ಹೆಣ್ಣು ಎಂದರೆ

ಹೆಣ್ಣು ಎಂದರೆ’

ಮುಟ್ಟಾದರೆ ಮುಟ್ಟಿಸಿಕೊಳ್ಳದ ಈ ಜನ.. ತಮ್ಮ ಹುಟ್ಟಿನ ಮೂಲವನ್ನೆ ಮರೆತಿಹರು!

ಹೆಣ್ಣಿನ ಎದೆ ನೋಡಿ ಕಣ್ಣು ಮಿಟಿಕಿಸುವ ಈ ಜನ.. ಹೆಣ್ಣಿನ ಎದೆ ಹಾಲು ಕುಡಿದು ಬೆಳೆದಿದ್ದು ಮರೆತಿಹರು!

ಹೆಣ್ಣಿನ ಕೈ ಎಳೆದಾಡಿ ಚುಡಾಯಿಸುವ ಈ ಜನ.. ಹೆಣ್ಣಿನ ಮಮತೆಯ ಕೈ ತುತ್ತು ತಿಂದು ತೆಗೆದನ್ನ ಮರೆತಿಹರು!

ಹೆಣ್ಣನ್ನ ಮಲಗುವುದಕ್ಕೆ ಬಯಸುವ ಈ ಜನ ಹೆಣ್ಣಿನ ಮಡಿಲಲ್ಲಿ ಮಗುವ ಮಗುವಾಗಿದ್ದು ಮರೆತಿಹರು!

ಹೆಣ್ಣಿನ ಸೌಂದರ್ಯವನ್ನ ನೋಡಿ ಮಾರುಹೋಗುವ ಈ ಜನ ಹೆಣ್ಣಿನ ಸಾವಿನ ಹೆರೆಗೆ ನೋವಲ್ಲಿ ಹುಟ್ಟಿದನ್ನ ಮರೆತಿಹರು!

ಹೆಣ್ಣನ್ನ ಮದುವೆಯಾದ ಮೇಲೆ ದಾಸಿಯಾನ್ನಾಗಿ ಮಾಡುವ ಈ ಹೆಣ್ಣಿನ ತನ್ನ ತ್ಯಾಗದಾನದ ತಾಯಿಯ ಜೀವನವನ್ನೆ ಮರೆತಿಹರು!

ಹೆಣ್ಣಿನ್ನ ಸುಖ ಸಂಸಾರದ ಕಣ್ಣು ಎನ್ನುವ ಈ ಜನ.. ಹೆಣ್ಣಿನ ಮಾನಸಿಕ, ದೈಹಿಕ ಸಮಸ್ಯೆಗಳನ್ನೆ ಮರೆತಿಹರು!

ಹೆಣ್ಣಿನ ತಮ್ಮ ಬಾಯಿ ರುಚಿಯ ಹಣ್ಣಿನ ಹಾಗೆ ಬಳಸುವ ಈ ಹೆಣ್ಣು ಈ ಭಾರತ ದೇಶದ ಮಣ್ಣು ಎಂಬುದನ್ನೆ ಮರೆತಿಹರು!

ಹೆಣ್ಣನ್ನು ಗೌರವಿಸಿ

ಮೂರ್ತಿ ಶಾಂತಾಪುರ

Don`t copy text!