ವೀರಶೈವರು ಹಿಂದುಗಳೇ ? ಹೌದು
ವೀರಶೈವರು ವೈದಿಕ ಪರಂಪರೆಯನ್ನು
ಹೊಂದಿದ್ದು ಸನಾತನಕ್ಕೆ ಅತ್ಯಂತ ಸಾಮಿಪ್ಯದಲ್ಲಿರುವ ವೀರಶೈವರು ಕರ್ನಾಟಕಕೆ ಬಂದಿದ್ದು ಹದಿನೈದನೆಯ ಶತಮಾನದಲ್ಲಿ .
ವೀರಶೈವರು ಗುರು ಲಿಂಗ ಜಂಗಮ ತತ್ವಗಳಲ್ಲಿ ನಂಬಿಕೆ ಇಟ್ಟವರು ಆದರೆ ಅವು ಬಾಹ್ಯ ಭೌತಿಕ ಸಾಧನಗಳು. ಅಷ್ಟಾವರಣಗಳು ಲಿಂಗಾಯತ ಧರ್ಮದಲ್ಲಿ ಶರಣರ ಕಾಯ ಗುಣ . ಅರಿವೇ ಗುರು ಆಚಾರವೇ ಲಿಂಗ ಅನುಭಾವೇ ಜಂಗಮ . ಹೀಗಾಗಿ ಲಿಂಗಾಯತರ ಇಷ್ಟಲಿಂಗ ಜಂಗಮ ತತ್ವವನ್ನು ವೀರಶೈವರು ತಮ್ಮ ಅನಕೂಲಕ್ಕೆ ತಕ್ಕಂತೆ ಸಾಂಸ್ಥಿಕರಣಗೊಳಿಸಿದ್ದಾರೆ.
1 ) ವೀರಶೈವರು – ವೇದ ಆಗಮ ಶಾಸ್ತ್ರ ಪುರಾಣ ಶ್ರುತಿಗಳನ್ನು ಮಾನ್ಯ ಮಾಡುತ್ತಾರೆ ಹೀಗಾಗಿ ವೀರಶೈವವು ಹಿಂದೂ ಧರ್ಮಾದ ಅವಿಭಾಜ್ಯ ಅಂಗ .
2 ) ವೀರಶೈವರಲ್ಲಿ -ಅಯ್ಯಾಚಾರ ಅಂದರೆ ಮುಂಜವಿ ಅಥವಾ ವೈದಿಕತನದ ಉಪನಯನಕ್ಕೆ ಸಂಪೂರ್ಣ ಹೋಲಿಕೆಯಿರುವ ಆಚರಣೆ ಇದೆ.
3 )ವೀರಶೈವರಲ್ಲಿ – ಕರ್ಮ ಸಿದ್ಧಾಂತ , ಜಾತಿ ವ್ಯವಸ್ಥೆ , ಸೂತಕ ಪಂಚಾಗ, ಮುಹೂರ್ತ ,ವಾಸ್ತು ಇತರ ಮೌಢ್ಯತನಕ್ಕೆ ಪೂರಕವಾಗುವ ಆಚರಣೆಗಳಿವೆ .
4 ) ವೀರಶೈವರಲ್ಲಿ- ಮೂರ್ತಿ ಪೂಜೆ ಇದೆ ನಂದಿ ವೀರಭದ್ರ ಗಣಪತಿ ಮುಂತಾದ ದೇವತೆಗಳ ಪೂಜೆ ಸಲ್ಲುತ್ತದೆ .
5 ) ವೀರಶೈವರಲ್ಲಿ-ರುದ್ರಾಭಿಷೇಕ ,ಕೋಟಿ ಬಿಲ್ವಾರ್ಚನೆ ,ಲಕ್ಷ ದೀಪೋತ್ಸವ ,ಬುತ್ತಿ ಪೂಜೆ ಬೆಂಕಿ ದಾಟುವುದು ಅಸ್ತ್ರಗಳನ್ನು ಚುಚ್ಚಿಕೊಳ್ಳುವುದು ಅವೈಜ್ಞಾನಿಕ ಪದ್ಧತಿಗಳು ರೂಢಿಯಲ್ಲಿವೆ .
