಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದೆ. ಈ ವೇದಿಕೆಯ ಗರಿಮೆ ಹಿರಿಮೆ ಅಂತರಾಷ್ಟ್ರೀಯ ಮಟ್ಟದಲ್ಲೂ ಇರುವುದು ಅತ್ಯಂತ ಹೆಮ್ಮೆಯ ವಿಷಯ.
ಶರಣು ಶರಣಾರ್ಥಿಗಳು
-ಡಾ.ದಾನಮ್ಮ ಝಳಕಿ