ನಾವು- ನಮ್ಮವರು
ಸಾಧ್ವಿ ಶಿರೋಮಣಿ ತುರಡಗಿ ತಿಮ್ಮಮ್ಮನವರು
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಿಡದೂರ ಸೀಮಾದಲ್ಲಿರುವ ಅಮ್ಮನಕಟ್ಟೆ , ಎಂದೆ ಖ್ಯಾತಿಯನ್ನು ಹೊಂದಿರುವ ತಿಮ್ಮಮ್ಮನವರು ತಿರುಪತಿ ವೆಂಕಟೇಶ್ವರ ನ ಅಪ್ರತಿಮ ಭಕ್ತಿ ಯ ಸಾಧ್ವಿ ಶಿರೋಮಣಿ ಯಾಗಿದ್ದವರು
ಹೈದರಾಬಾದ್ ಕರ್ನಾಟಕ ಪ್ರದೇಶದ ನಿಜಾಮ್ ಸಂಸ್ಥಾನದಲ್ಲಿ ಕ್ರಿ, ಶ ೧೭೧೩_೧೭೪೮ ರಲ್ಲಿ ಬಾಳಿ ಬೆಳಗಿದ ಮಹಾನ್ ಚೇತನ ಜನ್ನ ತಳೆದದ್ದು ಹೀಗೆ,
ತುರುಡಗಿ ಗ್ರಾಮದ ಸತ್ ಸಂಪನ್ನ
ವೇದ ಶಾಸ್ತ್ರ ಸಂಪನ್ನರಾದ ನರಸಿಂಹಾಚಾರ ಜೋಶಿ ಮತ್ತು ಚಂದ್ರಲಾದೇವಿಯವರ ಮಗಳಾಗಿ ಜನಿಸಿದ ಕೂಸಿಗೆ
ತಿರುಮಲಾಂಬ > ತಿಮ್ಮಾಂಬ> ತಿಮ್ಮಮ್ಮಾ ಎಂದು ಕರೆಯುವ ವಾಡಿಕೆಯಾಯಿತು
ಅಪಾರ ಧರ್ಮಾಭಿಮಾನಿಯಾದ ತಿಮ್ಮಮ್ಮ ಬಾಲ್ಯದಲ್ಲಿ ,ಭಾಗವತ, ಭಾರತಾದಿ ಪುರಾಣ, ಮಧ್ವಮತಕ್ಕನುಗುಣವಾದ ಜಗನ್ನಾಥ ದಾಸರ ಹರಿಕಥಾಮೃತಸಾರ ಹಾಗೂ ದಾಸರ ಪದಗಳು ಕರತಲಾಮಲಕವಾದವು.
ತುರುಡಗಿ ಗ್ರಾಮದಿಂದ ಮೂರು ಮೈಲುಗಳ ದೂರದಲ್ಲಿರುವ ಮುದ್ದಲಗುಂದಿ ಗ್ರಾಮನಿವಾಸಿಗಳಾದ ವೆಂಕಟನರಸಿಂಹ ನಾಯಕ ಚಿನಿವಾಲ ಮತ್ತು ಸೌ / ಲಕ್ಮೀಬಾಯಿ ಅವರ ಸುಪುತ್ರ ಚಿ / ಅಶ್ವಥರಾಯ ಎಂಬ ವರನನ್ನು ನಿಶ್ಚಿಯಸಿದರು. ೮ ನೆಯ ವಯಸ್ಸಿನಲ್ಲಿ ಮದುವೆ ಮಾಡಿದರು
೧೦ ನೆ ವಯಸ್ಸಿಗೆ ಗಂಡನನ್ನು ಕಳೆದುಕೊಂಡು ಚಿಕ್ಕ ವಯಸ್ಸಿನಲ್ಲಿಯೇ ವೈಧ್ಯವ್ಯ ಪ್ರಾಪ್ತವಾಯಿತು.ಈ ದುರ್ಘಟನೆಯಿಂದ ಪರಿವಾರಕ್ಕೆ ಆಘಾತವಾಯಿತು.
