ಪಿಯು ವಿದ್ಯಾರ್ಥಿಗಳಿಗೆ ಬಿಳ್ಕೊಡಗೆ
ದಿನಾಂಕ 03-02-2024ರಂದು ಶನಿವಾರ ಸರ್ಕಾರಿ ಪದವಿಪೂರ್ವ ಕಾಲೇಜು ಖನಗಾಂವದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭವು ಜರುಗಿತು .
ಗೋಕಾಕದವರಾದ ರಾಜ್ಯ ಸಿರಿಗನ್ನಡ ವೇದಿಕೆಯ ಅಧ್ಯಕ್ಷರು ಸಾಹಿತಿಗಳಾದ ರಜನಿ ಅಶೋಕ ಜಿರಗಾಳ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಇಂದಿನ ಮಕ್ಕಳು ಶ್ರಮ ವಹಿಸಿ ಅಭ್ಯಾಸ ಮಾಡಿ ತಂದೆ ತಾಯಿಗಳ ಹೆಸರು ಮತ್ತು ಕಾಲೇಜಿನ ಕೀರ್ತಿಯನ್ನು ಬೆಳಗಿಸಬೇಕೆಂದು ಹೇಳಿದರು .
ಉದ್ಘಾಟಕರಾಗಿ ಶಂಕರ ನಾಯಕರು ಆಗಮಿಸಿ ಮಕ್ಕಳಿಗೆ ಹಿತನುಡಿಗಳನ್ನು ಆಡಿದರು .ಊರಿನ ಗಣ್ಯರಾದ ಹಾಗೂ ಆದರ್ಶ ಶಾಲೆಯ ಅಧ್ಯಕ್ಷ ರಾದ ಪಿ ಎಂ ವನ್ನೂರ ಅವರು ಮಾತನಾಡಿ ಗಂಡು ಹೆಣ್ಣು ಎಂಬ ಭೇದ ಮಾಡದೇ ಕಲಿಕೆಯಲ್ಲಿ ತೊಡಗಬೇಕು ಎಂದು ಹೇಳಿದರು .ಇನ್ನೊಬ್ಬರು ಊರಿನ ಗಣ್ಯರು ಶಿಕ್ಷಣ ಪ್ರೇಮಿಗಳು ಸಿದ್ದಪ್ಪದೇಸಾಯಿಯರು ಇಂದಿನ ಮಕ್ಕಳು ಉತ್ತಮವಾದ ಸಂಸ್ಕೃತಿ ಹಾಗೂ ಸಂಸ್ಕಾರಕವನ್ನು ಕಲಿಯಬೇಕೆಂದು ತಮ್ಮ ಮನದಾಳದ ಮಾತನ್ನು ಹೇಳಿದರು .ಹಾರೂಗೇರಿಯ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾದ ಶಕುಂತಲಾ ಕುರಿ ಅವರು ಮಾತನಾಡಿ ಮುಖದಲ್ಲಿ ಒಂದು ಸಣ್ಣ ನಗು ಇದ್ದರೆ ನಾವು ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ ಎಂದರು .
ಸಿರಿಗನ್ನಡದ ರಾಜ್ಯ ಕಾರ್ಯದರ್ಶಿಗಳಾದ ಛಾಯಾ ಸಿದ್ರಾಯಿ ಯವರು ಕಳೆದ ಸಾಲಿಗೆ ಪ್ರಥಮ ದ್ವಿತೀಯ ಬಂದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು .ರಜನಿ ಜಿರಗ್ಯಾಳ ಅವರು ಕನ್ನಡದಲ್ಲಿ ಅತೀ ಹೆಚ್ಚಿನ ಅಂಕವನ್ನು ಪಡೆದು ಕೊಂಡ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು .
ಸಿನೇಮಾ ನಿರ್ದೇಶಕ ಪತ್ನಿಯಾದ ಸ್ಮಿತಾ ಶೆಟ್ಟಿ ಕಾಲೇಜಿನ ಭೂ ದಾನಿಗಳು ಹಾಗೂ ಹಿರಿಯರು ಆದ ಸಿದ್ದಗೌಡ ಪಾಟೀಲ ಅವರು ,ಮಹಾಂತೇಶ ಬಡಿಗೇರ, ಅವರು ಕರಡಿ ಅವರು ಶಿವಾನಂದ ಪಾಟೀಲ ಅವರು ಪ್ರಾಥಮಿಕ ಶಾಲೆಯ ಬಿ ಎನ್ ಬಸೆಟ್ಟಿ, ಮುಖ್ಯೋಪಾಧ್ಯಾಯರು ಶ್ರೀಕಾಂತ ನ್ಯಾಮಗೋಡ ಹೈಸ್ಕೂಲಿನ ಮುಖ್ಯೋಪಾಧ್ಯಾಯರು ಊರಿನ ಗಣ್ಯರು ,ಶಾಲೆಯ ಶಿಕ್ಷಕ ವೃಂದ ಅತಿಥಿ ಶಿಕ್ಷಕರಾದ ಮಹಾದೇವಿ, ಪ್ರಿಯದರ್ಶಿನಿ ,ಯಲ್ಲಪ್ಪ ಬಾರಿಮರದ ಸುಜಾತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು . ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಅವರು ವಹಿಸಿಕೊಂಡು ವಿದ್ಯಾರ್ಥಿಗಳು ಸತತ ಅಭ್ಯಾಸ ಸತತ ಪ್ರಯತ್ನ ವನ್ನು ಮಾಡಿ ಕಾಲೇಜಿಗೆ ಉತ್ತಮ ಫಲಿತಾಂಶವನ್ನು ತಂದುಕೊಡಬೇಕೆಂದು ಹೇಳಿದರು.
ಮಕ್ಕಳು ತಾವೇ ದೇವರಾಗಿ ದೇವರಂತೆ ಚೈತನ್ಯ ಶಕ್ತಿಯನ್ನು ತಮ್ಮೊಳಗೆ ತುಂಬಿಕೊಂಡು ಉತ್ತಮ ವಿದ್ಯಾರ್ಥಿ ಎನಿಸಿಕೊಂಡು ಕಾಲೇಜಿಗೆ ಹಾಗೂ ಕಲಿಸಿದ ಗುರುಗಳಿಗೆ ಹಾಗೂ ತಂದೆ ತಾಯಿಗಳ ಹೆಸರನ್ನು ತರುವಂಥಹ ಮಕ್ಕಳು ನೀವಾಗಬೇಕೆಂದು ಹೇಳಿದರು .ಕಾರ್ಯಕ್ರಮ ನಿರೂಪಣೆಯನ್ನು ಸವಿತಾ ಸೊಂಟಪೂಜೇರಿ ವಂದನಾರ್ಪನೆಯನ್ನು ಲಕ್ಷ್ಮೀ ಕಂದಲಗಿ ಅವರು ನಿರ್ವಹಿಸಿದರು .