ಲಿಂಗಾಯತರು ಹಿಂದುಗಳಲ್ಲ – ವಿರೋಧಿಗಳೂ ಅಲ್ಲ

ಲಿಂಗಾಯತರು ಹಿಂದುಗಳಲ್ಲ – ವಿರೋಧಿಗಳೂ ಅಲ್ಲ

ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಚಳುವಳಿ. ಮಾನವ ಹಕ್ಕುಗಳು ಆಂದೋಲನ. ವರ್ಗ ವರ್ಣ ಲಿಂಗ ಭೇದ ರಹಿತ ಆಶ್ರಮ ರಹಿತ ಸಾಂಸ್ಥಿಕಕರಣವಲ್ಲದ ಸರ್ವ ಶ್ರೇಷ್ಟ ಮಾನವ ಧರ್ಮ.

ಬಸವಣ್ಣ ಒಂದು ವೇಳೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹುಟ್ಟಿದ್ದರೆ ಇಂದು ಜಗತ್ತು ಲಿಂಗಮಯ ಆಗುತ್ತಿತ್ತು.

ಲಿಂಗಾಯತ ಧರ್ಮವು ವೇದ ಆಗಮ ಶಾಸ್ತ್ರ ಪುರಾಣಗಳನ್ನು ಸಾರಾ ಸಗಟಾಗಿ ತಳ್ಳಿ ಹಾಕುತ್ತವೆ. ಬಹುದೇವೋಪಾಸನೆ ಸ್ಥಾವರ ಪೂಜೆ ರುದ್ರಾಭಿಷೇಕ ಅರ್ಚನೆ ನಿಮ್ಮ ವೃತ ಎಂಬ ಅನೇಕ ಶುಷ್ಕ ಆಚರಣೆಗೆ ಮುಂದಾಗದೆ
ಅಂತಹ ಅನೇಕ ಕ್ರಿಯೆಗಳನ್ನು ನಿರಂತರ ಪ್ರಶ್ನೆ ಮಾಡುತ್ತಾ
ತನ್ನದೇ ಆದ ಭಿನ್ನ ಹಾದಿಯಲ್ಲಿ. ನಡೆದರು ಶರಣರು.

ಸನಾತನ ಧರ್ಮದ ಕಟ್ಟಳೆ ಶೋಷಣೆ ಕಂದಾಚರ ಕಂಡು ಬೇಸತ್ತು ಬುದ್ಧ ಮೊದಲಿಗೆ ಸಿಡಿದೆದ್ದು ಪರ್ಯಾಯ ಚಳುವಳಿಯನ್ನು ವೈದಿಕರ ವಿರುದ್ಧ ಆರಂಭಿಸಿದನು.
ವಿಚಿತ್ರ ಆದರೂ ಸತ್ಯ ಬುದ್ಧನನ್ನು ಸನಾತನವಾದಿಗಳು
ದಶಾವತಾರದಲ್ಲಿ ಸ್ಥಾನ ಕಲ್ಪಿಸಿ
ಬೌದ್ಧ ಧರ್ಮ ಭಾರತ ಬಿಟ್ಟು ಪೌರಾತ್ಯ ರಾಷ್ಟ್ರಗಳಿಗೆ ಹೋಗುವಂತೆ ಮಾಡಿದರು.

ಆದರೆ ಬಸವಣ್ಣ ವೈದಿಕ ಮೂಲ ಬೇರಿಗೆ ಕೊಡಲಿ ಏಟು ಕೊಟ್ಟ ಅದುವೆ ಯಜ್ಞೋಪವೀತ ಜನಿವಾರ ಧಾರಣೆ ಮುಂಜಿವೆ ಪ್ರಸಂಗ ಅದನ್ನು ಧಿಕ್ಕರಿಸಿ ಮನೆ ಬಿಟ್ಟು ಹೊರ ನಡೆದನು.
ದಲಿತರ ಬಡವರ ಕಾರ್ಮಿಕರ ಶ್ರಮಿಕರ ಶೋಷಿತರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತುವ ಮೂಲಕ ಸಮಾಜದ ಸಂಘಟನೆಯ ನಾಯಕತ್ವ ವಹಿಸಿದರು.

