ಮಾನ್ವಿ ಪಿಕಾರ್ಡ್ ಬ್ಯಾಂಕಿನ 54ನೇ ವಾರ್ಷಿಕ ಮಹಾಸಭೆ ಸಕಾಲದಲ್ಲಿ ಸಾಲ ಮರುಪಾವತಿ ಅವಶ್ಯ

ಮಾನ್ವಿ ಪಿಕಾರ್ಡ್ ಬ್ಯಾಂಕಿನ 54ನೇ ವಾರ್ಷಿಕ ಮಹಾಸಭೆ
ಸಕಾಲದಲ್ಲಿ ಸಾಲ ಮರುಪಾವತಿ ಅವಶ್ಯ

e-ಸುದ್ದಿ,  ಮಾನ್ವಿ:
‘ ಸಕಾಲದಲ್ಲಿ ಸಾಲ ಮರುಪಾವತಿಯಿಂದ ಸಹಕಾರಿ ಕ್ಷೇತ್ರದ ಬ್ಯಾಂಕುಗಳ ಏಳಿಗೆ ಸಾಧ್ಯ್ಯ’ ಎಂದು ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ (ಪಿಕಾರ್ಡ್) ಬ್ಯಾಂಕಿನ ಅಧ್ಯಕ್ಷ ಶಿವಶಂಕರಗೌಡ ಬಾಗಲವಾಡ ಹೇಳಿದರು.
ಗುರುವಾರ ಪಟ್ಟಣದ ಪಿಕಾರ್ಡ್ ಬ್ಯಾಂಕಿನ 54ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಬಡ್ಡಿ ಮನ್ನಾ ಯೋಜನೆಯನ್ನು ಪಿಕಾರ್ಡ್ ಬ್ಯಾಂಕಿನ ಸದಸ್ಯರು ಸದುಪಯೋಗಪಡಿಸಿಕೊಂಡಿದ್ದಾರೆ. 109ಜನ ಸದಸ್ಯರು ಸಾಲ ಮರುಪಾವತಿ ಮಾಡಿದ್ದಾರೆ. 2020ರ ಜೂನ್ ಅಂತ್ಯಕ್ಕೆ ಬ್ಯಾಂಕಿನಿಂದ ಒಟ್ಟು ರೂ.1.44ಕೊಟಿ ವಸೂಲಾಗಿದೆ. ರಾಜ್ಯ ಕಾಸ್ಕಾರ್ಡ್ ಬ್ಯಾಂಕಿನಿಂದ 2020-21ನೇ ಸಾಲಿಗ ಮಾನ್ವಿ ಪಿಕಾರ್ಡ್ ಬ್ಯಾಂಕಿಗೆ ರೂ.1ಕೋಟಿಆರ್ಥಿಕ ಹಂಚಿಕೆಯಾಗಿದೆ’ ಎಂದು ಅವರು ತಿಳಿಸಿದರು. ಬ್ಯಾಂಕಿನ ಉಪಾಧ್ಯಕ್ಷೆ ರಜಿನಮ್ಮ ಸುಂದರ ಕಪಗಲ್, ನಿರ್ದೇಶಕರಾದ ಮಲ್ಲಿಕಾರ್ಜುನಗೌಡ ಮಲ್ಲಟ, ವಿಶ್ವನಾಥರೆಡ್ಡಿ ರಾಜಲಬಂಡಾ, ಸಲೀಮ್ ಪಾಷಾ, ಆಲಂಸಾಬ ಕಪಗಲ್, ರಮೇಶ ಕಪಗಲ್, ರೇಣುಕಾ ಚೆನ್ನಪ್ಪ ಕಲ್ಲೂರು, ಮುಖಂಡರಾದ ಮಹಾಂತೇಶ ಸ್ವಾಮಿ ರೌಡೂರು, ಸೈಯದ್ ನಜೀರುದ್ದೀನ್ ಖಾದ್ರಿ, ಜಿ.ಸಮದಾನಿ ನಾಯ್ಕ್, ಶಂಕರಗೌಡ ಕಪಗಲ್, ಬ್ಯಾಂಕಿನ ವ್ಯವಸ್ಥಾಪಕ ರಾಜಪ್ಪ ಹಾಗೂ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.

Don`t copy text!