ಇದರಿಂದಾಗಿ ಸನ್ಯಾಸ ವೃತ ಧಾರಣಮಾಡಿ ಹರಿಯಧ್ಯಾನದಲ್ಲಿ ಪರಮಾತ್ಮನ ಭಕ್ತಿ ಯಲ್ಲಿ ಲೀನವಾದರು
ಸರ್ವದೇಶವು ಪುಣ್ಯ ದೇಶವು
ಸರ್ವಕಾಲವು ಪರ್ವಕಾಲವು
ಸರ್ವಜೀವರು ದಾನಪಾತ್ರರು ಮೂರುಲೋಕದಲಿ//
ಸರ್ವ ಕೆಲಸಗಳೆಲ್ಲ ಪೂಜೆಯು
ಸರ್ವವಂದ್ಯನ ವಿಮಲ ಮೂರ್ತಿ ಧ್ಯಾನವುಳ್ಳವಗೆ /
ಎನ್ನುವಂತೆ ಬಾಳಿದರು
ಪರಮ ಸಾಧ್ವಿ ಶಿರೋಮಣಿ ಯಾದ ತಿಮ್ಮಮ್ಮನವರು ತಮ್ಮ ಗಂಡನ ಮನೆಯ ಕುಲ ದೈವವಾದ ಕೊಪ್ಪರ ನರಸಿಂಹ ದೇವರ ಅನುಗ್ರಹದಿಂದ ,ಅಪಾರ ದೈವೀ ಸಂಪನ್ನೆಯಾದ ತಿಮ್ಮಮ್ಮನವರು ಮಹಾತಪಸ್ವಿಗಳಾದ ದೇವದುರ್ಗದ ಗಿರಿಯಪ್ಪಯ್ಯನವರ ದರ್ಶನ ಆರ್ಶಿವಾದದ ಬಲದಿಂದ ವೆಂಕಟೇಶ್ವರ ದೇವರ ಭಕ್ತಿ ಯ ಕಾಣ್ಕೆಯಫಲವಾಗಿ ತಮ್ಮ ೨೦ ನೆಯ ವಯಸ್ಸಿನಲ್ಲಿಂದಲೇ, ತಿರುಪತಿಯ ಯಾತ್ರೆಯನ್ನು ೨೦ ವರ್ಷ ಗುರುಗಳ ಮಾರ್ಗದರ್ಶನದಲ್ಲಿ ಪೊರೈಸಿದರು.
ಹಲವು ವರ್ಷಗಳಕಾಲ ಜ್ನಾನ ,ಭಕ್ತಿ, ವೈರಾಗ್ಯ, ಸಂಪಾದಿಸಿ ಬ್ರಾಹ್ಮಿ ಸ್ಥಿತಿ ತಲುಪಿದರು,ಮುಂದೆ ಕರಡಕಲ್ ನಾಡಿಗೆ ಕರಡಿಕಲ್ಲು ೩೦೦ ರ ಹಳ್ಳಿಗಳಾದ ಹೂನೂರು ಗ್ರಾಮದಲ್ಲಿ ವಾಸಮಾಡಿ ಹಳ್ಳದ ದಂಡೆಯಮೇಲೆ ಇರುವ ನಿಸರ್ಗ ಮನೋಹರ ವಾದ ಶ್ರೀ ಮಾರುತಿ ದೇವಾಲಯ ವನ್ನು ತಮ್ಮ ಆಶ್ರಮವನ್ನಾಗಿಸಿಕೊಂಡು ಕ್ರಿ,ಶ ೧೭೪೮ ರಲ್ಲಿಯ ಹೊತ್ತಿಗೆ ಅವರ ಪ್ರಾಯ ೪೦ ಆಗಿದ್ದಿತು. ಸ್ವತಂತ್ರ ವಾಗಿ ತಪ್ಪಸ್ಸನ್ನಾಚರಿಸಿದರು., ಇವರ ದೈವೀಕಕ್ಕೆ ಕಂದಗಲ್ ಶಿರಗುಪ್ಪಿ ಗ್ರಾಮದ ಜೋಯಿಸರ ಮನೆತನದ ಅಕ್ಷತೆ ಹನುಮಪ್ಪ, ಹನುಮಂತಾಚಾರ್ಯ ರು ,ಸದಾ ಕಾಲವು ತನ್ನ ಹಣೆಯ ಮೇಲೆ ಅಕ್ಷತೆಯನ್ನು ಧರಿಸುತ್ತಿದ್ದ ಇತನಿಗೆ ಎಲ್ಲರು ಅಕ್ಷತೆ ಹನಮಪ್ಪನಾದನು.
ಅಮ್ಮನವರ ಪ್ರತಿದಿನದ ಸೇವಾಕೈಂಕರ್ಯಕ್ಕೆ ಆಸರೆಯಾದನು.
ಅಮ್ಮನವರ ಪೂಜಾ ಕಾರ್ಯ ದಾರ್ಮಿಕ ಶ್ರಧ್ದೆ, ಸನಾತನ ವೈದಿಕ ಧರ್ಮಾಚಾರಣೆ, ಗೋಸಂರಕ್ಷಣೆ,ಯ ಕಾರ್ಯ ದಿಂದಾಗಿ ಇವರಲ್ಲಿ ಬರುವ ಭಕ್ತರ ಸಂಖ್ಯೆ ಅಧಿಕ ವಾಯಿತು.