ಬಸವಣ್ಣವರು ಸಾರಿದ ವಚನಗಳು ಬಂಡಾಯ ವಿದ್ರೋಹಿ ಸಾಹಿತ್ಯ ಚಿಂತನೆಗಳು .
ಕಲ್ಯಾಣ ಕ್ರಾಂತಿಯ ನಂತರ ಸುಮಾರು ಇನ್ನೂರು ಐವತ್ತು ವರ್ಷಗಳ ವರೆಗೆ ವಚನ ಚಳುವಳಿ ಭೂಗರ್ಭ ಸೇರಿತು.
ಇತ್ತೀಚೆಗೆ. ಡಾ ಫ ಗು ಹಳಕಟ್ಟಿ ಅವರ ಮತ್ತು ಅನೇಕ ಸಂಶೋಧಕರ ನಿರಂತರ ಪ್ರಯತ್ನದಿಂದಾಗಿ ನಮಗೆ ಪರಿಷ್ಕೃತ ವಚನ ಸಾಹಿತ್ಯ ದೊರಕಿದೆ
ಹಿಂದೂ ಎನ್ನುವುದು ಧರ್ಮವಲ್ಲ ಅದು ಸಂಸ್ಕೃತಿ ಮತ್ತು ಬದುಕಿನ ಮಾರ್ಗವೆಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅದನ್ನು ನಮ್ಮ ಪ್ರಧಾನಿಯವರು ಅನೇಕ ಬಾರಿ ಹೇಳಿದ್ದಾರೆ.
ವಸ್ತು ಸ್ಥಿತಿ ಹೀಗಿದ್ದಾಗ ಭಾರತದಲ್ಲಿ ಹುಟ್ಟಿದ ಜೈನ ಬೌದ್ಧ ಸಿಖ್ ಧರ್ಮದಂತೆ ಲಿಂಗಾಯತ ಬಸವ ಧರ್ಮವೂ ಕೂಡ ಸ್ವತಂತ್ರ ಹಿಂದುಯೇತರ ಅವೈದಿಕ ಧರ್ಮ. ಬಸವಣ್ಣನವರ ವಚನಗಳು ಚಿಂತನೆಗಳು ಇಂದು ಇಡೀ ಜಗತ್ತಿಗೆ ಆಕರ್ಷಕವಾಗಿವೆ. ಮಗ್ನಾ ಕಾರ್ಟ ದವರು ಸಹಿತ
ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತು ಎಂದು ಹೇಳುತ್ತಾರೆ.
ವಸ್ತು ಸ್ಥಿತಿ ಹೀಗಿರುವಾಗ ಲಿಂಗಾಯತರು ಹಿಂದೂಗಳು ಎಂದು ಹೇಳುತ್ತಾ ಅವರಿಗೆ ಸ್ವತಂತ್ರ ಧರ್ಮ ಮಾನ್ಯತೆಯನ್ನು ಮತ್ತು. ಅಲ್ಪ ಸಂಖ್ಯಾತ ಸ್ಥಾನ ಮಾನ ನೀಡದೆ
ಲಿಂಗಾಯತ ಧರ್ಮದ ಅಸ್ಮಿತೆಯನ್ನು ಕಾಪಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನಾಧಾರ ತೋರಿಸುತ್ತಿರುವುದು ಅತ್ಯಂತ. ನೋವಿನ ಸಂಗತಿ.
ಇದಕ್ಕೆ ಸಾವಿರಾರು ದಾಖಲೆ ಕೋರ್ಟ್ ಮಹತ್ವದ ತೀರ್ಪು
ಶಾಸನಗಳು. ಮೌಖಿಕ ಸಾಕ್ಷಿಗಳ ಸಂಗ್ರಹ ಬ್ರಿಟಿಷ್ ಸರಕಾರಿ ಅಧಿಸೂಚನೆಗಳು.
ಜನಗಣತಿ ಮಾಹಿತಿ
ಮೇಲಾಗಿ ಶರಣರ ವಚನಗಳು ಸಾಕ್ಷಿ ಪುರಾವೆಗಳಿವೆ.
ಲಿಂಗಾಯತರು ಖಂಡಿತಾ. ಹಿಂದೂಗಳಲ್ಲ ಹಾಗಂತ ಹಿಂದೂ ವಿರೋಧಿಗಳೂ ಅಲ್ಲ.
ಜ್ಯಾತ್ಯಾತೀತ ನಿಲುವು ವಿಶ್ವ ಬಂಧುತ್ವ ಶರಣರ ಮುಖ್ಯ ಗುರಿ.
ಲಿಂಗಾಯತ ಧರ್ಮದ ಪುನರುತ್ಥಾನ ವಚನ ಚಳುವಳಿ ಮುಂದುವರಿಕೆ ನಮ್ಮೆಲ್ಲರ ಕರ್ತವ್ಯ ಜವಾಬ್ದಾರಿ.

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!