ಹೋರಾಟ

ಹೋರಾಟ

(ವಿದ್ಯಾರ್ಥಿ ಬರೆದ ಕತೆ)

ದೇಶ ಬದಲಾಗುತ್ತಿದ್ದರೂ ಹಳ್ಳಿಜನರ ಬಡತನದ ಜೀವನ ಬದಲಾಗುತ್ತಿಲ್ಲ. ರಾಮಪ್ಪ ಮನೆ ಕಟ್ಟಿಸಲು, ಮಗಳ ಮದುವೆ ಮಾಡಲು, ಮಗನ ಶಾಲಿ ಹಾಕಲು ಹಣವಿಲ್ಲದೆ ಬೆಂಗಳೂರಗೆ ಕೆಲಸ ಹುಡುಕುತ್ತ ಹೋದ. ಅಂತೂ ಪಕ್ಕದ ಮನೆಯರ ಬಳಿ ಸ್ವಲ್ಪ ಸಾಲ ಮಾಡಿ ಬಂದ. ಎರೆಡು ದಿನಗಳಾಗಿವೆ ಕೆಲಸ ಆಗಷ್ಟೇ ಸಿಕ್ಕಿದೆ. ಬೆಂಗಗಳೂರಿನ ಬೀದಿಯೊಂದರಲ್ಲಿ ಯಾವ ದಿಕ್ಕು ತೋಚದೆ ಒಂದೇ ಸವನೆ ಮ್ಯಾವ್ ಮ್ಯಾವ್ ಎಂದು ಕೂಗುತಿದ್ದ ಬೆಕ್ಕಿನ ಮರಿಯೊಂದನ್ನು ಕಂಡು ಕರುಳು ಕಿವುಚಿದಂತಾಗಿ ಅದನ್ನು ಎತ್ತಿಕೊಂಡು ತಾನು ಬಾಡಿಗೆ ಹಿಡಿದಿದ್ದ ಗುಡಿಸಲೊಂದರಲ್ಲಿ ಇರಿಸಿ ಆಗಾಗ ತಾನು ತಂದ ಚಹಾ ಮತ್ತೆ ಬನ್ ಹಾಕುತ್ತಿದ್ದ. ಹೀಗೆ ವಾರಗಳುರುಳಿದವು.

ರಾಮಪ್ಪ ಕೆಲಸಕ್ಕೆ ಮುಂಜಾನೆ ಹೋದಾವ ಸಂಜೆ ಆರಕ್ಕೆ ಬರಾವ. ಅಲ್ಲಿಯವರೆಗೆ ಆ ಬೆಕ್ಕು ಹಸಿದುಕೊಂಡೆ ಇರುತ್ತಿತ್ತು. ಎಷ್ಟು ಅಂತ ಹಸಿದುಕೊಂಡು ಇರಬೇಕು, ಈಗ ಮತ್ತಷ್ಟು ದೊಡ್ಡದಾಗಿದೆ ಹೊಟ್ಟೆ ಕೇಳಬೇಕಲ್ವಾ!. ಗುಡಿಸಲು ಬಿಟ್ಟು ಬೀದಿಗೆ ಆಹಾರ ಹುಡುಕುತ್ತ ಹೊರಟಿತು. ಹೆಂಗೋ ಒಂದು ದೊಡ್ಡದಾದ ಮನೆಯೊಳಗೆ ಸೇರಿತು. ಅಲ್ಲಿ ಅದೇ ತರ ತನ್ನ ವಾರಿಗಿಯ ಬೆಕ್ಕು ಇತ್ತು. ಪಾಪ ಇದಕ್ಕೇನು ಗೊತ್ತು ಆ ಬೆಕ್ಕು ಅಮೇರಿಕಾದಿಂದ ತಂದ ವಿಶಿಷ್ಟ ಜಾತಿಯದೆಂದು. ಅದನ್ನು ಕಂಡ ಕೂಡಲೇ ಈ ಬೆಕ್ಕು ಚಿನ್ನಾಟಕ್ಕೆಂದು ಅದರ ಜೊತೆ ಆಡಲು ಹೊರಟಾಗ ಆ ಬೆಕ್ಕಿನ ಮಾಲೀಕ ಇದನ್ನು ಕಾಲಿನಿಂದ ಒದ್ದಾಗ ಏನೂ ತಿಳಿಯದೆ ಮೆಟ್ಟಿಲಲ್ಲಿ ಬಿದ್ದು ಎಲ್ಲೋ ಅಡಗಿಕೊಂಡಿತು.. ಆ ಜಾತಿ ಬೆಕ್ಕಿನ ಮಾಲೀಕನ ಮಗಳು ಅದಕ್ಕೆ ಆಹಾರ ಇತ್ತಾಗ ಅದು ತಿಂದು ಬಿಟ್ಟದನ್ನು ಬೀದಿ ಬೆಕ್ಕಿಗೆ ನಾಲಿಗೆಗೆ ಸಿಗುವಷ್ಟು ಸವಿಯಿತು. ಹೀಗೆ ಆ ಜಾತಿಬೆಕ್ಕನ್ನು ಚಿನ್ನಾಟಕ್ಕೆ ಕರೆದು ಆಟವಾಡುತ್ತಿದ್ದನು ಕಂಡು ಮಾಲೀಕನ ಮಗಳು ಖುಷಿಪಟ್ಟಳು. ಅವಳನ್ನ ನೋಡಿ ಮನದುಂಬಿದ ಮಾಲೀಕ ಬೆಕ್ಕಿಗೆ ಆಗಾಗ ಸ್ವಲ್ಪ ರಾತ್ರಿ ಮಿಕ್ಕಿದ ಅನ್ನವನ್ನೋ ಸಾರನ್ನೋ ಕೆಲಸದವರಿಂದ ಹಾಕಿಸುತ್ತಿದ್ದ. ಅಂತೂ ಈ ಬೀದಿ ಬೆಕ್ಕಿಗೆ ಒಂದು ಸೂರು ಸಿಕ್ಕಿತು.

