ಯಾರಿಗೆ ಬೇಕು ಬಸವಣ್ಣ
ಯಾರಿಗೆ ಬೇಕು ಬಸವಣ್ಣ
ಬಣಜಿಗ ಪಂಚಮಸಾಲಿ
ರೆಡ್ಡಿ ನೊಣಬ ಗಾಣಿಗ
ಬಣಕಾರ ನೇಕಾರ ಒಕ್ಕಲಿಗ
ಸಾದು ಲಿಂಗಾಯತರಿಗೆ
ಜಂಗಮ ಆರಾಧ್ಯರಿಗೆ
ಬೇಕಿಲ್ಲ ಬಸವಣ್ಣ
ಬೇಕು ಬಸವಣ್ಣ
ಕಂಬಾರ ಕುಂಬಾರ
ಮಾಳಿ ಕೋಳಿ ಅಗಸ
ಹಡಪದ ನಾವಿಕ ಕಾಯಕ
ಕುರುಬ ಉಪ್ಪಾರ ಈಡಿಗ
ಶ್ರಮಿಕ ಶೋಷಿತ ವರ್ಗಗಳ
ಬಸವಣ್ಣನೆ ನಾಯಕ
ಮಠಗಳಲ್ಲಿ ಬಸವ ಪೂಜೆ
ನಿಜ ಜೀವನದಲ್ಲಿ ಜಾತಿ ಭೇದ
ಪುರೋಹಿತರ ಮಂತ್ರ ದುಡಿಮೆ
ಮೈಗಳ್ಳರ ದೊಡ್ಡ ಉದ್ದಿಮೆ
ಸದ್ದಿಲ್ಲದೇ ನಾವು ಬದುಕಿದೆವು
ಬಸವ ಭಾವ ಪ್ರೇರಣೆ
ಶತಮಾನ ಕಳೆದರು ನಿಲ್ಲದ ಶೋಷಣೆ
ಬೇಕು ಬಸವ ವಿಶ್ವಕೆ
ಜಗದ ಶಾಂತಿ ಪ್ರೀತಿಗೆ
ನ್ಯಾಯ ಸತ್ಯ ಸಮತೆಗೆ
ದುಡಿವ ಕೈ ದಾಸೋಹಕೆ
ಧ್ವನಿ ಇಲ್ಲದೆ ಬದಕುವವಗೆ
ಸಮ ಸಮಾಜ ಕಟ್ಟುವವಗೆ
ಬೇಕು ಬಸವ ಬಾಳಿಗೆ
ಬೇಕು ಬಸವ ನಾಳಿಗೆ
-ಡಾ ಶಶಿಕಾಂತ ಪಟ್ಟಣ ರಾಮದುರ್ಗ