ವಿರಕ್ತ ಪರಂಪರೆ ಬಸವಾಮಯವಾಗಲೀ

ವಿರಕ್ತ ಪರಂಪರೆ ಬಸವಾಮಯವಾಗಲೀ

ಹನ್ನೆರಡನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ನಡೆದ ಹತ್ಯಾಕಾಂಡ ಕೊಲೆ ರಕ್ತದೋಕುಳಿ ಕಂಡು ಜನರು ಭಯ ಭೀತಿಗೆ ಒಳಗಾದ ಮುಂದಿನ ಜನರು ವಚನ ಸಾಹಿತ್ಯ ಇದು ವಿದ್ರೊಹಿ ಬಂಡಾಯ ರಾಜರಿಂದ ತಿರಸ್ಕರಿಸಲಾಯಿತು ಎಂಬ ಹೆದರಿಕೆಯಿಂದ ಸುಮಾರು ಎರಡು ನೂರು ವರ್ಷ ವಚನ ಸಾಹಿತ್ಯ ಅಧ್ಯಯನ ರಚನೆ ಪ್ರತಿ ಪಾಠ ಮಾಡುವ ಕೆಲಸ ಸಂಪೂರ್ಣ ನಿಂತಿತು.
ಹದಿನೈದನೆಯ ಶತಮಾನದಲ್ಲಿ ಪ್ರೌಢದೇವರಾಯ ವಚನ ಸಾಹಿತ್ಯ ಅಧ್ಯಯನ ಸಂಕಲನಕ್ಕೆ ಮರು ಪ್ರೇರಣೆ ಸ್ಫೂರ್ತಿ ನೀಡಿ
ಕಂದಾಯ ಗ್ರಾಮವನ್ನು ನಿರ್ಮಿಸಿ ನೂರೊಂದು ವಿರಕ್ತರನ್ನು ನೇಮಿಸಿ ಪ್ರತಿ ಕಂದಾಯ ಗ್ರಾಮದ ಆದಾಗ ಆಯಾ ವಿರಕ್ತರಿಗೆ ದೊರಕುವ ಹಾಗೆ ಮಾಡಿದ ಶ್ರೇಷ್ಠ ಪುರುಷ ರಾಜ ಮರ್ಯಾದೆ ಕೊಟ್ಟ ವಚನ ಅಧ್ಯಯನಕಾರ ಪ್ರೌಢ ದೇವರಾಯ.
*ವಿರಕ್ತ* ಪದ ಹೀಗೆ ಬಳಕೆಯಲ್ಲಿತ್ತೆ ಹೊರತು ಆಚರಣೆಯಲ್ಲಿ ಇರಲಿಲ್ಲ.
ರಾಜಾಶ್ರಯ ಪಡೆದ ಅಂದಿನ ಪ್ರಸಿದ್ಧ ಸಾಹಿತಿಗಳು ಸಿಂಗಿರಾಜ ಲಕ್ಕಣ್ಣ ದಂಡೆಶ ಭಿಮಕವಿ ಚಾಮರಸ ಹೀಗೆ ಅನೇಕರು ಶರಣ ಚಳುವಳಿಯ ಆಶಯ ಸಾಹಿತ್ಯ ಅಧ್ಯಯನ ಮಾಡಲು ಆರಂಭಿಸಿದರು.

ಮುಂದೆ ಎಡೆಯೂರು ಸಿದ್ದಲಿಂಗೇಶ್ವರ ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಇಂತಹ ಸುಂದರ ವಿರಕ್ತ ವ್ಯವಸ್ಥೆಗೆ ಚಾಲನೆ ನೀಡಿ
ಹಳ್ಳಿಗೆ ಒಂದು ರಾತ್ರಿ ಪಟ್ಟಣಕ್ಕೆ ಪಂಚ ರಾತ್ರಿಯ ಯೋಜನೆಯಡಿ ವಿರಕ್ತ ಧರ್ಮ ಕೃತಿಗಳ ರಚನೆ ಪ್ರಸಾರ ಮಾಡುವವನು ಚರ ಜಂಗಮನಾಗಿರಬೇಕು. ಹಳ್ಳಿಯಲ್ಲಿ ಕೇವಲ ಒಂದು ರಾತ್ರಿ ಇದ್ದು ಹೋಗುವ ವಿರಕ್ತರು ಪಟ್ಟಣಗಳಲ್ಲಿ ಐದು ರಾತ್ರಿ ವಸತಿ ಇದ್ದು ತಾಡೋಲೆ ಸಂಗ್ರಹಿಸಿ ಸಂಪಾದನೆ ಮಾಡಿ ಕೊಳ್ಳಲು ಆಕರ ಜನರ ಬಳಿಯ ಸಾಮಗ್ರಿಗಳನ್ನು ಸೇರಿಸಿ ಅವುಗಳಿಂದ ಸಂಕಲನ ಪ್ರತಿ ಮಾಡುವ ಕೆಲಸ ಮಾಡುತಿದ್ದರು.

