ಹೊಸ ವರುಷ

ಹೊಸ ವರುಷ

 

ಹೊಸ ವರುಷದಿ ಹೊಸ ಹರುಷದಿ
ಹೊಸ ಹಾದಿಯ ಹೊಸ ಪಯಣದಿ
ಹೊಸ ಭಾವದಿ ಹೊಸ ಜೀವದಿ
ಹೊಸ ಬದುಕನು ಹೊಸೆಯುವಾ ||

ಹೊಸ ಆಸೆಯ ಹೊಸ ಕನಸಲಿ
ಹೊಸ ಹೂವಿನ ತುಸು ಪರಿಮಳ
ಹೊಸ ನಗುವಿನ ರಸನಿಮಿಷದಿ
ಖುಷಿಯಿಂದಲೆ ಸಾಗುವಾ ||

ಹೊಸ ಗೆಲುವಿಗೆ ಹೊಸ ಭರವಸೆ
ಹೊಸ ಯೋಚನೆ ಹೊಸ ಯೋಜನೆ
ಹೊಸ ಶಕ್ತಿಯು ಹೊಸ ಯುಕ್ತಿಯು
ಹೊಸ ಬುದ್ಧಿಯ ಶುದ್ಧಮಾಡಿ ಬೆಳೆಯುವಾ ||

ಹೊಸ ರಂಗಿನ ಹೊಸ ಗುಂಗಲಿ
ಹೊಸ ಘಮಲಿನ ಹೊಸ ಅಮಲಲಿ
ಹೊಸ ಗಾನದ ರಸ ಪಾನವು
ತನುಮನವ ತಣಿಸಲಿ ನೋವನೆಲ್ಲ ಮರೆಸಲಿ||

ಸವಿತಾ ಮಾಟೂರ.

Don`t copy text!