ಲೋಕಸಭೆಯ ಕಾವೇರಿದ ಕದನ ತುಮಕೂರು ಮತ್ತು ಬೆಳಗಾವಿ ಸೇರಿ ಬಹುತೇಕ ಕಡೆಗೆ ಕಾಂಗ್ರೆಸ್ ಹೊಸ ಮುಖಗಳು
(👆 ಮೋಹನ ಕಾತರಕಿ)
ಬರುವ ಲೋಕಸಭೆಯ ಚುನಾವಣಾ ಅಖಾಡಕ್ಕೆ ರಾಜಕೀಯ ಪ್ರಕ್ಷಗಳು ಭರದಿಂದಲೇ ಸಿದ್ದತೆ ಮಾಡಿಕೊಳ್ಳುತ್ತಿವೆ.
ಎನ್ ಡಿ ಎ ಮತ್ತು ಇಂಡಿಯಾ ಇವುಗಳ ನಡುವೆ ಅಧಿಕಾರಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದೆ.
ಬಿಜೆಪಿ ಹಿಡನ್ ಅಜೇಂಡ್ ಇಟ್ಡುಕೊಂಡು ಚುನಾವಣೆ ಎದುರಿಸುವ ತಂತ್ರ ಹೆಣೆಯುತ್ತಿದೆ.
ಇನ್ನೊಂದೆಡೆಗೆ ಇಂಡಿಯಾ ಮೈತ್ರಿ ಕೂಟ ಬಿಜೆಪಿ ಸರಕಾರ ವೈಫಲ್ಯಗಳನ್ನು ಲೆಕ್ಕವಿಟ್ಟು ಹೇಗಾದರೂ ಮಾಡಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಎಲ್ಲಾ ಪ್ರಕಾರದ ಪ್ರಯತ್ನವೇ ನಡೆದಿದೆ.
ಕಳೆದ 2019 ರ ಲೋಕ ಸಭೆಯ ಚುನಾವಣೆಯಲ್ಲಿ ಕರ್ನಾಟಕ 25 ಎಂ ಪಿ ಆರಿಸಿ ಕಳುಹಿಸಿದ ಮೇಲೆ ರಾಜ್ಯದ ಬರ ಪರಿಹಾರ ಜಿ ಎಸ್ ಟಿ ಹಣ ಕೊಡದೇ ಇರುವುದು ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಹಿಂದೇಟು ಹಾಕಿದ ಕೇಂದ್ರ ಸರ್ಕಾರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಹೀಗಾಗಿ ಜೇ ಡಿ ಎಸ್ ಮೈತ್ರಿ ಮಾಡಿಕೊಳ್ಳುವ ಮೂಲಕ ಅದು ಸ್ವಂತ ವರ್ಚಸ್ಸಿನ ಮೇಲೆ ಹೆಚ್ಚಿನ ಸೀಟು ಪಡೆಯುವುದು ಅನುಮಾನ ಕರ್ನಾಟಕದ ಮಟ್ಟಿಗೆ ಸಾಧ್ಯವೂ ಕೂಡ.
ಕರ್ನಾಟಕದಲ್ಲಿ ಶ್ರಿ ಸಿದ್ಧರಾಮಯ್ಯನವರು ಒಳ್ಳೆಯ ಸರಕಾರ ನೀಡಿದೆ. ಆರ್ಥಿಕ ಸಂಕಷ್ಟಗಳ ಮಧ್ಯೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಬಸವಣ್ಣನವರನ್ನು ಸಾಂಸ್ಕೃತಿಕ ರಾಯಭಾರಿ ನಾಯಕ ಎಂದು ಘೋಷಣೆ ಮಾಡಿ ಲಿಂಗಾಯತರ ಮತಗಳ ಬುಟ್ಟಿಗೆ ಕಾಂಗ್ರೆಸ್ ಕೈ ಹಾಕಿದೆ.
ಹೀಗಾಗಿ ಕಳೆದ ಚುನಾವಣೆಯಲ್ಲಿ ಸೋತು ಸುಣ್ಣವಾಗಿ ತನ್ನ ವರ್ಚಸ್ಸು ಕಳೆದುಕೊಂಡ ಕಾಂಗ್ರೆಸ್ ಈ ಬಾರಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ನಂಬಿಕೆ ಇಟ್ಟುಕೊಂಡು ದುಡಿಯುತ್ತಿದೆ.
ನಿನ್ನೆ ನಡೆದ ಕಾಂಗ್ರೆಸ್ ಪಕ್ಷದ ಮುಂಬರುವ ಲೋಕ ಸಭೆಯ ಚುನಾವಣೆಯಲ್ಲಿ ಸ್ಪರ್ಧಿಸುವ ಸಂಭಾವ್ಯ ಅಭ್ಯರ್ಥಿಗಳ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮಟ್ಟದ ಮಾಹಿತಿ ಲಭ್ಯವಾಗಿದೆ.
