🎋 ರೈತನ ಹಾಡು 🎋
ಬಿಳಿಮುಗಿಲ ನೋಡ ಸರದೈತಿ
ಕರಿಮೋಡ ಇಳಿದು ಬಂದೈತಿ //
ನೋಡಲ್ಲಿ ಮಳೆ-ಸರುವು ಬಂದೈತಿ
ಬಾನೊಳಗ ಗಡಿಗೆ ಒಡದೈತಿ
ಹಾಲಿನ್ಹಾಂಗ ಧಾರೆ ಸುರದೈತಿ
ನೀರಡಿಸಿದ ನೆಲಾ ಕುಣದೈತಿ //
ಹೊತ್ತ ಗಪ್ಪ ಅಡಗಿ ನಿಂದೈತಿ
ಮಿಂಚೊಂದು ಮಿಂಚಿಬಂದೈತಿ
ಗುಡಗುಡಿಸಿ ಗುಡುಗು ಬಂದೈತಿ
ಗಾಳಿ ಬೀಸಿ ಬೀಸಿ ಹೊಡದೈತಿ //
ಬೆಳೀ ಎಲ್ಲ ಜೋಲಿ ಹೊಡದೈತಿ
ಬಾಗಿ ನೆಲಕ ಒರಗಿ ನಿಂದೈತಿ
ಭೂತಾಯಿಗೆ ಹರುಷ ತಂದೈತಿ
ಮೈತುಂಬ ಹಸಿರು ಚಂದೈತಿ //
ಸಂತಸದಿ ತನುವು ತಣಿದೈತಿ
ಅದನೋಡಿ ಮನಸು ನಲಿದೈತಿ
ಮಳೆ ಇದ್ರ ಬದುಕು ನಂದೈತಿ
ಬೆಳೀಯಿಂದ ಲೋಕ ಉಳಿದೈತಿ //
-ಹಮೀದಾ