6 ) ವೀರಶೈವರಲ್ಲಿ-ಭಿಕ್ಷಾಟನೆ ಇದೆ ಅಯ್ಯಾಚಾರವಾದ ನಂತರ ಸ್ವಾಮಿಯು ವಟುವು ಐದು ಮನೆ ಭಿಕ್ಷೆ ಎತ್ತಬೇಕು.
7 ) ವೀರಶೈವರಲ್ಲಿ-ಪುನರ್ಜನ್ಮ ಹಾಗು ಹಿಂದಿನ ಜನ್ಮ ನಂಬಿಕೆ ಇದೆ.
8 ) ವೀರಶೈವರಲ್ಲಿ-ಮಾಟ ಮಂತ್ರ ದೆವ್ವ ಪಿಶಾಚಿಗಳ ಪರಿಕಲ್ಪನೆಗಳಿವೆ.
9 ) ವೀರಶೈವರಲ್ಲಿ-ಮಹಿಳೆಗೆ ಯಾವುದೇ ಸ್ಥಾನಮಾನವಿಲ್ಲ -ಅವಳು ಮಲದ ಭಾಂಡ
10 )ವೀರಶೈವರಲ್ಲಿಯು ಶ್ರೇಣೀಕೃತ ವ್ಯವಸ್ಥೆಯಿದೆ- ಹಿರೇಮಠರು ಶ್ರೇಷ್ಠರು ಚಿಕಮಠ, ಸಾಲಿಮಠ, ಗುರು ಮಠ, ಮಠಪತಿ ,ಗಣಾಚಾರಿ ಕನಿಷ್ಠರು
11 ) ವೀರಶೈವರಲ್ಲಿ ರಾಮಾಯಣ ಮಹಾಭಾರತದ ಪುರಾಣಗಳಿವೆ -ಅಗಸ್ತ್ಯ ಮುನಿ ರಾವಣ ವಿಭೀಷಣ ಹಣಮಂತ ಮುಂತಾದದವರ
12 ) ವೀರಶೈವರಲ್ಲಿ-ಮಡಿ ಹುಡಿ ಎಂಜಲು ಮುಂತಾದವುಗಳ ಆಚರಣೆ ಇವೆ.
13 ) ವೀರಶೈವರಲ್ಲಿ-ಗುರುಗಳಾದವರು ದುಡಿಯದೆ ಇನ್ನೊಬ್ಬರ ಶ್ರಮದಿಂದ ಬಂದ ಆದಾಯದಲ್ಲಿ ಬದುಕಬೇಕು.
14 ) ವೀರಶೈವರಲ್ಲಿ- ವರ್ಗ ವರ್ಣ ಲಿಂಗ ತಾರತಮ್ಯವಿದೆ . ಆಶ್ರಮ ಮಾನ್ಯತೆಯನ್ನು ಮಾಡುವ ವೀರಶೈವರು ಹಿಂದೂಗಳು
15 ) ವೀರಶೈವರಲ್ಲಿ-ಸ್ಥಾವರ ಲಿಂಗದ ಪೂಜೆ ಅಗ್ರವಾಗಿರುತ್ತದೆ
16 ) ವೀರಶೈವರಲ್ಲಿ-ಪಾಪ ಪುಣ್ಯ ಸ್ವರ್ಗ ನರಕದ ಪರಿಕಲ್ಪನೆಗಳಿವೆ
17 ) ವೀರಶೈವರಲ್ಲಿ-ದೇಶದ ಹನ್ನೆರಡು ಜ್ಯೋತಿರ್ಲಿಂಗಗಳನ್ನು ಉಪಸನೆ ಮಾಡುತ್ತಾರಲ್ಲದೆ ಅಲ್ಲಿ ನಡೆಯುವ ಕುಂಭ ಮೇಳದಲ್ಲಿಯೂ ಭಾಗವಹಿಸುತ್ತಾರೆ.