ಎಡೆಯೂರು ಸಿದ್ದಲಿಂಗೇಶ್ವರ ಗುರುಗಳು ಗೋಸಲ ಚೆನ್ನಬಸವೇಶ್ವರ ಪರಂಪರೆ ಮುಂದೆ ಎಡೆಯೂರು ಸಿದ್ದಲಿಂಗೇಶ್ವರ ಅವರ ಶಿಷ್ಯ ಬೋಳ ಬಸವ ಹೀಗೆ ತೋಂಟದಾರ್ಯ ವಿರಕ್ತ ಪರಂಪರೆ ಆರಂಭವಾಯಿತು.

*ವಿರಕ್ತ ಅರ್ಥ ಮತ್ತು ವಿವರಣೆ*
———————————-
ವಿರಕ್ತ ಎಂದರೆ ರಕ್ತ ಸಂಬಂಧ ಹೊಂದದವರಿಗಾಗಿ ದುಡಿಯುವ ಶ್ರಮಿಸುವ ಪ್ರಾಮಾಣಿಕ ಹಂಬಲ ಉಳ್ಳವರು ಎಂದರ್ಥ. ಇಲ್ಲಿ ತಮ್ಮ ಕುಟುಂಬ ರಕ್ತ ಸಂಬಂಧ ಹೊಂದಿದವರಿಗೆ ಮಾತ್ರ ಆರ್ಥಿಕ ಸಾಮಾಜಿಕ ಧಾರ್ಮಿಕ ಯೋಗ ಕ್ಷೇಮ ಬಯಸುವುದನ್ನು ಕಡ್ಡಾಯವಾಗಿ ವಿರೋಧಿಸಿ ವಿರಕ್ತ ಪರಂಪರೆಯಲ್ಲಿ ಪೂರ್ವಾಶ್ರಮದಲ್ಲಿ ಇರುವವರ ನಂಟು ಹೊಂದದೆ ಪರೋಪಕಾರ ದಾಸೋಹದ ತತ್ವಗಳನ್ನು ಅಳವಡಿಸಿಕೊಳ್ಳುವುದು ಮತ್ತು ಅನುಷ್ಟಾನಕ್ಕೆ ತರಲು ಪ್ರಯತ್ನಿಸುವುದು ಶ್ರಿ ಸಿದ್ಧಲಿಂಗ ಶರಣರ ಉದ್ದೇಶವಾಗಿತ್ತು.

೧೭ ಶತಮಾನದಲ್ಲಿ ಕಟ್ಟಿಗೆ ಹಳ್ಳಿ ಶ್ರಿ ಸಿದ್ಧಲಿಂಗ ಸ್ವಾಮಿಗಳು ಮಠ ಪರಂಪರೆ ಆರಂಭಿಸಿದರು.
ಅವುಗಳನ್ನು ಸಾಂಸ್ಥಿಕರಣಗೊಳಿಸಿ ವಿರಕ್ತ ಪರಂಪರೆ ಮಠ ಎಂದು ಘೋಷಣೆ ಮಾಡಿದರು ಕಾರಣ ಆಗ ದೊರೆಯುತ್ತಿರುವ ಮೈಸೂರು ಕೊಡಗು ಇಕ್ಕೇರಿ ಶಿವಮೊಗ್ಗ ಕೆಳದಿ ಸೊಂದೆ ಕಿತ್ತೂರು ಬೆಳವಡಿ ಅರಸರ ರಾಜಾಶ್ರಯ ಮತ್ತು ಪ್ರೋತ್ಸಾಹ. ರಾಜ ಮನೆತನಗಳು ತಮ್ಮ ಧಾರ್ಮಿಕ ಸಾಮಾಜಿಕ ಆಚರಣೆಗೆ ಇಂತಹ ವಿರಕ್ತ ಪರಂಪರೆ ಮಠಗಳನ್ನು
ಅವಲಂಬಿಸಿದ ರಾಜರು ಭೂಮಿ ಹಣ ಕನಕ ನೀಡಿ ಸಂಸ್ಥಾನ ಮಠ ನಿರ್ಮಿಸಿದರು.
ಕ್ರಮೇಣ ವಿರಕ್ತ ಪರಂಪರೆ ಕ್ಷೀಣಿಸುತ್ತಾ ಮಠ ಎಂಬ ಸಂಸ್ಥೆ ನಿರ್ಮಾಣವಾಯಿತು.
ಇಲ್ಲಿ ಸಮಯ ಹುಟ್ಟಿಕೊಂಡವು.
ಮುರುಗಿ ಸಮಯ ಚಿಲ್ಲಾಳ
ಸಂಪಾದನಾ ಕೆಂಪಿ ಕುಮಾರ ಸಮಯವೆಂದು ಭೇದ ಹುಟ್ಟಿಕೊಂಡವು.

