ನಿತ್ಯ ಹೊಸ ಹರುಷ

ನಿತ್ಯ ಹೊಸ ಹರುಷ

ಮುಗಿದಿಲ್ಲ ಕೊನೆಯಿಲ್ಲ
ಮುಕ್ತಾಯವಲ್ಲ
ಅಂತ್ಯವೆನ್ನೋದು
ಬರೀ ಭ್ರಮೆಯು
ಬದುಕೆಂಬುದು ನೋಡು
ಜೋಡು ಎತ್ತಿನ ಗಾಡಿ
ಹೊಸದೊಂದು ಸವಿಗನಸು
ನಿತ್ಯ ಮೂಡುವ ಚಿಗುರು
ಸೂರ್ಯೋದಯ ಸೂರ್ಯಾಸ್ತ
ಹಗಲು ಇರುಳು
ಬೆಳಕು ಜ್ಞಾನದ ಕಿಡಿಯು
ಅರಿವು ಜ್ಯೋತಿಯ ಕುಡಿಯು
ನಡೆವವನು ಎಡುವನು
ಎಡವಿದವ ಓಡುವನು
ನೋವು ನಲಿವಿಗೆ
ಏಕೆ ಲೆಕ್ಕ ?
ಕಳೆದು ನಿನ್ನಯ ದಿನ
ಬರುವ ನಾಳೆಯ ಕ್ಷಣ
ಅನವರತ ದುಡಿಮೆ
ವರ್ತಮಾನ
ಸತ್ಯ ಸಮತೆಯ ಪಥಕೆ
ಹಳೆದಿಲ್ಲ ಹೊಸದಿಲ್ಲ
ಮತ್ತೆ ಬೀಸಿದೆ ನೋಡು
ಕ್ರಾಂತಿಯ ಗಾಳಿ
ಬುದ್ಧ ಬಸವರ ಮಂತ್ರ
ನಿತ್ಯ ಪರುಷ
ನಿತ್ಯ ಹರುಷ
ನಿತ್ಯ ಹೊಸ ವರುಷ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!