ತುಮಕೂರು ನಿಂದಾ ನಿಕೇತ ರಾಜ್ ಸ್ಪರ್ಧಿಸುವ ಸಾಧ್ಯತೆ ಇದೆ. ವಾಗ್ಮಿ ಸಾಮಾಜಿಕ ಜಾಲ ತಾಣಗಳಲ್ಲಿ ಕ್ರಿಯಾಶೀಲ ವ್ಯಕ್ತಿ ಮೇಲಾಗಿ ಕುರುಬ ಸಮುದಾಯದ ಅಹಿಂದ ಅಲ್ಪ ಸಂಖ್ಯಾತರ ಲಿಂಗಾಯತ ಒಕ್ಕಲಿಗರ ಬೆಂಬಲ ವ್ಯಕ್ತವಾಗಿದೆ. ಬಹುತೇಕ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಇವರ ಪರ ಒಳ್ಳೆಯ ಅಭಿಪ್ರಾಯ ವ್ಯಕ್ತ ಪಡಿಸಿದರು.
ಅದೇ ರೀತಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ರಾಮದುರ್ಗ ಬೆಳಗಾವಿ ಉತ್ತರ ಸವದತ್ತಿ ಬೆಳಗಾವಿ ಗ್ರಾಮೀಣ ಕಾಂಗ್ರೆಸಿನ ಎಂ ಎಲ್ ಎ ಇದ್ದು ಕಾಂಗ್ರೆಸಿಗೆ ಒಳ್ಳೆಯ ಅವಕಾಶ ಇದೆ .
ಅತ್ಯಂತ ಆಶ್ಚರ್ಯದ ಸಂಗತಿಯೆಂದರೆ
ಇಲ್ಲಿ ಸಂಪೂರ್ಣ ಹೊಸ ಮುಖ ಪ್ರಭಾವಿ ವ್ಯಕ್ತಿಗಳು ಆಯ್ಕೆಯ ಕಸರತ್ತು ನಡೆದಿದೆ. ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಶ್ರಿ ಮೋಹನ ಕಾತರಕಿ ಅವರ ಹೆಸರು ಮುನ್ನೆಲೆಗೆ ಬಂದಿದೆ.
ಮೋಹನ ಕಾತರಕಿ ಅವರ ಅಜ್ಜ ರಾವ ಸಾಹೇಬ ಆರ್ ಟಿ ಕಾತರಕಿ ಅವರು. ಮುಂಬೈ ಶಾಸನ ಸಭೆಯ ಕಾರ್ಯದರ್ಶಿಯಾಗಿ. 1940 ರಲ್ಲೀ ಕಾರ್ಯ ನಿರ್ವಹಿಸಿದ ಅತ್ಯಂತ. ಪ್ರಭಾವಿ ವ್ಯಕ್ತಿ. ಬೆಳಗಾವಿಯ. ಬಾರ್ ಅಸೋಸಿಯೇಶನ್ ದವರು ಇವರ ಹೆಸರಿನಲ್ಲಿ ಕಾನೂನು ಸಂಶೋಧನಾ ಕೇಂದ್ರ ಸ್ಥಾಪಿಸಿದ್ದಾರೆ. ರಾಮದುರ್ಗ ಮೊದಲ ಶಾಸಕರಾದ ಶ್ರಿ ಮುಂಬರೆಡ್ಡಿ ಅವರ ಹತ್ತಿರದ ಸಂಬಂಧಿ ಮತ್ತು ರಾಮದುರ್ಗದ ಮಾಜಿ ಸಚಿವ ಶಾಸಕ ಶ್ರಿ ಆರ್ ಎಸ್ ಪಾಟೀಲ ಇವರ ಸಹೋದರಿಯ ಅಳಿಯ . ಕಳೆದ 35 ವರ್ಷಗಳಿಂದ ಸುಪ್ರೀಂ ಕೋರ್ಟಿನ ಹಿರಿಯ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ನೀರಿನ ಸಮಸ್ಯೆ ಕಾವೇರಿ ನದಿ ನೀರು ಮಹದಾಯಿ ಕಳಸಾ ಬಂಡೂರಿ ಯೋಜನೆ ಹೀಗೆ ಕರ್ನಾಟಕವನ್ನು ಪ್ರತಿನಿಧಿಸುವ
ಹಿರಿಯ ವಕೀಲರು .
ಮೋಹನ್ ಕಾತರಕಿ ಅವರು ಭಾರತದ ಸುಪ್ರೀಂ ಕೋರ್ಟ್‌ನಿಂದ ಗೊತ್ತುಪಡಿಸಿದ ಹಿರಿಯ ವಕೀಲರಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದ ಕಾನೂನು ಕಾಲೇಜಿನಲ್ಲಿ ಕಾನೂನು ವಿಭಾಗದ ಗೌರವ ಸಂದರ್ಶಕ ಪ್ರಾಧ್ಯಾಪಕರು.