ತಿಮ್ಮಮ್ಮನವರು ಪ್ರತಿವರ್ಷ ತಿರುಪತಿಯ ವೆಂಕಟಗಿರಿಯಯಾತ್ರೆಗೆ ನವರಾತ್ರಿಯ ಬ್ರಹ್ಮೋತ್ಸವಕ್ಕೆ ಪಾದಾಚಾರಿಯಾಗಿ ಹೋಗಿಬರುತ್ತಿದ್ದರು.
ಇವರಜೊತೆಯಲ್ಲಿ ಹಲವಾರು ಜನ ಬಡ ಬ್ರಾಹ್ಮಣರು ಕುಟುಂಬದ ಸದಸ್ಯರು ಸೇರಿ ಹೂನೂರಿನಿಂದ ತಿರುಪತಿ ತಿಮ್ಮಪ್ಪ ನ ಯಾತ್ರೆಗೆ ಕ್ರಿ ಶ ೧೭೬೮ ರಿಂದ ಅಖಂಡವಾಗಿ ೪೦ ಸಲ ತಿರುಪತಿ ವೆಂಕಟರಮಣ ನ ಯಾತ್ರೆ ಯನ್ನು ಸ್ವತಂತ್ರ ವಾಗಿ ಕೈಗೊಂಡರು.
೨೦ ವರ್ಷ ಗುರುಗಳ ಸನ್ನಿದಾನದಿಂದ ೪೦ ವರ್ಷ ಸ್ವಂತ ಪರಿಶ್ರಮದಿಂದ ಒಟ್ಟು ೬೦ ವರ್ಷ ಗಳಕಾಲ ನಿರಂತರ ತಿರುಪತಿಯಾತ್ರೆ ಯನ್ನು ಬರಗಾಲ , ಕಾಲರಾ ,ಮತ್ತಿತರ ತರಹದ
ಎಂತಹ ಕಷ್ಟ ಕಾರ್ಪಣ್ಯಗಳು ಬಂದರೂ ಸ್ವಲ್ಪ ವೂ ಅಂಜದೆ ಅಳುಕದೆ ಧೈರ್ಯದಿಂದ ಗುರುಗಳ ಅನುಗ್ರಹದಿಂದ ತಮ್ಮ ತಪಸ್ಸು ಶಕ್ತಿ ಯಿಂದ ನಡೆಯಿಸಿಕೊಂಡು ಬಂಂದರು,
ತಮ್ಮ ೭೭ ನೆಯ ವಯಸ್ಸಿನಲ್ಲಿ ೧೮೦೫ ರಲ್ಲಿ ಮುರಗೋಡಿನ ಮುಚ್ಚಿಂದಬರ ದೀಕ್ಷೀತ ಮಹಾಸ್ವಾಮಿಗಳ ದರ್ಶನಲಾಭ ಪಡೆದುಕೊಂಡರು.
ಕ್ರಿ ಶ ೧೮೧೧ ರಲ್ಲಿ ತಮ್ಮ ೮೩ ನೆಯ ವರ್ಷದ ಆ ಇಳಿವಯಸ್ಸಿನಲ್ಲೂ ತಿರುಪತಿ ಯಾತ್ರೆ ಕೈಗೊಂಡು
” ನಾನು ಮರಣಹೊಂದಿದ ಬಳಿಕ ನನ್ನ ಶವವನ್ನು ಈ ಹೂನೂರು ಗ್ರಾಮದ ಪ್ರಾಣದೇವರ ಸಮ್ಮುಖದಲ್ಲಿ ಹಳ್ಳದ ಆಚೆಯ ದಂಡೆಯ ಪ್ರದೇಶದಲ್ಲಿ ದಹನ ಮಾಡಿರಿ “ ಎಂದರು
ಮುಂದೆ ಮಾಘ ಶುದ್ಧ ಪ್ರತಿಪದದ ದಿವಸ ತಿಮ್ಮಮ್ಮನವರು ತಮ್ಮ ೮೫ ನೆಯ ವಯಸ್ಸಿನಲ್ಲಿ ಇಹಲೋಕದ ಯಾತ್ರೆ ಯನ್ನು ಮುಗಿಸಿ ವೈಕುಂಠವಾಸಿಯಾದರು.