ಆ ದಿನ ಜಾತಿ ಬೆಕ್ಕಿಗೆ ಮೈ ಹುಷಾರಿಲ್ಲದಂತಾಗಿ ಬೀದಿ ಬೆಕ್ಕಿಗೂ ಅದು ತಾಕೀತು. ಜಾತಿ ಬೆಕ್ಕನ್ನು ಆಸ್ಪತ್ರೆಗೆ ಕರೋದೋಯ್ದ ಮಾಲೀಕ ಅದನ್ನು ಸುಧಾರಿಸಿದ. ಇತ್ತ ಬೀದಿ ಬೆಕ್ಕು ಅದೇ ಸ್ಥಿತಿಯಲ್ಲಿ ಮೂಲೆಯಲ್ಲಿ ಮಲಗಿತ್ತು. ನೋಡಿದ ಮಾಲೀಕ ಅದನ್ನು ಹೊರಗಡೆ ಎಸಿಯಿರಿ ಎಂದು ಹೊರತಳ್ಳಿದ. ಪಾಪ ಬೀದಿ ಬೆಕ್ಕಿಗೆ ಅದು ತಿಳಿದಿರಲಿಲ್ಲ ಹೊಟ್ಟೆ ಪಾಡಿಗಾಗಿ ಮೇಲ್ವರ್ಗದ ಮಾನವನಿಗೆ ಯಾವುದೋ ರೂಪದಲ್ಲಿ ದುಡಿಯಬೇಕೆಂದು. ಬಹುಷಃ ಗೊತ್ತಿದ್ದರೆ ತುತ್ತು ಅನ್ನಕ್ಕಾಗಿ ಕಷ್ಟವಾದರೂ ಸರಿ ಅದು ದುಡಿಯುತ್ತಿತ್ತೇನೋ!. ಕೊನೆಗೆ ಹಸಿದು ಸೊರಗಿ ರಾಮಪ್ಪನ ಮನೆಮುಂದೆ ಹೊರಟಿದ್ದ ಬೆಕ್ಕಿನ್ನು ಕೂನ ಹಿಡಿದು ರಾಮಪ್ಪ ಮರುಗಿ ಅದನ್ನು ಹಿಡಿದು ಹಾಲುಣಿಸಿದ. ಬೆಂಗಳೂರಿಗೆ ಬಂದು ಸ್ವಲ್ಪ ಹಣಗಳಿಸಿದ ರಾಮಪ್ಪ ಅದಕ್ಕೆ ಪ್ರತಿ ದಿನ ಒಂದೊಂದು ಹಾಲಿನ ಪ್ಯಾಕೆಟ್ ಹೊಡೆದು ಬಟ್ಟಲದಲ್ಲಿಟ್ಟು ದುಡಿಯೋಕೆ ಹೋಗುತ್ತಿದ್ದ. ಹಸಿವಾದಾಗ ತಾನೇ ಹಾಲು ಕುಡಿಯುತ್ತಿತ್ತು..

ನನಗೆ ತೋಚಿದ್ದು

ಮಾನವನಲ್ಲಿ ಪ್ರಾಣಿಗಳ ಬಗ್ಗೆ ಕರುಣೆ ಇದೆಯೇ ಅಥವಾ ಇಲ್ಲವೇ?. ಎಲ್ಲೋ ಒಬ್ಬರಲ್ಲಿ ಇರಬಹುದು.
ಅದನ್ನು ತಿಳಿಯುವಷ್ಟರಲ್ಲಿ ಪ್ರಾಣಿಗಳ ಬದುಕು ಕರಗಬಹುದು ಇಲ್ಲಾ ಕೊನೆಗೂಳ್ಳಬಹುದು.ಕೊನೆಗೆ ಆ ಬಡ ಬೆಕ್ಕಿಗೆ ಬಡವನೇ ಆಸರೆಯಾದನೆಂಬುದು ಮನಮುಟ್ಟಿಸುವಂಥದ್ದು..

ಮೌನೇಶ ಬಾರಕೇರ್ ಮಸ್ಕಿ 

Don`t copy text!