ಕಾತರಕಿ ಅವರು ಫೆಡರಲ್ ಮತ್ತು ಅಂತರಾಷ್ಟ್ರೀಯ ನದಿ ನೀರಿನ ಸಂಪನ್ಮೂಲಗಳ ಹಂಚಿಕೆಯ ಟ್ರಾನ್ಸ್ ಬೌಂಡರಿ ನೀರಿನ ಕಾನೂನಿನಲ್ಲಿ ಪರಿಣಿತರಾಗಿದ್ದಾರೆ.
ಕಾತರಕಿ ಅವರು ಕಾವೇರಿ, ಕೃಷ್ಣಾ, ರವಿ ಬಿಯಾಸ್, ಮಹದಾಯಿ, ಇತ್ಯಾದಿ ನದಿಗಳಿಗೆ ಸಂಬಂಧಿಸಿದ ಜಲ ವಿವಾದಗಳಲ್ಲಿ ಸುಪ್ರೀಂ ಕೋರ್ಟ್ ಮತ್ತು ಅಂತರ್ ರಾಜ್ಯ ಜಲ ವಿವಾದಗಳ ನ್ಯಾಯಮಂಡಳಿಗಳ ಮುಂದೆ ಹಲವಾರು ರಾಜ್ಯಗಳನ್ನು ಪ್ರತಿನಿಧಿಸಿದ್ದಾರೆ. ಪ್ರಸ್ತುತ ಅವರು ಕರ್ನಾಟಕ ಮತ್ತು ಒಡಿಶಾ ರಾಜ್ಯಗಳು ಮತ್ತು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ. .
ಇವರಿಗೆ ಎಲ್ಲಾ ಸಮುದಾಯದ ಅಹಿಂದ ಲಿಂಗಾಯತ ಕುರುಬ ರೆಡ್ಡಿ ಅಲ್ಪಸಂಖ್ಯಾತ ಮತಗಳು ದೊರೆಯುವ ಸಾಧ್ಯತೆ ಇದೆ.
ಇನ್ನೊಂದು ಹೆಸರು ಕಳೆದ ಭಾರಿ ಮರು ಚುನಾವಣೆಯಲ್ಲಿ ಕೂದಲೆಳೆಯ ಅಂತರದಲ್ಲಿ ಸೋತ ಸಚಿವ ಭರವಸೆಯ ನಾಯಕ ಶ್ರಿ ಸತೀಶ್ ಜಾರಕಿಹೊಳಿ. ಇವರು ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿದ್ದು . ಎಂ ಪಿ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಗಲು ಅಷ್ಟೊಂದು ಆಸಕ್ತಿ ತೋರಿಸುವುದಿಲ್ಲ ಎಂದು ತಿಳಿದು ಬಂದಿದೆ. ಇನ್ನೊಬ್ಬ ಅಭ್ಯರ್ಥಿ. ಕಿರಣ ಸಾಧುನವರ
ಕಳೆದ ಚುನಾವಣೆಯಲ್ಲಿ ಇವರ ತಂದೆಗೆ ಟಿಕೇಟು ಕೊಟ್ಟಿದ್ದ ಪಕ್ಷ ಯಶವನ್ನು ಕಾಣಲು ವಿಫಲರಾದರು. ಅಮರ ಸಿಂಹ ಪಾಟೀಲ ಹಿಂದಿನ ಸಂಸದರು ಪ್ರಯತ್ನ ನಡೆಸಿದ್ದಾರೆ.ಸಚಿವೆ ಹೆಬ್ಬಾಳಕರ ತಮ್ಮ ಮಗನಿಗೆ ಟಿಕೆಟ್ ನೀಡಲು ಮನವಿ ಸಲ್ಲಿಸಿದ್ದಾರೆ
ಇವರೆಲ್ಲ ಮಧ್ಯೆ. ಹಿರಿಯ ವಕೀಲ ಪ್ರಜ್ಞಾವಂತ ನಾಗರಿಕ
ನಾಡು ನುಡಿಯ ನೆಲ ಜಲ ಸಂರಕ್ಷಣೆ ಬಗ್ಗೆ ಅತೀವ ಆಸಕ್ತಿ ಇರುವ ಶ್ರಿ ಮೋಹನ ಕಾತರಕಿ
ಇವರಿಗೆ ಟಿಕೇಟು ಸಿಗುವ ಸಾಧ್ಯತೆ ಇದೆ.
ಚುನಾವಣಾ ಸಮೀಕ್ಷೆಯ ಪ್ರಕಾರ
ಕರ್ನಾಟಕದಲ್ಲಿ 15 ರಿಂದ 18 ಸೀಟ್ ಪಡೆಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿವೆ