ಲಿಂಗಾಯತ – ಅರ್ಥ ಮತ್ತು ವಿವರಣೆ
ಲಿಂಗ ಇದು ಸೃಷ್ಟಿಯ ಸಮಷ್ಟಿಯ ಸಂಕೇತ. ದ್ರಾವಿಡರ ಉಪಾಸನಾ ಸಾಧನ
ಶಿವಲಿಂಗ. ಭಾರತದಲ್ಲಿ ಪ್ರಾಚೀನ ಕಾಲದ ಪೂಜೆಗೆ ಒಳಪಡುವ ಸಾಧನ .
ಮುಂದೆ ಶೈವರಲ್ಲಿ ಕಾಳಾಮುಖಿ, ಕಾಪಾಲಿಕ, ಲಕುಲಿಷ, ಪಾಶುಪತ, ಶುದ್ಧ ಶೈವ ಎಂಬ ಪ್ರಭೇದ ಹುಟ್ಟಿ ಬೆಳೆದದ್ದು ಇತಿಹಾಸ .
ಚರಲಿಂಗ ಘನ. ಲಿಂಗ ಶಿವ ಲಿಂಗ ಸ್ಥಾವರಗಳು ಬೆಳೆದು ನಿಂತವು. ಶಿವ ಲಿಂಗ ಇದು ಗಂಡು ಹೆಣ್ಣಿನ ಮಿಲನದಿಂದ ಹುಟ್ಟಿದ ಕಲ್ಪನೆ ಎಂಬುದು ಕೂಡ ಧಾರ್ಮಿಕ ಚಿಂತಕರ ವಾದ.
ಚಾರ್ವಾಕರು ನಿರಾಕಾರವಾದಿ
ನಾಸ್ತಿಕರು.
ಮುಂದೆ ಜೈನರು ಆಸ್ತಿಕರು ಅಹಿಂಸಾ ಮಾರ್ಗವನ್ನು ಪಾಲಿಸಲು ಧರ್ಮ ಸ್ಥಾಪನೆ ಮಾಡಿಕೊಂಡವರು.
ಬುದ್ಧ ನಿರಾಕಾರ ಮತ್ತು ಅಧ್ಯಾತ್ಮ ಚಿಂತನೆ ಹುಟ್ಟು ಹಾಕಿ ಮತ್ತು ಭಾರತದ ಸನಾತನ ಧರ್ಮದ ಆಚರಣೆಗಳನ್ನು ಮೂಢ ನಂಬಿಕೆಗಳನ್ನು ವಿರೋಧಿಸಿ
ಪರ್ಯಾಯ ಚಳುವಳಿಯನ್ನು ಆರಂಭಿಸಿದನು. ಬುದ್ಧ ಜಗತ್ತಿನ ಮೊಟ್ಟ ಮೊದಲ ಮಾನವ ಹಕ್ಕುಗಳ ಚಳುವಳಿ ರೂವಾರಿ
ಅವನ ಚಿಂತನೆಗಳು ಜಗತ್ತಿಗೆ ಹರಡಿವೆ.
ಬಸವಣ್ಣ ಬುದ್ಧನ ನಂತರ ಸುಮಾರು 1700 ವರ್ಷಗಳ ಬಳಿಕ ಮತ್ತೆ ಇಂತಹ ಅಪೂರ್ವ ಕ್ರಾಂತಿ ಬಂಡಾಯ ಹುಟ್ಟು ಹಾಕಿದ.
ಅದುವೇ ಲಿಂಗಾಯತ ಆಂದೋಲನ.
ನಿರಾಕಾರ ನಿರ್ಗುಣ ಪರಬ್ರಹ್ಮ ತಾನಾಗಬೇಕು ತನ್ನೊಳಗೆ ಬಯಲು ಕಾಣ ಬೇಕು. ತಾನೇ ಲಿಂಗವಾಗಬೇಕು ಎಂದು ಬಸವಣ್ಣ ಪಂಚ ಮಹಾಭೂತಗಳ ಶಕ್ತಿ ಮನುಷ್ಯನೂ ಹೊಂದಿದ್ದಾನೆ.ಸೃಷ್ಟಿಯ ಸಮಷ್ಟಿಯ ಸಂಕೇತ ಲಿಂಗ .ಅದು ಜೀವಾತ್ಮನ ಹುಟ್ಟು ಲಿಂಗ ಪರಿಸರ ಲಿಂಗ ಜಗತ್ತು ಅದರ ಯೋಗ ಕ್ಷೇಮ ಸಂರಕ್ಷಣೆ ನಮ್ಮ ಕಾಳಜಿ ಎಂಬ ಲಿಂಗ ತತ್ವದೊಂದಿಗೆ ಸ್ಥಾವರವನ್ನು ವಿರೋಧಿಸಿ
ಅರಿವಿನ ಕುರುಹಾಗಿ ಇಷ್ಟಲಿಂಗ
ಆವಿಷ್ಕಾರ ಮಾಡಿದವರು ಅಪ್ಪ ಬಸವಣ್ಣ .
ಅಷ್ಟಾವರಣ ಗುರು ಲಿಂಗ ಜಂಗಮ ಮಂತ್ರ ವಿಭೂತಿ ರುದ್ರಾಕ್ಷಿ ಪಾದೋದಕ ಪ್ರಸಾದ
ಎಂಬ ತತ್ವಗಳನ್ನು ಕಾಯಗುಣದಲ್ಲಿ ಸಮಿಕರಿಸಿದವನು ಬಸವಣ್ಣ.
