ಬಸವ ನಾಡಿನ ಕರುಣೆ ಕಂದ
ಬಡತನ ಹಾಸಿ ಹೊದ್ದು
ಬದುಕು ನೂಕಿದ ಧೀರ
ವರುಷವಾಯಿತು ನೀನು
ಭೂಮಿ ಆಗಲಿ
ಕೋಗಿಲೆ ಕಂಠದ ಪೋರ
ಧರ್ಮ ದೈವದ ಧ್ವಜವ ಮೆರೆಸಿದೆ
ಬರಡು ನೆಲದ ಮೇಲೆ
ಬಸವನಾಡಿನ ಕರುಣೆ ಕಂದ
ಹಾಡು ಗಾಯನ
ಪುರಾಣ ಪ್ರವಚನ ಅಂದ
ಮಾತು ಮುಗಿಲ ನಗೆಯು
ಪ್ರೀತಿ ಸ್ನೇಹ ಆಸ್ತಿಯು
ಶರಣ ತತ್ವಕೆ ದುಡಿದ ಯೋಧ
ಜನರ ಭಾವದ ಮಮತೆ ಕೋಶ
ಬಡವಾದವು ವಾದ್ಯ ಆಕರ
ಹೆಸರು ಈಶ್ವರ ಗಟ್ಟಿ ಹಟಗಾರ
ಮಧುರ ಶಬ್ದದ ಮೋಡಿಗಾರ
ಮಾಯವಾದೆ ಮೋಡ ಮರೆಯಲಿ
ಶರಣ ಲೋಕದ ಬೆಳ್ಳಿ ಚುಕ್ಕಿ
ನಿನ್ನ ನುಡಿಯ ಕೇಳುತಿಹೆವು ಹೆಕ್ಕಿ ಹೆಕ್ಕಿ
-ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಶರಣ ಮಿತ್ರ ವಾಗ್ಮಿ ಪ್ರವಚನ ಪಟು ಲಿಂಗೈಕ್ಯ ಈಶ್ವರ ಮಂಟೂರ ಇವರು ಬಯಲೊಳಗೆ ಬಯಲಾಗಿ ಎರಡು ವರುಷ ತನ್ನಿಮಿತ್ತ ನನ್ನ ಕವನ