ಮಸ್ಕಿ ಮಂಡಲ್ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ೩ ಹೆಸರು ಸೂಚನೆ
ಯಾರಿಗೆ ಒಲಿಯಲಿದೆ ಅದ್ಯಕ್ಷ ಪಟ್ಟ ?
e-ಸುದ್ದಿ ಮಸ್ಕಿ
ಮಸ್ಕಿ ಪಟ್ಟಣದಲ್ಲಿ ಇತ್ತಿಚೀಗೆ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿಯ ಕೊರ್ ಕಮಿಟಿ ಸಭೆಯಲ್ಲಿ ಮಂಡಲ್ ಅಧ್ಯಕ್ಷ ಸ್ಥಾನಕ್ಕೆ ಮೂವರ ಹೆಸರುಗಳು ಪ್ರಸ್ತಾಪವಾಗಿದ್ದು ಮಂಡಲ ಅಧ್ಯಕ್ಷ ಗಾದಿ ಯಾರಿಗೆ ಒಲಿಯುತ್ತದೆ ಎಂಬ ಕೂತುಹಲ ಪಕ್ಷದ ಕಾರ್ಯಕರ್ತರಲ್ಲಿ ಹೆಚ್ಚಾಗತೊಡಗಿದೆ.
ಮಂಡಲ ಅಧ್ಯಕ್ಷ ಸ್ಥಾನಕ್ಕೆ ಕಿರಣ ಕುಮಾರ ಸಾನಬಾಳ, ಶರಣಯ್ಯ ಸೊಪ್ಪಿಮಠ ಹಾಗೂ ಮಲ್ಲು ಯಾದವ ಅವರ ಹೆಸರುಗಳನ್ನು ಕೊರ್ ಕಮಿಟಿಯಲ್ಲಿ ಅಂತಿಮಗೊಳಿಸಲಾಗಿದೆ ಎಂದು ಪಕ್ಷದ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ.
ಪಕ್ಷದ ಅಧ್ಯಕ್ಷರಾಗಿದ್ದ ಶಿವಪುತ್ರಪ್ಪ ಅರಳಹಳ್ಳಿ ಅವರ ಅಧಿಕಾರ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ಅರ್ಹರನ್ನು ಕೂಡಿಸುವ ಜವಬ್ದಾರಿ ಪಕ್ಷದ ಮುಖಂಡರ ಹೇಗಲಿಗೇರಿದೆ.
ಕಿರಣ ಸಾನಬಾಳ ಈಗಗಾಲೇ ಪುರಸಭೆಯ ಸದಸ್ಯರಾಗಿ ಅನುಭವ ಹೊಂದಿದ್ದರೆ, ಶರಣಯ್ಯ ಸೊಪ್ಪಿಮಠ ಮತ್ತು ಮಲ್ಲು ಯಾದವ್ ಪಕ್ಷದ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ಆರ್ಥಿಕ ಸಂಪನ್ಮೂಲವನ್ನು ಕ್ರೂಢಿಕರಿಸಿ ಪಕ್ಷವನ್ನು ಸಂಘಟಿಸುವುದು ಅನಿವರ‍್ಯವಾಗಿರುವದರಿಂದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲರ ನೆರವು ಮತ್ತು ಸಹಕಾರ ಅಗತ್ಯವಾಗಿದ್ದು . ಯಾರ ಹೆಸರು ಅಂತಿಮವಾಗುತ್ತದೆ ಎಂಬುದು ಬಿಜೆಪಿ ಕಾರ್ಯಕರ್ತರಿಗೆ ಕೂತುಹಲ ಉಂಟು ಮಾಡಿದೆ.
ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ ಅವರ ಸೋಲಿನಿಂದಾಗಿ ಬಿಜೆಪಿ ಪಕ್ಷದಲ್ಲಿ ನಿರವ ಮೌನ ಆವರಿಸಿತ್ತು. ಬಿ.ವೈ.ವಿಜಯೇಂದ್ರ ರಾಜ್ಯ ಅಧ್ಯಕ್ಷರಾದ ಮೇಲೆ ಬಿಜೆಪಿ ಕಾರ್ಯಕರ್ತರಲ್ಲಿ ಸಣ್ಣಾಗಿ ಉತ್ಸಾಹ ಚಿಮ್ಮತೊಡಗಿದೆ.
ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಅಧ್ಯಕ್ಷರ ನೇಮಕವಾದ ಮೇಲೆ ಬಿಜೆಪಿ ಪಕ್ಷದಲ್ಲಿ ಚೇತರಿಕೆ ಕಂಡು ಬಂದಿದ್ದು ಮಂಡಲ್‌ಗಳಿಗೆ ಅಧ್ಯಕ್ಷರ ನೇಮಕಕ್ಕೆ ಚುರುಕು ಪಡೆದುಕೊಂಡಿದೆ.
ಪಕ್ಷದ ಕಾರ್ಯದರ್ಶಿಯಾಗಿ ದುಡಿದ್ದೇಮೆ. ಪಕ್ಷ ಮತ್ತು ಸರ್ಕಾರದ ಸಾಧನೆಗಳನ್ನು ತಿಳಿಸುವ ಕೆಲಸ ಮಾಡಿದ್ದೇನೆ. ಹಾಗಾಗಿ ಮಂಡಲ ಅಧ್ಯಕ್ಷ ಸ್ಥಾನ ಕೊಡಿ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರಿಗೆ ಮನವಿ ಮಾಡಿದ್ದೇನೆ. ಪಕ್ಷ ತೆಗೆದುಕೊಳ್ಳುವ ತಿರ್ಮಾನಕ್ಕೆ ಬದ್ಧನಾಗಿರುತ್ತೇವೆ.
–ಶರಣಯ್ಯ ಸೊಪ್ಪಿಮಠ, ಪುರಸಭೆ ಸದಸ್ಯ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಸ್ಕಿ
——————————————————
ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಗಳು ಕಾರ್ಯಮರ್ತರು. ಪಕ್ಷದ ವರಿಷ್ಠರು ನಮಗೆ ಒಪ್ಪಿಸಿದ ಕೆಲಸಗಳನ್ನು ಮಾಡಿದ್ದೇವೆ. ಪಕ್ಷದ ಮುಖಂಡರು ನಮ್ಮ ಕೆಲಸ ಕಾರ್ಯಗಳನ್ನು ಗುರುತಿಸಿ ಅಧ್ಯಕ್ಷ ಸ್ಥಾನ ನೀಡಿದರೆ ನಿಭಾಯಿಸುವೆ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ.
–ಕಿರಣ ಕುಮಾರ ಸಾನಬಾಳ ಪುರಸಭೆಯ ಮಾಜಿ ಸದಸ್ಯ
————————-
ಕಳೆದ ೧೦ ವರ್ಷಗಳಿಂದ ಬಿಜೆಪಿ ವಿವಿಧ ಹಂತದಲ್ಲಿ ಪಕ್ಷ ನೀಡಿದ ಜವಬ್ದಾರಿಯನ್ನು ನಿಭಾಯಿಸಿದ್ದೇನೆ. ಪಕ್ಷ ನನಗೆ ಅಧ್ಯಕ್ಷ ಸ್ಥಾನ ನೀಡುವಂತೆ ಮುಖಂಡರಲ್ಲಿ ಮನವಿ ಮಾಡಿದ್ದೇನೆ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ.
–ಮಲ್ಲು ಯಾದವ್ ಬಿಜೆಪಿ ಮಂಡಲ ಕಾರ್ಯದರ್ಶಿ
—————–