ಹುಡುಕಲಿ ಎಲ್ಲೆಲ್ಲಿ….?
ಹೃದಯದಲಿ ಸದಾ ನೆಲೆಸಿರುವೆ
ಬಂದು ಸೇರು ನೀನು ಇನ್ನೊಮ್ಮೆ
ದೂರ ಮಾಡು ನನ್ನ ಒಂಟಿತನವ
ಜೊತೆಯಾಗೋಣ ಮಗದೊಮ್ಮೆ
ನಿನ್ನೊಂದಿಗಿನ ಜಗತ್ತು ನಿಸ್ವಾರ್ಥದಿಂದಿತ್ತು
ಅದೆಷ್ಟು ಪ್ರಾಮಾಣಿಕ ಪ್ರೇಮ ನಮ್ಮದಾಗಿತ್ತು
ಏಳೇಳು ಜನುಮ ಕೂಡಿ ಬಾಳುವ ಕನಸಾಗಿತ್ತು
ಉಸಿರಿರುವ ತನಕ ಜೊತೆಗಿರುವ ಪ್ರಮಾಣವಾಗಿತ್ತು
ನನ್ನ ಸಂತಸದ ಬದುಕಿಗೆ ನೀ ಕಾರಣವಾಗಿದ್ದೆ
ಈ ಜೀವನವೆಂಬ ರಥಕ್ಕೆ ಸಾರಥಿಯಾಗಿದ್ದೆ
ಜೀವ ಎರಡು ನಮ್ಮಾತ್ಮ ಒಂದೇಯಾಗಿತ್ತು
ನನಗರಿವು ಇಲ್ಲದೆಯೇ ನೀನೇಕೆ ಕಾಣೆಯಾದೆ ?
ನೀನಿಲ್ಲದೆ ಮೈ ಮನಸ್ಸು ಭಾರವಾಗಿದೆ
ನಿತ್ಯದ ಬದುಕು ಅಸಹನೀಯವಾಗಿದೆ
ದೈನ್ಯದಿ ಬೇಡುವೆ ಬಂದು ಬಿಡು
ಸಾಗಿಸಲು ಬದುಕ ಬಂಡಿ ಆ ನೆನಪಲ್ಲಿ
ನಮ್ಮಿಬ್ಬರ ಸುಖ ಸಂತೋಷವೇರಿತ್ತು ಉತ್ತುಂಗಕ್ಕೆ
ಮರೆಯಾಗಿ ಹೋಗಿಬಿಟ್ಟೆ ತಿರುಗಿ ಬಾರದ ಲೋಕಕ್ಕೆ
ಹುಡುಕುತ್ತಿರುವೆ ನಿನ್ನ ಈ ಬರಡು ಭೂಮಿ ಮೇಲೆ
ನಿನ್ನಿರುವೇ ಸಂತೃಪ್ತಿ ಎನಗೆ ಸಂಗಾತಿಯೆ.
–ಏಂಜಲೀನಾ ಗ್ರೇಗರಿ, ಧಾರವಾಡ
Nice composition….words refers to emotions