ಹನ್ನೆರಡನೆಯ ಶತಮಾನದ ಶರಣೆ ಆಮುಗೆ ರಾಯಮ್ಮ

ಹೊನ್ನಬಿಟ್ಟಡೇನು, ಹೆಣ್ಣಬಿಟ್ಟಡೇನು, ಮಣ್ಣಬಿಟ್ಟಡೇನು,
ವಿರಕ್ತನಾಗಬಲ್ಲನೆ ?
ಆದ್ಯರ ವಚನಂಗಳ ಹತ್ತುಸಾವಿರವ ಲೆಕ್ಕವಿಲ್ಲದೆ ಓದಿದಡೇನು,
ನಿತ್ಯರಾಗಬಲ್ಲರೆ ?
ಮಂಡೆಯ ಬೋಳಿಸಿಕೊಂಡು ಅಂದಚಂದಕೆ ತಿರುಗುವ ಜಗಭಂಡರ ಮೆಚ್ಚುವನೆ, ಅಮುಗೇಶ್ವರಲಿಂಗವು ?/116

ಎಂದು ಹೇಳುತ್ತ ವಿರಕ್ತ ಪರಂಪರೆಯ ಜವಾಬ್ದಾರಿ ಕೆಲಸ ಮಾಡುವ ಬಗ್ಗೆ ಟೀಕಿಸುತ್ತಾ ಡಾಂಭಿಕ ವಿರಕ್ತರನ್ನು ತಿವಿಯುತ್ತಾಳೆ.

ಇಷ್ಟಲಿಂಗದಲ್ಲಿ ಪ್ರಾಮಾಣಿಕ ನಂಬಿಕೆಯಿಲ್ಲದೆ, ಇಷ್ಟಲಿಂಗವನ್ನು ಸ್ವೀಕರಿಸಲು ಅನುಭವ ಮಂಟಪಕ್ಕೆ ಕಾಲಿಡುತ್ತಿರುವ ವ್ಯಕ್ತಿಯನ್ನು ಅಮುಗೆ ರಾಯಮ್ಮ ನೋಡಿದಾಗ, ಅವಳು ಆಕ್ರೋಶದಿಂದ ಹೇಳಿದ ವಚನ ಈ ಕೆಳಗಿನಂತೆ ಇದೆ :

ಮೂಗು ಇಲ್ಲದವನಿಗೆ ಕನ್ನಡಿ ಹಿಡಿಯುವುದೇಕೆ?
ಕೈಯಿಲ್ಲದವನನ್ನು ಕುದುರೆ ಸವಾರಿ ಮಾಡಲು ಏಕೆ ಒತ್ತಾಯಿಸಬೇಕು?
ಕಾಲಿಲ್ಲದವನ ಏಣಿ ಹತ್ತಲು ಏಕೆ ಮಾಡಬೇಕು?
ಹೇ ಅಮುಗೇಶ್ವರಲಿಂಗ,
ಭಕ್ತಿ, ಜ್ಞಾನ ಮತ್ತು ವೈರಾಗ್ಯವನ್ನು ತಿಳಿಯದವನಿಗೆ ಇಷ್ಟಲಿಂಗ ಏಕೆ? [ವಚನ ಸಂಖ್ಯೆ. 1286]

ವೀರಕ್ತರು ಅಂದು ಗುರು ಲಿಂಗ ಜಂಗಮ ತತ್ವಗಳನ್ನು ನಿಜಾಚರಣೆಯನ್ನು ಜನರಿಗೆ ಮುಟ್ಟಿಸುವ ದಿಟ್ಟ ಕೆಲಸ ಮಾಡಬೇಕಿತ್ತು.