ಬಸವ ಪೂರ್ವ ಯುಗದ ಆಚರಣೆಗೆ ತದ್ವಿರುದ್ಧವಾಗಿ ಬಸವಣ್ಣ ಅಲ್ಲಮ ಅಕ್ಕ ಬಹುತೇಕ ಶರಣರು ತಮ್ಮ ಅನುಭವವನ್ನು ಹಂಚಿ ಕೊಂಡರು.
ಲಿಂಗ – ಅಂದರೆ ಜಗತ್ತು ಸಮಷ್ಟಿ ಸೃಷ್ಟಿ ಬ್ರಹ್ಮಾಂಡ. ಬಸವಣ್ಣ ಇಡೀ ಜಗತ್ತಿನ ಅದರಾಚಿನ ಪಂಚ ಮಹಾಭೂತಗಳ ಒಟ್ಟು ಶಕ್ತಿ. ಸಂಚಯನದ ಕುರುಹು ಇಷ್ಟಲಿಂಗ
ಅಸ್ಪ್ರಶ್ಯತೆ ಹೋಗಲಾಡಿಸಬೇಕು ಎಂಬ ಬಹುಜನರ ಬೇಡಿಕೆಗೆ ಬಸವಣ್ಣ ಉತ್ತರವಾದ.
ಗುಡಿ ಮಂದಿರ ಸಂಸ್ಕೃತಿ ಹೊರತು ಪಡಿಸಿ
ಕಾಯವೇ ಕೈಲಾಸ, ದೇಹವೇ ದೇವಾಲಯ ಎಂದೆನ್ನುವ ದಿಟ್ಟ ಮಾನವತಾವಾದಿ
ಭೂಮಿಯ ಮೇಲಿನ ಸಕಲ ಚರಾಚರ ಜೀವಿಗಳ ಹಿತ ಕಾಯುವ ಕೆಲಸ ಶರಣರದ್ದು.
ಸಕಲ ನಿಷ್ಕಲ ನೆಲ ಜಲ ಪ್ರಾಣಿ ಪಕ್ಷಿ ಸಂಕುಲ ಪ್ರೀತಿಸುವ ಹೊಣೆಗಾರಿಕೆ ಶರಣರ ಮೇಲಿದೆ ಎಂದು ಹೇಳುತ್ತ.
ಚಾರ್ವಾಕ ದರ್ಶನ ಜೊತೆಗೆ ಬುದ್ಧನ ಮಾನವ ಜೀವ ಪ್ರೇಮಇಲ್ಲಿ ಕಾಣುತ್ತೇವೆ.
ಲಿಂಗ ಇಷ್ಟ ಲಿಂಗ ಇದು ಉಪಾಸನಾ ವಸ್ತು ಅಲ್ಲ. ಇದು ಯೋಗ ಸಾಧನ ಅರಿವಿನ ಕುರುಹು .
ಆಯತ – ಅಂದರೆ ಇಂತಹ ಜಗತ್ತು ಸೃಷ್ಟಿಯನ್ನು ಸ್ವೀಕರಿಸಿದವರು ಎಂದರ್ಥ .
ಭಕ್ತ ಕೇಂದ್ರಿತ ಪೂಜಾರಿ ಇಲ್ಲದ
ಪೌರೋಹಿತ್ಯ ವಿರೋಧಿಸಿದ
ಸ್ವಯಂ ಸ್ಪೂರ್ತಿಯಿಂದ ಜಂಗಮ ಸೇವೆಗೆ ಬದ್ಧನಾಗುವ ಪ್ರಕ್ರಿಯೆಯೇ ಲಿಂಗಾಯತ
ಬಸವಣ್ಣನವರ ನಂತರ ಲಿಂಗ ಜಂಗಮ ತತ್ವ ಶೈವರ ಮಾರ್ಪಾಡಿನಿಂದ ಇಂದು ಲಿಂಗಾಯತ ಒಂದು ವೃತ ನಿಮ್ಮ ಪೂಜೆ ಎಂಬರ್ಥದಲ್ಲಿ ಕಾಣಿಸಿಕೊಳ್ಳುತ್ತದೆ
ಲಿಂಗಾಯತ ಧರ್ಮದ ಮೂಲ ಆಶಯ ಉದಾತ್ತಿಕರಣ, ಬಯಲು ಶೂನ್ಯ
ಕೇವಲ ಲಾಂಚನ ಧರಿಸಿ ಲಿಂಗಾಯತರು ಎಂದೆನ್ನುವುದು ತಪ್ಪು ಪ್ರಮಾದ.
ಮನುಷ್ಯನನ್ನು ಸಕಲ ಜೀವಿಗಳನ್ನು ನೆಲ ಜಲ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಪ್ರೀತಿ ಮಾಡುವವನು ಲಿಂಗಾಯತ ಇದು ಬಸವಣ್ಣನವರ ಆಶಯ.
ಹೀಗಾಗಿ ಲಿಂಗ ತತ್ವ ಸಿದ್ಧಾಂತಗಳನ್ನು ಅರಿತವ ಲಿಂಗಾಯತ ಹೊರತು
*ಲಿಂಗಾಯತ ಧರ್ಮದಲ್ಲಿ ಹುಟ್ಟಿದವನು
*ಅಥವಾ ಲಿಂಗ ಕಟ್ಟಿ ಕೊಂಡವರು ಲಿಂಗಾಯತರು ಅಲ್ಲ
_ಡಾ ಶಶಿಕಾಂತ ಪಟ್ಟಣ ರಾಮದುರ್ಗ