ಬೇಂದ್ರೆಯವರ ಕುರಿತು ಎರಡು ನುಡಿಗಳು
ಆಡುಭಾಷೆಯಲಿರಲಿ
ನಾಡಭಾಷೆಯಲಿರಲಿ
ಅಚ್ಚೊತ್ತುತ ಚೆಂದದಲಿ
ನುಡಿಮುತ್ತುಗಳ ಪೋಣಿಸಿದ
ಆದರಣೀಯ ಮಹನೀಯರು ನೀವು
ರಸ, ಸರಸ, ತುಂಬಿಹರಿವ
ತೇಜದಿ ಹೊಳೆದು ಮೆರೆವ
ಕಾವ್ಯದ ರಸಧಾರೆ ಸವಿಸುವ
ಧೀಮಂತನೆಂದು ಎನಿಸಿದ
ಆದರಣೀಯ ಮಹನೀಯರು ನೀವು
ನಾಕು ತಂತಿಗಳ ಚೆನ್ನಾಗಿ ಮೀಟುತ
ಜಗಕೆ ಸಾಹಿತ್ಯದ ಸುಂದರ ತಂತುಗಳ ತಿಳಿಸುತ
ನಸುನಗು , ನಗುತ ಚೆಂದದಲಿ ಬಾಳುತ
ಕಳೆಗುಂದದಲೇ ಕೈ ಬೀಸಿ ತೆರಳಿದ
ಪರಮ ಆದರಣೀಯ ಮಹನೀಯರು ನೀವು
–ಕೃಷ್ಣ ಬೀಡಕರ
ಕೆ ಎಚ್ ಬಿ ಕಾಲನಿ
ವಿಜಯಪುರ
9972087473