ಸಿಧ್ಧಗುರು

ಸಿಧ್ಧಗುರು

ಹೂವು ಬಿರಿವ ಸದ್ದಿನಲ್ಲಿ
ಸಿದ್ಧ ಗುರುವಿನ ಹೆಜ್ಜೆ ಸದ್ದಿದೆ
ಅರಳಿ ನಗುವ ಕುಸುಮದಲಿ
ಗುರುವೆ ನಿಮ್ಮ ಕರುಣೆ ಇದೆ

ಎತ್ತೆತ್ತ ನೋಡಿದಡತ್ತ ನೀವೆ ನೀವು
ಬೀಸುವಾ ಗಾಳಿ ತಂದ ಗಂಧದಲಿ
ಹೊಸ ಚಿಗುರು ಹೂ ಹಣ್ಣಿನಲ್ಲಿ
ಗುರುವೆ ನಿಮ್ಮ ನಿಜರೂಪವಿದೆ

ಅಚ್ಚು ಬಿಳುಪಿನ ಬಣ್ಣದಲ್ಲಿ
ಮಂದಹಾಸದ ನಗೆ ಇದೆ
ನುಡಿವ ಮಾತುಗಳ ಮುತ್ತಿನಲಿ
ಎಲ್ಲರನ್ನು ಹಿಡಿದಿಡುವ ಶಕ್ತಿ ಇದೆ

ದಿನಗಳೆನಿಕೆಯಲಿ ನೀವಿಲ್ಲದಿರಬಹುದು
ಮನದ ಮಂದಿರದಲ್ಲಿ ನಿತ್ಯ
ನಂದಾದೀಪವು ನೀವು
ತಂದೆ ನಿಮ್ಮ ಚರಣಕ್ಕೆ ನಮೋ ಎಂದೆ

ಆಶಾ ಯಮಕನಮರಡಿ

Don`t copy text!