ಆದರೆ ಹಾಗೆ ತಮ್ಮ ಕೆಲಸದಲ್ಲಿ ವಿರಕ್ತ ಪರಂಪರೆ ಕ್ರಿಯೆಗಳಲ್ಲಿ ವಿಫಕರಾಸವರನ್ನು ಕಂಡು ಕೆಂಡ ಮಂಡಲವಾದ ಗಣಾಚಾರಿ ಆಮುಗೇ ರಾಯಮ್ಮ.

ವಿರಕ್ತ ವಿರಕ್ತ ವಿರಕ್ತರೆನ್ನ ಬಹುದೆ.
ಹಾದಿ ಹೋಕುವವರೆಲ್ಲ ವಿರಕ್ತರೆ
ಕಾವಿ ಹೊದ್ದು ತಿರುಗುವ ಗಾವಿಲರು ವಿರಕ್ತರೆ
ಜೀವಗಳ್ಳರ ವಿರಕ್ತರೆಂದೊಡೆ
ಅಘೋರ ನರಕ ತಪ್ಪದು ಅಮುಗೇಶ್ವರ

ಇಂದು ಈ ವಚನ ಹೆಚ್ಚು ಪ್ರಚಲಿತ ಎಂದೆನ್ನಬಹುದು.

ಇಂದು ವಿರಕ್ತ ಮಠಗಳು ಒಂದು ಔದ್ಯೋಗಿಕ ಕೇಂದ್ರ ವಸಾಹತು ವಾಣಿಜ್ಯ ಮಳಿಗೆಗಳಾಗಿ.
ಬ್ಯಾಂಕ್ ಕಾಲೇಜು ವ್ಯಾಪಾರ ಮಳಿಗೆಗೆ ರಾಜಕೀಯ ಅಡ್ಡಾ ಆಗಿ ನಿರ್ಮಾಣಗೊಂಡಿವೆ.
ಬಹುತೇಕ ವಿರಕ್ತ ಮಠಗಳಲ್ಲಿ ತಮ್ಮ ತಮ್ಮ ರಕ್ತ ಸಂಬಂಧಿಗಳನ್ನು ಉತ್ತರಾಧಿಕಾರಿ ಆಗಿ ನೇಮಿಸುತ್ತಾರೆ. ಶರಣ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ತಮ್ಮ ತಮ್ಮ ಮಠದ ಜಾತ್ರೆ ಲಕ್ಷ ದೀಪೋತ್ಸವ ಸಂಭ್ರಮ ಕೋಟಿ ಬಿಲ್ವಾರ್ಚನೆ ತುಲಾಭಾರ ಸೇವೆ ಹೀಗೆ ಬಹುತೇಕ ವಿರಕ್ತ ಮಠಗಳು ವೈದಿಕ ಆಚರಣೆಯಲ್ಲಿ ಮುಳುಗಿವೆ
ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಎಂದೆನ್ನವ ಅಭಿದಾನ ನೋಡಿದಾಗ ನಗೆಯು ಬರುತ್ತದೆ.
ನಿರಂಜನ ಎಂದರೆ ರಂಜನಿಯವಲ್ಲದ ಎಂದರ್ಥ.
ನಮ್ಮ ವಿರಕ್ತ ಮಠದ ಸ್ವಾಮೀಜಿ
ಕಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸುತ್ತಾರೆ.
ಮಠಗಳ ಅವ್ಯವಹಾರ ಟಿವಿ ಪತ್ರಿಕೆ ಮಾಧ್ಯಮಗಳು ಅವರನ್ನು ವೈಭವೀಕರಿಸುವ ರೀತಿ ರಾಜ ಮರ್ಯಾದೆ ನೋಡಿದರೆ ಇವರು ಹೇಗೆ ನಿರಂಜನರು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ.
ವಿರಕ್ತ ಮಠಗಳು ಈಗ ಖಾಸಗಿ ಕುಟುಂಬದ ಸದಸ್ಯರೊಂದಿಗೆ ನಡೆಸುವ ವ್ಯವಹಾರಗಳ ಪ್ರಕ್ರಿಯೆ.
