ಗಜ಼ಲ್..
ಕಣ್ಮುಚ್ಚದೆ ಕಾಯುತಿರುವೆ ಒಲವ ಹೂಗಳನು ಹಾಸಿ
ಎವೆಯಿಕ್ಕದೆ ನಿರುಕಿಸುತಿರುವೆ ಕಂಗಳ ಮುತ್ತುಗಳನು ಸೋಸಿ
ಹಗಲು ಉರುಳಿ ಕರಿಯಿರುಳು ಇಡುತಿದೆ ಹೆಜ್ಜೆಯನು
ಕದಪುಗಳು ಕರೆಗಟ್ಟುತಿವೆ ಕೆಂಗುಲಾಬಿಬಣ್ಣಗಳು ಮಾಸಿ
ಅವಿತು ಇಣುಕುತಿಹ ಚಂದಿರ ಮೋಡದ ಮರೆಯಿಂದ
ಸೋಂಕುತಿವೆ ನವುರಾಗಿ ತಂಗಾಳಿ ಅಲೆಗಳು ಬೀಸಿ
ಉರಿಯುತಿವೆ ಅಲ್ಲವೇ ಶಮೆಗಳು ಮಂದ ಬೆಳಕಲಿ
ತಣ್ಣಗೆ ಕುದಿಯುತಿವೆ ಎದೆಯ ಅಳಲುಗಳು ರೋಸಿ
ಮನದ ತಳಮಳವ ಬೇಗಂ ಹೇಳಲಾರಳು ನಿನಗೆ
ಮೌನದಲಿ ಬಿಕ್ಕುತಿವೆ ಪಾರಿಜಾತ ಗಂಧಗಳು ಸೂಸಿ
🌹ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ 🙏