- ಬಸವ ಧರ್ಮ ಅವೈದಿಕ
ಬುದ್ಧನ ನಂತರ ಈ ದೇಶದಲ್ಲಿ ಸಂಪೂರ್ಣ ವೈಚಾರಿಕ ಮನೋಭಾವ ಹೊಂದಿದ ಪರಿಪೂರ್ಣ ವಿಚಾರ ಧಾರೆಯ ಆಂದೋಲನವೇ ಶರಣ ಚಳುವಳಿ
ಇವತ್ತು ಬೌದ್ಧ ಧರ್ಮ ಭಾರತ ಬಿಟ್ಟು ಪೌರಾತ್ಯ ರಾಷ್ಟ್ರಗಳಿಗೆ ಹೋಯಿತು.
ವೈದಿಕ ಸಂಸ್ಕೃತಿಗೆ ಪರ್ಯಾಯ ಚಳುವಳಿಯನ್ನು ವೈದಿಕರು ಆಪೋಶನಗೊಳಿಸಿದರು. ಲಿಂಗಾಯತ ಧರ್ಮ ಇದು ಸಂಪೂರ್ಣ ಅವೈದಿಕ. ಹಿಂದುಯೇತರ ಧರ್ಮವಾದ ಎಲ್ಲಾ ಸಾಕ್ಷಿ ದಾಖಲೆ ಸೈದ್ಧಾಂತಿಕ ಸ್ಪಷ್ಟತೆ ಧೃಡತೆ ಇದ್ದರೂ ಕೂಡ ಇಂತಹ ವೈಚಾರಿಕ ಕ್ರಾಂತಿಯಿಂದ ಕೂಡಿದ ಧರ್ಮವನ್ನು ನಾವಿನ್ನೂ ಸನಾತನ ಧರ್ಮದ ಅಂಗ ಎಂದು ನಂಬಿರುವವರು ಅಧ್ಯಯನಶೀಲತೆ ಇಲ್ಲದವರು.
ಶರಣ ಧರ್ಮ ವರ್ಗ ವರ್ಣ ಲಿಂಗ ಭೇದ ರಹಿತ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಧರ್ಮ.
ಇಂದು ಜಗತ್ತಿಗೆ ಗೊತ್ತಾಗಲಿ ಬಸವಣ್ಣ ಜಗತ್ತಿನ ಮೊದಲ ಪ್ರಜಾ ಪ್ರಭುತ್ವ ವಾದಿ ಎಂದು
ಈ ಹಿನ್ನೆಲೆಯಲ್ಲಿ ನಾವೆಲ್ಲರೂ ನಮ್ಮ ಸಂವಾದ ಚಿಂತನ ಆಲೋಚನಾ ಕ್ರಮದ ವೈಚಾರಿಕ ಮನೋಭಾವವನ್ನು ಗಟ್ಟಿ ಗೊಳಿಸೋಣ. ಲಿಂಗಾಯತ ಧರ್ಮ ಮಾನ್ಯತೆ ಅಲ್ಪ ಸಂಖ್ಯಾತ ಸ್ಥಾನಮಾನಕ್ಕಾಗಿ ಧ್ವನಿ ಎತ್ತುವ ಮೂಲಕ ಹೋರಾಟ ಜೀವಂತವಾಗಿ ಇಡೋಣ.
ಲಿಂಗಾಯತ ಧರ್ಮದ ಮಾನ್ಯತೆ ಅಲ್ಪ ಸಂಖ್ಯಾತ ಸ್ಥಾನಮಾನ ಭಿಕ್ಷೆ ಅಲ್ಲ ಸಂವಿಧಾನ ನೀಡಿದ ಹಕ್ಕು
-ಡಾ ಶಶಿಕಾಂತ ಪಟ್ಟಣ ರಾಮದುರ್ಗ