ಇಂದು ಪ್ರೇಮಿಗಳ ದಿನ

ಇಂದು ಪ್ರೇಮಿಗಳ ದಿನ

ಗೆಳೆಯರೇ
ಇಂದು ವಿಶ್ವ ಪ್ರೇಮಿಗಳ ದಿನ
ವರ್ಷ ಪೂರ್ತಿ ಪ್ರೀತಿ ಮಾಡಿ
ಇವತ್ತು ಜಾಹಿರಗೊಳಿಸುವ ದಿನ
ಆದ್ಯಾವ ಪುಣ್ಯಾತ್ಮ ಇದನ್ನು
ಕಂಡು ಹಿಡಿದ ಗೊತ್ತಿಲ್ಲ
ನಮ್ಮ ದೇಶದಲ್ಲಿ ಹಾಗೆ
ಮುಕ್ತ ಪ್ರೀತಿ ಮಾಡುವ ಹಾಗಿಲ್ಲ
ಎಳೆಯ ಯುವಕ ಯುವತಿ
ಗಾರ್ಡನ್ ನಲ್ಲಿ ಕೈ ಕೈ ಹಿಡಿದು
ಅಡ್ಡಾಡುವ ಹಾಗಿಲ್ಲ
ಊರ ಹೊರಗೆ ಏಕಾಂತದಲ್ಲಿ
ನಗುವ ಹಾಗಿಲ್ಲ ಹುಡುಗ ಹುಡುಗಿ
ಬಂದೆ ಬಿಡುತ್ತಾರೆ ಇಲ್ಲಿ
ನೈತಿಕ ಪೊಲೀಸ ಕಾರ್ಯಕರ್ತರು
ಸಿಕ್ಕ ಸಿಕ್ಕ ಯುವಕ ಯುವತಿಯರಿಗೆ
ಬೂಟು ಕಾಲಿನ ಒದೆತ
ರಾಡ್ ಮಚ್ಚು ಲಾಂಗ್
ಅನ್ಯ ಕೋಮಿನ ಪ್ರೇಮಿಗಳಿದ್ದರೆ
ಕೊಲೆ ಹಿಂಸೆ ರಕ್ತದೊಕುಳಿ
ಲವ್ ಜೆಹಾದ್ ಪಟ್ಟ
ಮಾರಿಕೊಂಡ ಮಾಧ್ಯಮಗಳು
ಇವೆಲ್ಲವನ್ನೂ ರಾತ್ರಿ ಬಿತ್ತರಿಸುತ್ತವೆ
ಕೋಮುವಾದಿಗಳ ಅಬ್ಬರ
ಮುಗ್ಧ ಯುವ ಪ್ರೇಮಿಗಳ ದಿನ
ಹಿಂಸೆ ಬೆದರಿಕೆ ಬೈಗುಳ ಮಳೆ
ಮೌನ ಆವರಿಸಿದ ವ್ಯವಸ್ಥೆ
ನಾವೆಲ್ಲಾ ನೋಡಿ ಮರಗುತ್ತೆವೆ
ಉಂಡು ಮಲಗುತ್ತೆವೆ
ನಮಗೆ ಗೊತ್ತಿರುವುದು ಅದೊಂದೇ
ಆದರೂ ನಾವು ವಿಶ್ವ ಪ್ರೇಮದ ದಿನಕೆ
ಹಾರೈಸುತ್ತೆವೆ ಖುಷಿ ಖುಷಿಯಿಂದ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!