18 ) ಯಜ್ಞ ಹವನ ಹೋಮ ನವಗ್ರಹ, ಸಮಾರಾಧನೆ ,ಜ್ಯೋತಿಷ್ಯ ವೃತ ನೇಮ ಪದ್ಧತಿ ಇವೆ
19 ) ಇಷ್ಟಲಿಂಗ ಪೂಜೆಯಲ್ಲಿ ; ಬೆಳ್ಳಿ ಚಿನ್ನದ ತಟ್ಟೆ ಧೂಪ ದೀಪ ಮತ್ತು ವೈದಿಕ ಮಂತ್ರಗಳಿಂದ ಕೂಡಿರುತ್ತದೆ .
20 ) ಪವಿತ್ರ ನದಿ ಸ್ನಾನ , ಗೃಹ ಶಾಂತಿ ,ಪೂಜೆಗೆ ಹಾಲು ಕುಂಬಳಕಾಯಿ ನಿಂಬೆ ಹಣ್ಣು ಹೆಚ್ಚುವುದು ,ಕುಂಕುಮ ಬಳಕೆ
21 ) ಗುರು ದಕ್ಷಿಣೆ ಗುರುವಿಗೆ ಚಿನ್ನ ಬೆಳ್ಳಿಯ ಕಿರೀಟ ಸನಾತನ ಧರ್ಮದಲ್ಲಿನ ಬೆತ್ತ , ಪೂಜೆಯ ವೇಳೆಯಲ್ಲಿ ಘಂಟೆ ಜಾಂಗಟೆ ವಾದ್ಯ
22 ) ಗುರು ಶಿಷ್ಯರ ಸಂಬಂಧವು ದಾಸ್ಯತ್ವದಿಂದ ಕೂಡಿದ್ದು ಅಸಮಾನತೆ ವ್ಯವಸ್ಥೆಯನ್ನು ಬಿಂಬಿಸುತ್ತದೆ.
23 ) ನಾಮಕರಣ ,ಗರ್ಭ ಸೀಮಂತ ಕಾರಣ ,ಮದುವೆ ಶವ ಸಂಸ್ಕಾರವು ಸಂಪೂರ್ಣ ವೈದಿಕಮಯವಾಗಿರುತ್ತದೆ
24 ) ವೀರಶೈವರಲ್ಲಿ-ವಿಧವೆಗೆ ಮರು ಮದುವೆ ನಿಷಿದ್ಧ ಆದರೆ ವಿಧುರ ಮಾತ್ರ ಮದುವೆ ಮಾಡಿಕೊಳ್ಳಬಹುದು
25 ) ವೀರಶೈವರಲ್ಲಿ ಒಂದೇ ಜಾತಿಯಲ್ಲಿರುವವರು ಮಾತ್ರ ಗುರುಗಳಾಗಬಹುದು
ಇಂತಹ ಇನ್ನು ಅನೇಕ ಆಚರಣೆಗಳು ವೃತಗಳು ವೀರಶೈವರಲ್ಲಿ ಇರುವ ಕಾರಣ ವೀರಶೈವರು ಹಿಂದೂಗಳು .
ಯಾವುದೋ ಒಂದು ಕಾಲ ಗರ್ಭದಲ್ಲಿ ಲಿಂಗಾಯತ ತತ್ವಕ್ಕೆ ಮಾರು ಹೋಗಿ ಲಿಂಗಾಯತ ಧರ್ಮದ ಆಚರಣೆಗಳನ್ನು ಅನುಸರಿಸಿ ಲಿಂಗಾಯತ ತತ್ವವನ್ನು ವೀರರೊಪಗೊಳಿಸಿದ ವೀರಶೈವರು ಮೂಲತಃ ಹಿಂದುಗಳೇ .
–ಡಾ.ಶಶಿಕಾಂತ ರುದ್ರಪ್ಪ ಪಟ್ಟಣ ರಾಮದುರ್ಗ