ಹಸಮಕಲ್ ಖಾನ್ ಸಾಹೇಬ ದರ್ಗಾ ಹಿಂದೂ-ಮೂಸ್ಲಿಂರ ಭಾವೈಕ್ಯತೆಯ ಸಂಗಮ
e-ಸುದ್ದಿ ಮಸ್ಕಿ
ತಾಲ್ಲೂಕಿನ ಹಸಮಕಲ್ ಗ್ರಾಮದ ಹಜರತ್ ಮಹ್ಮದ ಷರರೀಫ್ ಖಾನ್ ಸಾಹೇಬ್ ತಾತನ ದರ್ಗಾ ಹಿಂದೂ-ಮೂಸ್ಲಿಂರ ಭಾವೈಕ್ಯತೆಯ ಸಂಗಮವಾಗಿದೆ ಎಂದು ಮಸ್ಕಿ ಗಚ್ಚಿನ ಮಠದ ವರರುದ್ರಮುನಿ ಶಿವಾಚಾರ್ಯರು ಹೇಳಿದರು.
ಮಂಗಳವಾರ ಹಜರತ್ ಮಹ್ಮದ ಷರೀಫ್ ಖಾನ್ ಸಾಹೇಬ್ ತಾತನ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಡಿದರು. ಇಲ್ಲಿ ಜಾತಿ ಬೇಧವಿಲ್ಲ. ಎಲ್ಲರೂ ಒಂದೇ ಎಂಬ ಭಾವವನ್ನು ಕಾಣಬಹುದಾಗಿದೆ ಎಂದರು.
ಗಂಧದ ಮೆರರವಣಿಗೆ ಃ ಹಜರತ್ ಮಹ್ಮದ ಷರೀಫ್ ಖಾನ್ ಸಾಹೇಬ್ ತಾತನ ಉರುಸ್ ನಿಮಿತ್ಯ ಗಂಧವು ಸಂತೇಕೆಲ್ಲೂರಿನ ಘನಮಠೇಶ್ವರ ಮಠದಿಂದ ತರಲಾಯಿತು. ನಂತರ ಹಸಮಕಲ್ ಹೊಸಮನಿ ಖಾನ ಸಾಹೇಬರ ಮನೆಯಿಂದಲೂ ಗಂಧವು ಬಂದ ನಂತರ ಗ್ರಾಮದ ಹೊರವಲಯದ ಕಟ್ಟೆಯಿಂದ ದರ್ಗಾದ ವರೆಗೂ ಅದ್ದೂರಿಯಾಗಿ ಗಂಧದ ಮೆರವಣಿಗೆ ಮುಖಾಂತರ ಡೊಳ್ಳು ಕುಣಿತ, ಹಗಲು ವೇಷಗಾರರ ನೃತ್ಯ ದೊಂದಿಗೆ ಮೆರವಣಿಗೆ ಸಾಗಿತು.