ಇಳೆಯ ಕಾಂತಿ ಸಂಕ್ರಾಂತಿ.

ಇಳೆಯ ಕಾಂತಿ ಸಂಕ್ರಾಂತಿ.

ಎಳ್ಳು ಬೆಲ್ಲ ಸ್ವಾದದ ನಾಡಿನ ಹಬ್ಬ
ಎಳ್ಳು ಅರಿಷಿನದ ಸ್ನಾನದ ಹಬ್ಬ
ದ್ವೇಷ,ವೈರ ಮರೆಯುವ ಚೆಂದದ ಹಬ್ಬ
ಬಂಧುಬಳಗದಲಿ ನಗೆ ಬಂಧದ ಹಬ್ಬ

ನವೋತ್ಸಾಹ ಚಿಮ್ಮುವ ಸಡಗರದ ಹಬ್ಬ
ರೈತನ ಬಾಳಿನ ಫಸಲಿನ ಕನಸಿನ ಹಬ್ಬ
ಸುಗ್ಗಿಯ ಹಿಗ್ಗನು ಸಗ್ಗವಾಗಿಸುವ ಹಬ್ಬ
ಪ್ರಕೃತಿಯಲಿ ಸಂಚಲನ ತರುವ ಸಂಕ್ರಾಂತಿ ಹಬ್ಬ

ಒಲುಮೆ-ನಲುಮೆಯ ಲವಲವಿಕೆಯ ಹಬ್ಬ
ಬಾಂಧವ್ಯ ಸ್ನೇಹ ಕಟ್ಟಿಕೊಡುವ ಕಳೆಯ ಹಬ್ಬ
ದವಸ ಧಾನ್ಯಗಳ ಮನೆತುಂಬುವ ಇಳೆಯ ಹಬ್ಬ
ಬೆವರು ಬಂಗಾರವಾಗಿಸುವ ಹಸಿರ ಉಸಿರ ಹಬ್ಬ

ಮನೆ ಮನಗಳಲಿ ಬೆಳಕ ಸಾಂಗತ್ಯದ ಹಬ್ಬ
ಎಳ್ಳುಬೆಲ್ಲ ಮೆಲ್ಲುತ್ತಾ ಮಕ್ಕಳ.ಗಾಳಿಪಟದ ಹಬ್ಬ
ಗೋವುಗಳ ಪೂಜಿಸುವ ಸಾಂಪ್ರದಾಯಿಕ ಹಬ್ಬ      ಸೂರ್ಯ ಮಕರ ರಾಶಿಯ ಪಥ ಸಂಕ್ರಮಣವು

ಭೀಷ್ಮಪಿತಾಮಹ ಕೊನೆಯುಸಿರಿಗೆ ಕಾಯ್ದ ಪರ್ವ    ‌.  ಹಬ್ಬಗಳಲಿಯೆ ನಮ್ಮತನ ಅಡಗಿಹ ಮೊದಲ ಹಬ್ಬ
ದೇಸಿಯ ಅಡುಗೆ,ಉಡುಗೆ ಸಾರುವ ಸಾಂಸ್ಕೃತಿಕತೆ
ಚಳಿ ಕಳೆದು ಹಗಲು ಹೆಚ್ಚಿಸುವ ಕಾಂತಿಯ ಸಂಕ್ರಾಂತಿ

ಜಯಶ್ರೀ ಭ.ಭಂಡಾರಿ.
ಬಾದಾಮಿ.

Don`t copy text!