ಬಂಧ ಮುಕ್ತ
ಗೆಳೆಯರೇ ನಾನು
ಒಂದು ದಿನ ಬಂಧ ಮುಕ್ತ
ಹೀಗೆ ಎಲ್ಲವೂ ಬೇಡವಾಗಿ
ಮೌನಕ್ಕೆ ಜಾರಿ ಬಿಟ್ಟೆ
ಇಲ್ಲ ಮಾತು ಫೋನ್ ಚರ್ಚೆ
ಬೆಳಗು ಮಸುಕಾಗಿತ್ತು ಕೆಲವರಿಗೆ
ನನ್ನವಳಿಗೆ ಗಾಬರಿ ಕೋಪ
ಭಯ ಭೀತಿ ನಡುಕು
ನಾನೇಕೆ ಮೌನ ಶಾಂತ
ಅವರೆಲ್ಲರ ಒಂದೆ ಪ್ರಶ್ನೆ
ಬಿಟ್ಟಿದ್ದೆ ವಾಟ್ಸ್ ಅಪ್ ಫೇಸ್ ಬುಕ್
ಟ್ವಿಟರ ಮೇಲ್ ಯು ಟ್ಯೂಬ್
ಹಲವು ಗ್ರೂಪ್ನಲ್ಲಿ ಕಾಣದ ಭಾವ
ಬದುಕಿರುವೆನೊ ಇಲ್ಲವೋ ?
ಎನ್ನುತ್ತಿವೆ ಜೀವ
ಕೊನೆಗೂ ನನ್ನವಳು
ನಮ್ಮೂರಿನ ಅವಳ ತಮ್ಮನಿಗೆ
ರಿಂಗಾಯಿಸಿದಳು
ಅಳಿಯ ಮನೆಯ ಮುಂದೆ
ನಿಂತ ಯಮ ಧೂತನಂತೆ
ಯಾಕರಿ ಮಾಮಾರ
ಅಕ್ಕನಿಗೆ ಫೋನ್ ಮಾಡಿಲ್ಲ
ಎಂದು ಅಬ್ಬರಿಸಿದ
ನಾನೊ ಮೌನ ಮುರಿದು
ಹೇಳಿದೆ ನನ್ನ ಸೆಲ್
ಕೆಟ್ಟು ಬಿದ್ದಿದೆ ಎಂದು
ಜೈಲಿನಲ್ಲಿ ನಾವೆಲ್ಲರೂ ಬಂಧಿ
ಅದಕ್ಕೆ ಎನ್ನುವೆವು ಸೆಲ್ ಫೋನ್
ಒಂದು ದಿನವು ಮುಕ್ತನಾಗಲು
ಬಯಸಿದ್ದೆ ಆದರೆ
ಸ್ನೇಹಿತರ ಯಜಮಾನಿಯ
ಸಿಟ್ಟಿನ ಮಾತು ಶಬ್ದಗಳು
ಮತ್ತೆ ಸೆಲ್ ನಲ್ಲಿ ಸಿಕ್ಕು ಬಿದ್ದೆ
ಒಂದು ದಿನ ಅದಿಲ್ಲದೆ
ಬದುಕಲಾರೆ ಎನ್ನುವ ಭ್ರಮೆ
ಕೊನೆಗೂ ನೆಟ್ ಆನ್ ಮಾಡಿದೆ
-ಡಾ ಶಶಿಕಾಂತ ಪಟ್ಟಣ ರಾಮದುರ್ಗ