ಮಸ್ಕಿ ತಾಲೂಕಿನ ಬಳಗಾನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಕಲ್ಪ ಪ್ರಶಸ್ತಿ
e ಸುದ್ದಿ ಮಸ್ಕಿ:
ಬಳಗಾನೂರು ಪ್ರಾಥಮಿಕ ಅರೋಗ್ಯ ಕೇಂದ್ರ ಸ್ವಚ್ಛ ಕಾಯಕಲ್ಪದಲ್ಲಿ ಜಿಲ್ಲೆಗೆ ಪ್ರಥಮ
ವಿಜಯವಾಣಿ ಸುದ್ದಿಜಾಲ ಮಸ್ಕಿ
ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಸ್ವಚ್ಛ ಆಸ್ಪತ್ರೆಗಳಿಗೆ ಪ್ರತಿವರ್ಷ “ಕಾಯಕಲ್ಪ ಪ್ರಶಸ್ತಿ” ನೀಡುತ್ತದೆ. ಸ್ವಚ್ಛತೆ ಕಾಪಾಡಿಕೊಳ್ಳುವದರ ಜೊತೆಗೆ ಸೋಂಕು ರಹಿತ ಆರೋಗ್ಯ ಸೇವೆ ನೀಡುವ ಆಸ್ಪತ್ರೆಗಳನ್ನು ಗುರುತಿಸುವಲ್ಲಿ ೨೦೨೨-೨೩ನೇ ಸಾಲಿಗೆ ಮಸ್ಕಿ ತಾಲೂಕಿನ ಬಳಗಾನೂರು ಪ್ರಾಥಮಿಕ ಆರೋಗ್ಯ ಕೇಂದ್ರ ರಾಯಚೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಪಟ್ಟಣ ಪ್ರದೇಶದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬಳಗಾನೂರು ಪಟ್ಟಣ ಸೇರಿ ೨೬ ಗ್ರಾಮಗಳು ಬರುತ್ತಿವೆ. ೨೦೨೨-೨೩ನೇ ಸಾಲೀನಲ್ಲಿ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಸ್ವಚ್ಛ ಆಸ್ಪತ್ರೆಗಳಿಗೆ ಕಾಯಕಲ್ಪ ಯೋಜನೆಯಡಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡು ಸಾರ್ವಜನಿಕರ ಪ್ರಶಂಸೆ ಪಾತ್ರವಾಗಿದೆ.
ಮೈಸೂರಿನಲ್ಲಿ ಫೆ.೬ ರಂದು ನಡೆಯಲಿರುವ ಸರ್ಕಾರಿ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಚಿವರು ೨ ಲಕ್ಷ ನಗದು ಬಹುಮಾನ ಹಾಗು ಪ್ರಮಾಣ ಪತ್ರವನ್ನು ನೀಡಿಲಿದ್ದಾರೆ.
ಏನಿದು ಕಾಯಕಲ್ಪ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ೧೫ ನೇ ಮೇ ೨೦೧೫ ರಂದು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಹೆಚ್ಚಿನ ನೈರ್ಮಲ್ಯ ಮತ್ತು ಶುದ್ಧ ಪರಿಸರದ ಕಡೆಗೆ ತೋರಿಸಿರುವ ಸಕಾರಾತ್ಮಕ ಪ್ರಯತ್ನವನ್ನು ಪ್ರಶಂಸಿಸಲು ಮತ್ತು ಗುರುತಿಸಲು ಪ್ರಾರಂಭಿಸಿತು. ಸಾರ್ವಜನಿಕ ಆರೋಗ್ಯ ಕ್ಷೇತ್ರದ ಸುತ್ತಮುತ್ತಲಿನ ಎಲ್ಲೆಡೆ ಅವರ ಕಾರ್ಯಕ್ಷಮತೆಯನ್ನು ಪುರಸ್ಕರಿಸುವ ಮೂಲಕ ಸ್ವಚ್ಛತೆಯನ್ನು ಕಾಪಾಡುವ ಗುರಿಯನ್ನು ಹೊಂದಿದೆ. ಪ್ರಾಥಮಿಕವಾಗಿ “ಸ್ವಚ್ಛ ಭಾರತ ಅಭಿಯಾನ”ದ ವಿಸ್ತರಣೆಯಾಗಿದ್ದು, ಇದು ಭಾರತದಲ್ಲಿನ ಪ್ರತಿಯೊಂದು ಸಾರ್ವಜನಿಕ ಆರೋಗ್ಯ ಸೌಲಭ್ಯದಾದ್ಯಂತ ಸ್ವಚ್ಛತೆ, ನೈರ್ಮಲ್ಯ, ತ್ಯಾಜ್ಯ ನಿರ್ವಹಣೆ ಮತ್ತು ಸೋಂಕು ನಿಯಂತ್ರಣ ಅಭ್ಯಾಸಗಳನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.
ಫೆ.೦೬ರಂದು ಮೈಸೂರಿನಲ್ಲಿ ಆರೋಗ್ಯ ಇಲಾಖೆಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಸಚಿವರಿಂದ ನಗದು ಬಹುಮಾನ ಹಾಗೂ ಪ್ರಶ್ತಿ ಪತ್ರವನ್ನು ವಿತರಿಸುತ್ತಾರೆ. ನಾನು ಪ್ರಶಸ್ತಿ ಸ್ವೀಕರಿಸಲು ಮೈಸೂರಿಗೆ ಹೋಗುತ್ತಿರುವೆ ಎಂದು
ಡಾ: ದೌಲಸಾಬ್ ಬಳಗಾನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ತಿಳಿಸಿದ್ದಾರೆ.