ಹಣ ಸಂಗ್ರಹಿಸಿ ಸಂಪಾದನೆ ಮಾಡಿರುವ ಮಠಗಳು ಬಸವ ತತ್ವ ಸಿದ್ಧಾಂತಗಳನ್ನು ಪ್ರಸಾರ ಮಾಡುವಲ್ಲಿ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ.
ಹೀಗೆ ಧ್ವನಿ ಎತ್ತಿದ ಡಾ ಎಂ ಎಂ ಕಲಬುರ್ಗಿ ಅವರನ್ನು ಇಂತಹ ವ್ಯವಸ್ಥೆ ಮುಗಿಸಿತು.
ಸತ್ಯ ಹೇಳುವ ಹಾಗಿಲ್ಲ.
ಇನ್ನು ಬಹುತೇಕ ಸಾಹಿತಿಗಳು ಸ್ವಾಮಿ ಮಠಗಳ ಕೃಪಾ ಪೋಷಿತ ಪಾತ್ರ ಮಾಡಿ .ಮಠದ ಕಾರ್ಯಕ್ರಮಗಳಿಗೆ ರಂಗು ತರುತ್ತಾರೆ. ನಾನು ನೋಡಿದ ಬಹುತೇಕ ದೊಡ್ಡ ದೊಡ್ಡ ಸಾಹಿತಿಗಳು ಸಂಶೋಧಕರು ಮಠಗಳ ಅಂಗಳದಲ್ಲಿ ತಮ್ಮ ಪುಸ್ತಕ ಪ್ರಕಟಣೆ ಸ್ವಾಮಿಗಳು ನೀಡುವ ಪಾಕೆಟ್ ಹಣ ಇನ್ನೂ ಕೆಲವರು ಚಿನ್ನದ ಸರ ಉಂಗುರ ಉಡುಗೊರೆ ನೀಡುತ್ತಾರೆ.
ಬಡವರ ಕಾಳಜಿ ಬರಗಾಲದ ಗಂಜಿ ಕೇಂದ್ರ ಕೋವಿಡ್ ಉಪಚಾರ ಕೇಂದ್ರ ವಿರಕ್ತ ಮಠಗಳು ಮಾಡುತ್ತಿಲ್ಲ ಮಠಗಳು ಶರಣರ ಕಲ್ಪನೆಯಲ್ಲ
ಆದರೆ ರಾಜರು ಮುಂದೆ ಪ್ರತಿಯೊಬ್ಬರೂ ತಮ್ಮ ತಮ್ಮ ಆದಾಯದಲ್ಲಿ ಎಲ್ಲಾ ವಿರಕ್ತ ಮಠಗಳು ಗುರು ಮಾರ್ಗಗಳನ್ನು ಪೋಷಿಸಿದವರು ಭಕ್ತರು. ಇಂದು ಬಹುತೇಕ ವಿರಕ್ತ ಮಠಗಳು ಬಸವಣ್ಣನನ್ನು ಮರೆತಿವೆ ಗದ್ದುಗೆ ಪೂಜೆ ಪಾದ ಪೂಜೆ ರುದ್ರಾಭಿಷೇಕ ಅರ್ಚನೆ ಅಂತಹ ಅತ್ಯಂತ ಅನಿಷ್ಟ ಪದ್ಧತಿ ಅಳವಡಿಕೆ ಆಗಿವೆ.
ಬಸವಣ್ಣ ಈಗ ಕರ್ನಾಟಕದ ಸಾಂಸ್ಕೃತಿಕ ನಾಯಕ ರಾಯಭಾರಿ. ಪ್ರತಿಯೊಬ್ಬ ಕನ್ನಡಿಗನು ಮುಂದೆ ಮಠಗಳ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯ.
ಬಸವ ಗಾಳಿ ಬೀಸಿದೆ ತತ್ವ ಸಿದ್ಧಾಂತಗಳನ್ನು ಪ್ರಸಾರ ಮಾಡೋಣ ದಯವಿಟ್ಟು ಎಲ್ಲ ವಿರಕ್ತ ಮಠಗಳು ಇನ್ನೂ ಮುಂದಾದರು ಬಸವ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಲಿ.
ಬಸವ ಧರ್ಮ ಭಾರತ ಮತ್ತು ಜಗತ್ತಿನ ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸುವ ಧರ್ಮವಾಗಿದೆ.

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!