ಅಮ್ಮನವರು ಕಿಡದೂರು ಸೀಮಾದ ಹಳ್ಳದ ದಂಡೆಯ ಹೊಲದಲ್ಲಿ ಪೂಜೆ ಜಪ ತಪಾದಿಗಳಸ್ಥಾನ, ವೃಂದಾವನದ ಪವಿತ್ರ ಕ್ಷೇತ್ರದಲ್ಲಿ, ಶ್ರೀ ವೆಂಕಟೇಶ್ವರ ಸ್ಮರಣೆಮಾಡುತ್ತಿರಲಾಗಿ ನಿನ್ನ ದರ್ಶನಕ್ಕೆ ಬರಲು ಅಶಕ್ಯಳಾಗಿರುವೆ ಎಂದು ದೈನ್ಯದಿಂದ ಕೋರಲು ಆಗ ತುಳಸಿ ವೈಂದಾವನದಲ್ಲಿ ತಿರುಪತಿ ವೆಂಕಟರಮಣ ಸ್ವಾಮಿ ಪ್ರಕಟಗೊಂಡು, ನಾನು ನಿನ್ನಲಿಯೇ ನೆಲೆಸಿರುವೆನೆಂದು ಅಭಯವಿತ್ತ ಜಾಗವೆ ಈ ಅಮ್ಮನಕಟ್ಟೆ
ಅಮ್ಮನವರ ಆಜ್ಞೆಯಂತೆ ಮೃತ ದೇಹ ದಹಿಸಿದ ಸ್ಥಳದಲ್ಲಿ ಮೂರನೆಯ ದಿನಕ್ಕೆ ಅಶ್ವಥ್ ವೃಕ್ಷ ಮತ್ತು ಬೇವಿನ ಮರ ಹುಟ್ಟಿ, ಸಾಲಿಗ್ರಾಮಗಳ ದೊರೆತ ಈ ಪವಿತ್ರ ಜಾಗದಲ್ಲಿ ಕಟ್ಟೆಕಟ್ಟಿದ ಕ್ಷೇತ್ರವೆ ಶ್ರೀ ಅಮ್ಮನಕಟ್ಟೆ, ಎಂದು ಜಗದ್ವಿಖ್ಯಾತಿ ಪಡೆಯಿತು.
ಪ್ರತಿವರ್ಷವೂ ಸಾಧ್ವಿ ಶಿರೋಮಣಿ ತುರಡಗಿ ತಿಮ್ಮಮ್ಮನವರ ಸೇವಾ ವಿಶ್ವಸ್ಥ ಸಮಿತಿಯಿಂದ ಮಾಘ ಶುದ್ಧ ಪ್ರತಿಪದೆಯ ದಿನ ತಿಮ್ಮಮ್ಮನವರ ಪುಣ್ಯಾರಾಧನೆ ಮಹೋತ್ಸವ ವು ಬಹು ವೈಭವದಿಂದ ನರೆವೇರುವುದು.
ಅಪಾರವಾದ ಶ್ರಧ್ದಾ ಭಕ್ತಿ ಯಿಂದ ಆರಾಧನಾ ಕಾರ್ಯಕ್ರಮ ದಲ್ಲಿ ಸರ್ವರೂ ಸೇರಿಕೊಂಡು ಅನನ್ಯವಾಗಿ ಭಾವೈಕೆತೆ ಇಂದ ಅಮ್ಮನವರ ಮಹೋತ್ಸವ ಕಾರ್ಯ ಕ್ರಮ ಗಳನ್ನು ನರೇವೆರಸುವೆವು ಎಂದು ಸೇವಾಕರ್ತ ಶ್ರೀ ನಿವಾಸಾಚಾರ್ಯ ಜೋಶಿ ಕಳಮಳ್ಳಿಯವರು ನುಡಿಯುತ್ತಾರೆ.
ಅಖಂಡ ಅರವತ್ತು ವರ್ಷಗಳವರೆಗೆ ತಿರುಪತಿ ಪಾದಯಾತ್ರೆ ಮಾಡಿದ ಮಹಾತಾಯಿ ಪಾದಗಳಿಗೆ ನಮನ.
ಚಿತ್ರ ಬರಹ : ನಟರಾಜ ಸೋನಾರ ಕುಷ್ಟಗಿ
——–_———–_———–
ಕ್ಣಣ ಕ್ಷಣದ ಸುದ್ದಿಯನ್ನು
ತಾವು ವೀಕ್ಷಿಸಲು
*e-ಸುದ್ದಿ ಅಂತರಜಾಲ ಪತ್ರಿಕೆ ನೋಡಿ.*
ಪ್ರತಿದಿನದ ಮತ್ತು ಯಾವ ದಿನಾಂಕದ ಪತ್ರಿಕೆ ನೊಡಬಯಸಿವಿರೊ ಆ ದಿನದ ಸುದ್ದಿ ಓದಬಹುದು.
ಅದಕ್ಕಾಗಿ
ನಿವು ಮಾಡಬೆಕಾಗಿರೊದು
*ಬೆಲ್ ಬಟನ್ ಒತ್ತಿ ಸಬ್ ಸ್ಕ್ರೈವ್ ಆಗಿ ಮತ್ತು ನಮ್ಮವಾಟ್ಸಪ್ ಗ್ರೂಪಗೆಸೇರಲುಬಯಸಿದರೆವಾಟ್ಸ್ ಪ್ ಸಿಂಬಲ್ ಮೆಲೆ ಕ್ಲಿಕ್ ಮಾಡಿ*
🙏🙏🙏🙏🙏🙏