e-ಸುದ್ದಿ, ಮಸ್ಕಿ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು
ಪಟ್ಟಣದಲ್ಲಿ ಎಐಕೆಎಸ್‍ಎಸ್ ನೇತೃತ್ವದಲ್ಲಿ ದೇಶಾದ್ಯಂತ ರೈತರು ಹಾಗೂ ವಿವಿಧ ಸಂಘಟನೆಗಳು ಭಾರತ ಬಂದ್ ಕರೆ ಹಿನ್ನೆಲ್ಲೆಯಲ್ಲಿ ಮಸ್ಕಿ ಬಂದ್ ನಡೆಸಲಾಯಿತು. ಹಳೇ ಬಸ್‍ನಿಲ್ದಾಣದ ಬಳಿ ಇರಿವ ಅಂಬೇಡ್ಕರ್ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿದರು.
ಕೆಆರ್‍ಎಸ್ ತಾಲುಕು ಅಧ್ಯಕ್ಷ ಸಂತೋಷ ಹಿರೇದಿನ್ನಿ ಮಾತನಾಡಿ ಕಳೆದ 12 ದಿನಗಳಿಂದ ರೈತರು ಧರಣಿ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಮೊಂಡತನ ಮಾಡುತ್ತಿದ್ದು ರೈತರ ಹಿತಾಸಕ್ತಿಯನ್ನು ಬಲಿಕೊಡದಂತೆ ಮಾತುಕತೆ ನಡೆಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಮಾರಕವಾದ ಮಸೂದೆಗಳನ್ನು ಹಿಂಪಡೆದು ರೈತರ ನೆರವಿಗೆ ಧಾವಿಸಬೇಕು ಎಂದರು.
ಪುರಸಭೆ ಸದಸ್ಯ ನೀಲಕಂಠಪ್ಪ ಭಜಂತ್ರಿ ಮಾತನಾಡಿದರು. ಕೆಆರ್‍ಆರ್‍ಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀಜಯ ಬಡಿಗೇರ್, ಅಖಿಲ ಭಾರತ ಕಿಸಾನ ಸಭಾದ ಮಸ್ಕಿ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಕ್ಯಾತ್ನಟ್ಟಿ, ಕೆಆರ್‍ಆರ್‍ಎಸ್ ತಾಲೂಕು ಅಧ್ಯಕ್ಷ ತಾಯಪ್ಪ, ಕೆಜೆಆರ್‍ಎಸ್ ಬಸವರಾಜ ಹಿರೇದಿನ್ನಿ, ಕೆಆರ್‍ಎಸ್‍ನ ಮಾರುತಿ ಜಿನ್ನಾಪೂರ, ಹುಚ್ಚರಡ್ಡಿ ಹಿರೇದಿನ್ನಿ, ಗಂಗಪ್ಪ ತೊರಣದಿನ್ನಿ, ಅನಿಲ್‍ಕುಮಾರ ಮಸ್ಕಿ, ದೇವರಾಜ ಮಸ್ಕಿ ಸೇರಿದಂತೆ ಮುಂತಾದವರು ಇದ್ದರು.
ಕಾಂಗ್ರೆಸ್‍ನಿಂದ ಪ್ರತಿಭಟನೆ: ಭಾರತ್ ಬಂದ್ ಹಿನ್ನೆಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಗಾಂಧಿನಗರದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರಮುಖ ಬೀದಿಗಳಲ್ಲಿ ಪಾದಾಯಾತ್ರೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗೆ ಕೂಗಿ ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡರಾದ ಎಚ್.ಬಿ. ಮುರಾರಿ, ಹನುಮಂತಪ್ಪ ಮುದ್ದಾಪೂರು, ಶ್ರೀಶೈಲಪ್ಪ ಬ್ಯಾಳಿ, ಸಿದ್ದನಗೌಡ ತುರ್ವಿಹಾಳ, ಹುಸನೇಬಾಪಾ ಬಳಗಾನೂರು, ದುರ್ಗೇಶ ವಕೀಲರು, ಶೇಖರಗೌಡ, ಬಸನಗೌಡ ಮುದಬಾಳ, ಮಲ್ಲಯ್ಯ ಮುರಾರಿ, ಆನಂದ ವಿರಾಪೂರು, ಶರಣಪ್ಪ ಯಲಿಗಾರ, ಕೃಷ್ಣ ಚಿಗರಿ ಇದ್ದರು.